ನವದೆಹಲಿ:ಮಾರಣಾಂತಿಕ ಕರೊನಾ ವೈರಸ್​ ಭೀತಿಯಿಂದಾಗಿ ದೇಶದಲ್ಲಿ ತಾತ್ಕಾಲಿಕ ಬಂದ್​ ವಾತಾವರಣ ನಿರ್ಮಾಣವಾಗಿದೆ. ಶಾಲಾ-ಕಾಲೇಜುಗಳು ಸೇರಿದಂತೆ ಅನೇಕ ಕೇಂದ್ರಗಳು ಸ್ತಬ್ಧವಾಗಿವೆ.
ಈಗಾಗಲೇ ದೇಶದಲ್ಲಿ ಇಬ್ಬರನ್ನು ಬಲಿಪಡೆದುಕೊಂಡಿರುವ ಕರೊನಾಗೆ ಜಾಗತಿಕವಾಗಿ 5 ಸಾವಿರಕ್ಕೂ ಹೆಚ್ಚು ಮಂದಿ ಆಹುತಿಯಾಗಿದ್ದಾರೆ. ಇಂತಹ ಜೀವ ಭಯದ ವಾತವಾರಣದಲ್ಲೂ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿರುವ ವಿಡಿಯೋವೊಂದು ವೈರಲ್​ ಆಗಿದೆ.
“ಜೈ ಕರೊನಾ” ಎಂದು ಘೋಷಣೆ ಕೂಗಿ ದೆಹಲಿಯ ಕರಕೊರಮ್ ಹಾಸ್ಟೆಲ್​ನಲ್ಲಿ ಡ್ಯಾನ್ಸ್​ ಮೂಲಕ ಐಐಟಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಈ ಘಟನೆ ಗುರುವಾರ ರಾತ್ರಿ 8 ಗಂಟೆಗೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ.
ಮಾರ್ಚ್​​ 31ರವರೆಗೂ ಐಐಟಿ ತರಗತಿಗಳನ್ನು ಮತ್ತು ಪರೀಕ್ಷೆಗಳನ್ನು ರದ್ದು ಮಾಡಿರುವ ಖುಷಿಯಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ.
ಕರೊನಾ ವೈರಸ್​ ಪರಿಸ್ಥಿತಿಯನ್ನು ಅವಲೋಕಿಸಿ, ದೆಹಲಿ ಐಐಟಿ ಎಲ್ಲ ತರಗತಿಗಳು, ಪರೀಕ್ಷೆಗಳು ಮತ್ತು ಸಾರ್ವಜನಿಕವಾಗಿ ಒಂದೆಡೆ ಸೇರುವುದನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ. ಈ ಕಳಕಳಿಯನ್ನು ಎಲ್ಲರಿಗೂ ತಿಳಿಸಿ ಎಂದು ಐಐಟಿ ನಿರ್ದೇಶಕ ವಿ. ರಾಮ್​ಗೋಪಾಲ್​ ರಾವ್​ ಅವರು ಗುರುವಾರ ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)
Maut se darr nahi lagtaexam se lagta hai
Students chanting#JaiCoronabecause exams got cancelled
🤦‍♀️🤦‍♀️#CoronavirusPandemic#coronavirusinindia
pic.twitter.com/21igb7FGWa
— Raksha Agarwal (@raksha_ag297)March 12, 2020

ಕರೊನಾ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

VIDEO: ‘ಕರೊನಾ ಭಜನೆ’ ನೀವು ಕೇಳಿದ್ದೀರಾ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಅದ್ಭುತ ಮ್ಯೂಸಿಕ್​ನೊಂದಿಗಿನ ಈ ಹಾಡು ಕಾಮಿಡಿನಾ? ನಾನ್​ಸೆನ್ಸಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + one =
Remember me
