ನವದೆಹಲಿ :ಇಂದು ಭಾರತ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಎಂ.ಎಸ್​.ಧೋನಿ ಅವರ 40ನೇ ಜನ್ಮದಿನ. ಈ ವಿಶೇಷ ದಿನಕ್ಕೆ ಜಾಲತಾಣದಲ್ಲಿ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಶುಭಾಶಯಗಳ ಹೊಳೆಯನ್ನೇ ಹರಿಸಿದ್ದಾರೆ. ಇಂಟರ್​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್​ ಕೂಡ ಧೋನಿಯವರ ಹುಟ್ಟಿದಹಬ್ಬವನ್ನು ತನ್ನದೇ ಆದ ರೀತಿಯಲ್ಲಿ ಆಚರಿಸಿದೆ.
ಧೋನಿ ನಾಯಕತ್ವದ ಪ್ರಮುಖ ಅಂತರರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳ ಹಲವು ರೋಮಾಂಚಕ ಕ್ಷಣಗಳನ್ನು ಒಟ್ಟುಮಾಡಿ ಸುಮಾರು 5 ನಿಮಿಷಗಳ ವಿಡಿಯೋ ಒಂದನ್ನು ಐಸಿಸಿ ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದೆ. ಧೋನಿಯನ್ನು ‘ಕ್ಯಾಪ್ಟನ್​ ಕೂಲ್​’ ಎಂದು ಕರೆಯುವುದಕ್ಕೆ ಕಾರಣವಿದೆ ಎಂದಿರುವ ಐಸಿಸಿ, ಅವರ ಹುಟ್ಟಿದಹಬ್ಬದ ದಿನ ಅವರು ಬಿಸಿಸಿಐ ಸ್ಕಿಪ್ಪರ್​ ಆಗಿ ತೋರಿದ ಚತುರತೆಗಳನ್ನು ಮೆಲುಕು ಹಾಕಲು ಅವಕಾಶ ಒದಗಿಸಿದೆ.
There’s a reason they call him Captain Cool 😎
On his birthday, relive some of MS Dhoni’s greatest calls as@BCCIskipper 👨‍✈‍pic.twitter.com/8nK5hvTuWM
— ICC (@ICC)July 7, 2021

2007 ಟಿ20 ವರ್ಲ್ಡ್​ ಕಪ್​ ಗೆದ್ದಾಗಿನಿಂದ ಹಿಡಿದು 2011 ರಲ್ಲಿ ವರ್ಲ್ಡ್​ ಕಪ್​ ಗೆದ್ದವರೆಗೆ ನಾಯಕನಾಗಿ ಧೋನಿ ತೆಗೆದುಕೊಂಡ ಅತ್ಯುತ್ತಮ ನಿರ್ಣಯಗಳ, ಮತ್ತು ಅವರ ಒಟ್ಟಾರೆ ಉತ್ಕೃಷ್ಟ ಆಟಗಾರಿಕೆಯ ತುಣುಕುಗಳನ್ನು ಕ್ರೋಢೀಕರಿಸಿರುವ ಈ ವಿಡಿಯೋ, ಕ್ರಿಕೆಟ್​ಪ್ರಿಯರಿಗೆ, ಅದರಲ್ಲೂ ಧೋನಿ ಅಭಿಮಾನಿಗಳಿಗೆ, ದೊಡ್ಡ ಉಡುಗೊರೆಯಾಗಿದೆ.(ಏಜೆನ್ಸೀಸ್)
ಸಿಎಂ ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್​

ಮಾಜಿ ರಣಜಿ ಕ್ರಿಕೆಟಿಗ, ಈಗ ರಸ್ತೆಬದಿ ದಾಲ್​ ಪೂರಿ ಮಾರುತ್ತಿದ್ದಾನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
