ನವದೆಹಲಿ :ಸಂಗೀತಾಭ್ಯಾಸ ಮಾಡುತ್ತಿರುವ ತಾಯಿಯೊಂದಿಗೆ ಪುಟ್ಟ ಕೂಸೊಂದು ಆಲಾಪ ಮಾಡಿರುವ ಕ್ಯೂಟ್ ವಿಡಿಯೋ ಒಂದು ಟ್ವಿಟರ್​ನಲ್ಲಿ ಹರಿದಾಡುತ್ತಿದೆ. ಇಂದು ಬೆಳ್ಳಂಬೆಳಿಗ್ಗೆ ಈ ಪುಟ್ಟ ಕಂದಮ್ಮನ ಧ್ವನಿ ನೆಟ್ಟಿಗರಿಗೆ ಆಹ್ಲಾದಕರ ಸ್ವಾಗತ ನೀಡಿದೆ.
ಅರುಣ್ ಬೋತ್ರಾ ಎಂಬುವರು ‘ನಿಮ್ಮ ಬೆಳಿಗ್ಗೆಯನ್ನು ಸುಂದರಗೊಳಿಸಲು ಒಂದು ಸವಿಯಾದ ಜುಗಲ್​ಬಂದಿ’ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಗಾಯಕಿ ಪ್ರಿಯಾಂಕಾ ಬರ್ವೇ ತಮ್ಮ ನಿತ್ಯದ ಹಿಂದೂಸ್ತಾನಿ ಸಂಗೀತದ ರಿಯಾಜ್ ಮಾಡುತ್ತಿದ್ದಾರೆ. ಅವರ ತೊಡೆಯ ಮೇಲೆ ಕುಳಿತಿರುವ ಪುಟಾಣಿ ಯುವಾನ್​ ಅಮ್ಮನ ಸುಮಧುರ ಕಂಠದೊಂದಿಗೆ ತನ್ನ ಪುಟ್ಟ ದನಿಯನ್ನೂ ಕೂಡಿಸುತ್ತಿದ್ದಾನೆ.
A lovely Jugalbandi to make your morning beautiful.
Vidoe via@Raaggiripic.twitter.com/eoloUr3Wsh
— Arun Bothra 🇮🇳 (@arunbothra)March 23, 2021

ಸಂಗೀತ ಎಂಬುದೇ ತುಂಬಾ ಆಕರ್ಷಕ. ಇನ್ನು ಅದರೊಂದಿಗೆ ಮಗುವಿನ ಮುಗ್ಧ ಧ್ವನಿ ಸೇರಿದರೆ ಕೇಳಬೇಕೇ ? ಈ ವಿಡಿಯೋಗೆ 20 ಸಾವಿರಕ್ಕೂ ಹೆಚ್ಚು ಲೈಕ್​ಗಳು ಸಿಕ್ಕಿದ್ದು ನೂರಾರು ಜನರು ರೀಟ್ವೀಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್)
ಸಚಿನ್ ತೆಂಡುಲ್ಕರ್​ ಅವರ ಹೊಸ ವಿಡಿಯೋ ನೋಡಿದ್ದೀರಾ ?!

ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!

ನಿಕಿತಾ ತೋಮರ್ ಹತ್ಯೆ : ಇಬ್ಬರು ಯುವಕರನ್ನು ಅಪರಾಧಿಗಳೆಂದು ಘೋಷಿಸಿದ ಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
