ನವದೆಹಲಿ:ಉತ್ತರ ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ನಗರೀಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಗಳು ಸೇರಿದಂತೆ ವನ್ಯಜೀವಿಗಳು ತಮ್ಮ ಬೌಂಡರಿಯನ್ನು ದಾಟಿ ಮಾನವ ವಸತಿ ಪ್ರದೇಶಕ್ಕೆ ದಾಂಗುಡಿ ಇಡುತ್ತಿವೆ. ಅರಣ್ಯ ನಾಶದಂತಹ ಮಾನವನ ದುರಾಸೆಯಿಂದಾಗಿ ಮಾನವ-ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.
ಇಬ್ಬರು ಇಂಡೋ-ಟಿಬೆಟನ್​ ಬಾರ್ಡರ್​ ಪೊಲೀಸ್​ ಸಿಬ್ಬಂದಿ ಕರಡಿಯ ವೇಷ ಧರಿಸಿ ಉತ್ತರಖಂಡದ ಮಿರ್ಥಿ ಶಿಬಿರದ ಬಳಿಗೆ ಗುಂಪಾಗಿ ಬಂದಿದ್ದ ಮಂಗಗಳನ್ನು ಹಿಮ್ಮೆಟ್ಟಿಸಿದ್ದಾರೆ. ಕರಡಿ ವೇಷ ಧರಿಸಿದ್ದ ಐಟಿಬಿಪಿ ಸಿಬ್ಬಂದಿ ನೋಡಿದ ಮಂಗಗಳು ಎದ್ನೋ ಬಿದ್ನೋ ಎಂದು ಐಟಿಬಿಪಿ ಶಿಬಿರದಿಂದ ಕಾಲ್ಕಿತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಜಾಲತಾಣದಲ್ಲಿ ವಿಡಿಯೋ ಶೇರ್​ ಆದಾಗಿನಿಂದ ಈವರೆಗೂ 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 800ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ನೋಡಿದವರಂತೂ ನಗುವಿನ ಅಲೆಯಲ್ಲಿ ತೇಲಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋಗೆ ಹಿನ್ನೆಲೆ ಧ್ವನಿ ಇದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಭಾರತೀಯ ಜನತಾ ಪಾರ್ಟಿ ಅಭಿಮಾನಿಗಳ ಟ್ವಿಟರ್​ ಪೇಜ್​ನಲ್ಲಿ ಕಾಮೆಂಟ್ ಮಾಡಲಾಗಿದೆ​. ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದೆ ಸುರಕ್ಷಿತವಾಗಿ ಅವುಗಳನ್ನು ತೆರುವುಗೊಳಿಸಿದ್ದಕ್ಕೆ ಸಿಬ್ಬಂದಿಯನ್ನು ಮತ್ತೋರ್ವ ನೆಟ್ಟಿಗ ಮೆಚ್ಚಿಕೊಂಡಿದ್ದಾರೆ.(ಏಜೆನ್ಸೀಸ್​)
#WATCH: 2 Indo-Tibetan Border Police personnel at ITBP Camp-Mirthi, Uttarakhand dressed in 'bear' costume to scare away monkeys on the premises. (Source-ITBP)pic.twitter.com/YeZXaXAgze
— ANI (@ANI)March 9, 2020

that background music makes it even more entertaining
— Fans of BJP (@BJP4Life)March 9, 2020

VIDEO| ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಗ್ರಾಮಕ್ಕೆ ಬಂದ ಸಿಂಹ, ಮುಂದೆ ಏನಾಯಿತು?

VIDEO: ಜಪಾನಿನಲ್ಲಿ 25 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಟ್ರಕ್​ ಡ್ರೈವರ್​ನ ಪ್ರವರ ಇದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
