ನವದೆಹಲಿ :ಕರೊನಾದಿಂದಾಗಿ ಲಕ್ಷಾಂತರ ಜನರ ಜೀವನ ಬದಲಾಗಿದೆ. ಮನೆಯಲ್ಲೇ ಬಂಧಿಯಾಗಿರುವ ವಿವಿಧ ವಯಸ್ಸಿನ ಜನರಿಗೆ ಅವರವರದೇ ಬಿಕ್ಕಟ್ಟುಗಳು. ಶಾಲೆಗೆ ಹೋಗಿ ಸಹಪಾಠಿಗಳೊಂದಿಗೆ ಕಲೆತು ವಿದ್ಯೆ ಕಲಿಯುವ ಅವಕಾಶವಿಲ್ಲದೆ, ಮಕ್ಕಳು ಆನ್​ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಿರುವಾಗ ತನ್ನ ಆನ್​ಲೈನ್​ ತರಗತಿಗಳು ದೀರ್ಘಕಾಲ ನಡೆಯುವ ಬಗ್ಗೆ 6 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಅವರಿಗೆ ದೂರಿಟ್ಟಿದ್ದಾಳೆ !
ಹೌದು! ಕಾಶ್ಮೀರದ ಪುಟ್ಟ ಪೋರಿಯೊಬ್ಬಳು ಚಿಕ್ಕ ಮಕ್ಕಳಿಗೆ ದೀರ್ಘಕಾಲ ಆನ್​ಲೈನ್ ತರಗತಿ ನಡೆಸುವ ಅಗತ್ಯ ಏನಿದೆ ಎಂಬ ದೊಡ್ಡ ಪ್ರಶ್ನೆ ಎತ್ತಿದ್ದಾಳೆ. ಈ ಬಗ್ಗೆ ವಿಡಿಯೋ ಮೂಲಕ ಮೋದಿ ಅವರೊಂದಿಗೆ ಅಳಲು ಹಂಚಿಕೊಂಡಿದ್ದಾಳೆ! ಈ ಆರು ವರ್ಷದ ಬಾಲಕಿಯ ಮುದ್ದು ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
A six-year-old Kashmiri girl's complaint to@PMOIndia@narendramodiregarding long hours of online classes and too much of school work.pic.twitter.com/S7P64ubc9H
— Aurangzeb Naqshbandi (@naqshzeb)May 29, 2021

ಔರಂಗ್​ಜೇಬ್​ ನಖ್ಶ್​ಬಂದಿ ಎಂಬ ಪತ್ರಕರ್ತರೊಬ್ಬರು ಎರಡು ದಿನಗಳ ಹಿಂದೆ (ಮೇ 29) ಇದನ್ನು ಟ್ವೀಟ್​ ಮಾಡಿದ್ದು, ಈವರೆಗೆ 82,5000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 8,700 ಲೈಕುಗಳೊಂದಿಗೆ, 2,000 ಕ್ಕೂ ಹೆಚ್ಚು ರೀಟ್ವೀಟ್​ಗಳು, ಕಾಮೆಂಟುಗಳನ್ನು ಪಡೆದುಕೊಂಡಿದೆ. 45 ಸೆಕೆಂಡುಗಳ ಈ ವಿಡಿಯೋ ಕ್ಲಿಪ್​ನಲ್ಲಿ ಬಾಲಕಿಯು ತನಗೆ ಬೆಳಿಗ್ಗೆ ಎದ್ದಾಗಿಂದ ಎಷ್ಟೊಂದು ಓದುವ ‘ಕೆಲಸ’ ಎಂದು ಅಸಮಾಧಾನ ಹೊರಹಾಕಿದ್ದಾಳೆ.
“ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕ್ಲಾಸುಗಳು. ಇಂಗ್ಲೀಷ್​, ಮ್ಯಾತ್ಸ್​, ಉರ್ದು, ಈವಿಎಸ್​ ಆಮೇಲೆ, ಕಂಪ್ಯೂಟರ್ ಸೈನ್ಸ್​. ಮಕ್ಕಳಿಗೆ ಎಷ್ಟೊಂದು ಕೆಲಸ” ಎಂದು ಹಾವಭಾವಗಳೊಂದಿಗೆ ತನ್ನ ಮೇಲಿರುವ ‘ಒತ್ತಡ’ವನ್ನು ಬಣ್ಣಿಸಿದ್ದಾಳೆ. “ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸ ಯಾಕಿರುತ್ತದೆ, ಮೋದಿ ಸಾಹಬ್?” ಎಂದು ಕೇಳುವ ಬಾಲಕಿ, ಕೊನೆಗೆ ನಿಟ್ಟುಸಿರುಬಿಟ್ಟು, ತಾನೇ “ಏನು ಮಾಡೋಕಾಗುತ್ತೆ?!” ಎಂದು, “ಅಸ್ಸಲಾಮಾಲೈಕುಂ ಮೋದಿ ಸಾಹಬ್, ಬಾಯ್​” ಎನ್ನುತ್ತಾಳೆ.(ಏಜೆನ್ಸೀಸ್)
ಕರೊನಾ ರೂಪದಲ್ಲಿ ಎರಗಿದ ದುರದೃಷ್ಟ… ಎರಡನೇ ಬಾರಿ ತಬ್ಬಲಿಯಾದ ಅಂಧ ಬಾಲಕ !

VIDEO | ಕಂಭ ಏರುವ ಮಗುವಿನ ವಿಡಿಯೋ ನೋಡಿದ್ದೀರಾ ?!

ಸ್ಟಾಫ್​ ನರ್ಸ್​ಗಳಿಗೆ ಹೆಚ್ಚುವರಿ 8,000 ರೂ. ಕೋವಿಡ್​ ಭತ್ಯೆ : ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
