ಕೊಲ್ಕತಾ :ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬಿರುಸಿನಿಂದ ಸಾಗಿದೆ. ಆಡಳಿತಾರೂಢ ಟಿಎಂಸಿ ಸರ್ಕಾರವನ್ನು ಮಣಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನದಲ್ಲಿ ಬಿಜೆಪಿಯ ಸ್ಟಾರ್ ಕಾಂಪೇನರ್ ಆಗಿ ಭಾಗವಹಿಸುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ.
ಬಂಗಾಳದ ಕೊಂಟಾಯ್​ನಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ ಮೋದಿ ಅವರು, “ಬಂಗ್ಲಾ ಚಾಯಿ ಬಿಜೆಪಿ ಸರ್ಕಾರ್” (ಬಂಗಾಳಕ್ಕೆ ಬೇಕು ಬಿಜೆಪಿ ಸರ್ಕಾರ ಎಂಬರ್ಥ) ಎಂದು ಘೋಷಣೆ ಕೂಗಿಸಿದರು. ರಾಜ್ಯದ ಅಭಿವೃದ್ಧಿಗಾಗಿ ದುಡಿಯುವ ಬದ್ಧತೆ ಮತ್ತು ಸಂಕಲ್ಪವನ್ನು ಬಿಜೆಪಿ ಹೊಂದಿದೆ ಎಂದು ಸಾರಿದರು. ಮೋದಿ ಅವರ ಭಾಷಣದ ವಿಡಿಯೋ ತುಣುಕು ಇಲ್ಲಿದೆ –
#WATCH| "TMC'er khela sesh hobe, bikash arambho hobe". The development of Bengal is BJP's commitment. We will work very hard for Bengal's future… "Bangla chai, BJP sarkar": PM Narendra Modi in Contai.#WestBengalElections2021pic.twitter.com/rH19kMQsaA— ANI (@ANI)March 24, 2021
#WATCH| "TMC'er khela sesh hobe, bikash arambho hobe". The development of Bengal is BJP's commitment. We will work very hard for Bengal's future… "Bangla chai, BJP sarkar": PM Narendra Modi in Contai.#WestBengalElections2021pic.twitter.com/rH19kMQsaA

ಈ ಸಂದರ್ಭದಲ್ಲಿ, ಟಿಎಂಸಿಯ ಆಟ ಮುಗಿಸಬೇಕೆಂದು ಬಂಗಾಳದ ಸ್ವಾಭಿಮಾನಿ ಮಹಿಳೆಯರು ನಿರ್ಧಾರ ಮಾಡಿದ್ದಾರೆ ಎಂದರು. “ಟಿಎಂಸಿಯೆರ್ ಖೇಲಾ ಶೇಷ್​ ಹೋಬೇ, ಬಿಕಾಶ್ ಆರಂಭೊ ಹೋಬೆ” (ಆಟ ಮುಗಿಯಲಿದೆ, ಇನ್ನು ವಿಕಾಸ ಆರಂಭವಾಗಲಿದೆ ಎಂಬರ್ಥ) ಎಂಬುದು ಜನರ ಆಶಯ ಎಂದು ಬಂಗಾಳಿ ಶಬ್ದಗಳನ್ನು ಆಡಿದ ಮೋದಿ, ಬಿಜೆಪಿಯು ಬಂಗಾಳದ ಭವಿಷ್ಯಕ್ಕಾಗಿ ನಿಷ್ಠೆಯಿಂದ ಶ್ರಮಿಸಲಿದೆ ಎಂದರು.(ಏಜೆನ್ಸೀಸ್)
VIDEO | ವಿಕಿ ಕೌಶಲ್​ರ ಈ ಕೌಶಲ್ಯ ತಪ್ಪದೇ ನೋಡಿ
ಅಬ್ಬಾಜಾನ್​ ಬನ್ನಿ… ಶರಣಾಗಿ… ಶೂಟ್​ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!
ಪೊಲೀಸರಿಗೆ ₹200 ದಂಡ ಕೊಡದೇ ವಕೀಲರಿಗೆ ₹10 ಸಾವಿರ ಫೀಸ್‌ ಕೊಟ್ಟು ಕೇಸ್‌ ಗೆದ್ದ ಉದ್ಯಮಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seven =
Remember me
