ಬೆಂಗಳೂರು:ಸನ್‌ರೈಸರ್ಸ್ ಹೈದರಾಬಾದ್ 2024 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮೊದಲ ಪಂದ್ಯದಲ್ಲಿ ರೋಮಾಂಚನಕಾರಿ ಪ್ರದರ್ಶನವನ್ನು ನೀಡಿತು. ಈ ಪಂದ್ಯದ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರು ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್​​ ಆಗಿದೆ.
ಮಾರ್ಚ್ 27 ರಂದು ಬುಧವಾರ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ  ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಬೃಹತ್ ಮೊತ್ತ ಕಲೆಹಾಕಿತು. ಸನ್ ರೈಸರ್ಸ್ ಬ್ಯಾಟ್ಸ್ ಮನ್​​ಗಳು ಆರಂಭದಿಂದಲೇ ಸಿಕ್ಸರ್‌ಗಳ ಸುರಿಮಳೆಗೈದರು. ಹೆಡ್ 62, ಅಭಿಷೇಕ್ 63, ಕ್ಲಾಸೆನ್ ಔಟಾಗದೆ 80 ರನ್ ಗಳಿಸಿ ಬೌಂಡರಿಗಳ ಮಳೆಗರೆದರು. ಇದರೊಂದಿಗೆ ಸನ್ ರೈಸರ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ದಾಖಲೆಯ (277) ಸ್ಕೋರ್ ದಾಖಲಿಸಿತು.
https://twitter.com/SivaHarsha_23/status/1773047964740522103
278 ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಮುಂಬೈ ಬ್ಯಾಟ್ಸ್ ಮನ್ ಗಳು ಕೂಡ ಆರಂಭದಿಂದಲೇ ಸಿಕ್ಸರ್ ಹಾಗೂ ಬೌಂಡರಿಗಳ ಸಿಡಿಸಿದರು. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಸಿಕ್ಸರ್ ಗಳ ಮಳೆಗರೆದರು. ಇಶಾನ್ ಕಿಶನ್ 34 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೇ ರೋಹಿತ್ ಶರ್ಮಾ (26 ರನ್) ಕೂಡಾ ಔಟಾದರು. ಇದರೊಂದಿಗೆ ಸನ್ ರೈಸರ್ಸ್ ಗೆಲುವು ಬಹುತೇಕ ಖಚಿತವಾಯಿತು. ಸನ್ ರೈಸರ್ಸ್ ತಂಡದ ಒಡತಿ ಕಾವ್ಯಾ ಮಾರನ್ ಖುಷಿಯಿಂದ ಕುಣಿದಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
https://twitter.com/reaadubey/status/1773044764020998379
ಪಂದ್ಯ ಆರಂಭದಿಂದಲೂ ಕಾವ್ಯಾ ಮಾರನ್ ಖುಷಿಯಿಂದ ಕುಣಿದಾಡುತ್ತಿರುವುದು ಕಂಡು ಬಂತು. ಸನ್ ರೈಸರ್ಸ್ ಬ್ಯಾಟ್ಸ್ ಮನ್​ಗಳು ಬೌಂಡರಿಗಳ ಸುರಿಮಳೆಗೈಯುತ್ತಿದ್ದಂತೆ ಕಾವ್ಯಾ ಕ್ರೀಡಾಂಗಣದ ಸ್ಟ್ಯಾಂಡ್ ನಲ್ಲಿ ಕುಳಿತಿದ್ದರು. ಎಂದಿನಂತೆ ಸನ್ ರೈಸರ್ಸ್ ಪಂದ್ಯವಾದಾಗ ಎಲ್ಲ ಕ್ಯಾಮೆರಾಗಳೂ ಕಾವ್ಯ ಮಾರನ್ ಕಡೆಗೆ ಹೋಗುತ್ತವೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಬ್ಯಾಟ್ಸ್ ಮನ್​​ಗಳು ಮೈದಾನದಲ್ಲಿ ಸಿಕ್ಸರ್ ಬಾರಿಸಿದಾಗಲೆಲ್ಲ ಕ್ಯಾಮೆರಾಗಳೆಲ್ಲ ಕಾವ್ಯಾ ಕಡೆಗೆ ತಿರುಗುತ್ತಿದ್ದವು ಕಂಡು ಬಂತು.
ಎಚ್ಚರ…ಸುಡು ಸುಡು ಬಿಸಿಲಿನಲ್ಲಿ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಲೇಬೇಡಿ…

ಗುಟ್ಟಾಗಿ ದೇವಸ್ಥಾನದಲ್ಲಿ ಮದುವೆಯಾದ ಖ್ಯಾತ ನಟ, ನಟಿ; ಇಬ್ಬರಿಗೂ ಇದು 2ನೇ ಮದುವೆ

ಸಿನಿಮಾ ಶೂಟಿಂಗ್ ಎಂದು ಸುಳ್ಳು ಹೇಳಿ ಮದುವೆಯಾದ ಸಿದ್ಧಾರ್ಥ್ ಜೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
