ನವದೆಹಲಿ:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗುರುವಾರ ನಡೆದ ಬಹಿರಂಗ ಚರ್ಚೆಯಲ್ಲಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದ ಭಾರತ, ಪಾಕ್​ ಪ್ರತಿನಿಧಿಗಳು ಸ್ವಾರ್ಥಕ್ಕಾಗಿ ಕಳ್ಳಾಟವಾಡುತ್ತಿದ್ದು, ಸುಳ್ಳುಗಳನ್ನು ಪ್ರತಿಪಾದಿಸುತ್ತಾರೆ ಎಂದು ಆರೋಪಿಸಿದೆ.
ಇದಕ್ಕೂ ಮುನ್ನ ಪಾಕಿಸ್ತಾನ ವಿಶ್ವಸಂಸ್ಥೆಯ ರಾಯಭಾರಿ ಮುನೀರ್​ ಅಕ್ರಮ್​ ಅವರು ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವಿಚಾರವನ್ನು ಎಳೆದುತಂದು ಮುಸ್ಲೀಮರನ್ನು ದಮನ ಮಾಡುವ ಭಾರತದ ಮೊದಲ ಹೆಜ್ಜೆ ಇದಾಗಿದೆ ಎಂದು ಜರಿದರು. ಮುಂದುವರಿದು ಭಾರತ, ಪಾಕ್​ ವಿರುದ್ಧ ಮತ್ತೊಂದು ಮಿಲಿಟರಿ ಸಾಹಸಕ್ಕೆ ಕೈಹಾಕಬಹುದು. ಒಂದು ವೇಳೆ ದಾಳಿ ನಡೆದರೆ ಪಾಕಿಸ್ತಾನವು ಕೂಡ ತಕ್ಕ ಉತ್ತರ ನೀಡಲಿದೆ. ಆದರೆ, ನಮಗೆ ಯುದ್ಧ ಬೇಕಾಗಿಲ್ಲ ಎಂದರು.
ಪಾಕ್​ ಮಂಡಿಸಿದ ವಾದವನ್ನು ಭಾರತ ತಿರಸ್ಕರಿಸಿ, ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸೈಯದ್​ ಅಕ್ಬರುದ್ದೀನ್​ ಮಾತನಾಡಿ, ಪಾಕ್​ ತನ್ನ ಒಳಬೇನೆಯನ್ನು ವಾಸಿಮಾಡಿಕೊಳ್ಳಬೇಕಾಗಿದೆ. ನಿಮ್ಮ ಸೋಂಕನ್ನು ಸ್ವೀಕರಿಸಲು ಇಲ್ಲಿ ಯಾರು ಇಲ್ಲ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಭದ್ರತಾ ಮಂಡಳಿಯನ್ನು ಟೀಕಿಸಿದ ಅಕ್ಬರುದ್ದೀನ್​, ಭದ್ರತಾ ಮಂಡಳಿ ಗುರುತು ಮತ್ತು ನ್ಯಾಯಸಮ್ಮತೆಯ ಜತೆಗೆ ಪ್ರಸ್ತುತತೆ ಮತ್ತು ಕಾರ್ಯಕ್ಷಮತೆಯ ಬಿಕ್ಕಟ್ಟು ಎದುರಿಸುತ್ತಿರುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಜಾಗತಿಕ ಮಟ್ಟದ ಉಗ್ರಜಾಲ ತಮ್ಮ ಶಸ್ತ್ರಾಸ್ತ್ರೀಕರಣದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿವೆ. ವಿಧ್ವಂಸಕತೆ ಆಶ್ರಯಿಕೊಂಡಿರುವವರನ್ನು ಎದುರಿಸದೇ ಇರುವುದು ಮಂಡಳಿಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದೆ ಎಂದು ಪಾಕ್​ ಹೆಸರು ಹೇಳದೆ ಮಂಡಳಿಯನ್ನು ಟೀಕಿಸಿದರು.(ಏಜೆನ್ಸೀಸ್​)
No takers for Pakistan’s malware@UNC statementhttps://t.co/pOwGQknmBkpic.twitter.com/gXHjHOrfsY— Syed Akbaruddin (@AkbaruddinIndia)January 10, 2020
No takers for Pakistan’s malware@UNC statementhttps://t.co/pOwGQknmBkpic.twitter.com/gXHjHOrfsY
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
