ಲಖನೌ:ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಬುಧವಾರದಿಂದ ಆರಂಭವಾಗಿರೋ ಡಿಫೆನ್ಸ್​ ಎಕ್ಸಪೋ 2020ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದೇ ವೇಳೆ ವರ್ಚುವಲ್​ ಫೈರಿಂಗ್​ ಶ್ರೇಣಿಯಲ್ಲಿ ತಮ್ಮ ಶೂಟಿಂಗ್​ ಕೌಶಲವನ್ನು ಪರೀಕ್ಷಿಸುವ ಮೂಲಕ ಎಲ್ಲರ ಗಮನ ಸೆಳೆದರು.
This heavyduty meme material just dropped from#DefExpo2020:pic.twitter.com/Ewm3a75vZl
— Shiv Aroor (@ShivAroor)February 5, 2020

ಅಸಾಲ್ಟ್​ ರೈಫಲ್​ ಹಿಡಿದು ಗುರಿಯೆಡೆಗೆ ಫೈರಿಂಗ್​ ನಡೆಸಿರುವ ಪ್ರಧಾನಿ ಮೋದಿ ಅವರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಅಲ್ಲದೆ, ರಕ್ಷಣಾ ಸಚಿವ ರಜನಾಥ್​ ಸಿಂಗ್​ ಅವರು ಗನ್​ ಹಿಡಿದ ಕ್ಯಾಮರಾಗೆ ಪೋಸ್​ ನೀಡಿರುವ ಫೋಟೋ ಕೂಡ ಸದ್ದು ಮಾಡುತ್ತಿದೆ.
ಐದು ದಿನಗಳ ಡಿಫೆನ್ಸ್​ ಎಕ್ಸ್​ಪೋಗೆ ಇಂದು ಚಾಲನೆ ನೀಡಿದ ಪ್ರಧಾನಿ ಮೋದಿ, ಮುಂದಿನ ಐದು ವರ್ಷಗಳಲ್ಲಿ ಭಾರತವು 5 ಬಿಲಿಯನ್​ ಡಾಲರ್​ ಡಿಫೆನ್ಸ್​ ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದರು.
ಭಾರತಕ್ಕಾಗಿ ಮತ್ತು ವಿಶ್ವಕ್ಕಾಗಿ, ಭಾರತದಲ್ಲೇ ತಯಾರಿಸಿ (ಮೇಕ್​ ಇನ್​ ಇಂಡಿಯಾ) ಎಂಬುದು ನಮ್ಮ ಮಂತ್ರವಾಗಿದೆ. 2014ರಲ್ಲಿ ಭಾರತದಿಂದ 2 ಸಾವಿರ ಕೋಟಿ ಡಿಫೆನ್ಸ್ ರಫ್ತಾಗಿದೆ.​ ಕಳೆದ ಎರಡು ವರ್ಷಗಳಿಂದ ಅದು 17 ಸಾವಿರ ಕೋಟಿಗೆ ಏರಿಕೆಯಾಗಿದೆ. ಮುಂದಿನ 5 ವರ್ಷಗಳಲ್ಲಿ 5 ಬಿಲಿಯನ್​ ಡಾಲರ್​ ತಲುಪಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾರತದಲ್ಲಿನ ಡಿಫೆನ್ಸ್​ ತಯಾರಿಕೆಯಲ್ಲಿ ಅನಿಮಿಯತ ಸಾಧ್ಯತೆಗಳು ಇವೆ. ಪ್ರತಿಭೆಗಳು ಮತ್ತು ತಂತ್ರಜ್ಞಾನವೂ ಇದೆ. ಸಂಶೋಧನೆ ಮತ್ತು ಮೂಲಸೌಕರ್ಯವೂ ಇದೆ. ಅನುಕೂಲಕರ ನೀತಿಗಳು ಮತ್ತು ವಿದೇಶಿ ಬಂಡವಾಳದ ರಕ್ಷಣೆಯು ನಮ್ಮಲ್ಲಿದೆ ಎಂದು ಹೇಳಿದರು.
11ನೇ ಆವೃತ್ತಿಯ ಬಹುದೊಡ್ಡ ಡಿಫೆನ್ಸ್​ ಎಕ್ಸ್​ಪೋ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ “ಡಿಫೆನ್ಸ್​ ತಯಾರಿಕ ಹಬ್​ ಆಗಿ ಉದಯಿಸುತ್ತಿರುವ ಭಾರತ” ಎಂಬ ಥೀಮ್​ನೊಂದಿಗೆ ಆರಂಭವಾಗಿದೆ. ಸುಮಾರು 40 ದೇಶಗಳ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − five =
Remember me
