ನವದೆಹಲಿ :‘ಯೋಗ ಫಾರ್​ ವೆಲ್​ನೆಸ್​’ ಎಂಬ ಥೀಮ್​ ಹೊಂದಿದ 7ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಇಂದು ಮುಂಜಾನೆ ಭಾರತದ ಹಲವೆಡೆ ಸಾಮೂಹಿಕವಾಗಿ ಯೋಗಾಸನ ಮಾಡಿ ಸಾಂದರ್ಭಿಕ ಆಚರಣೆ ನಡೆಯಿತು. ಹಲವು ಗಣ್ಯರು ಮತ್ತು ಜನಸಾಮಾನ್ಯರು ಪಾರ್ಕ್​ ಮತ್ತು ಮೈದಾನದಂಥ ತೆರೆದ ಪ್ರದೇಶಗಳಲ್ಲಿ ಯೋಗಾಭ್ಯಾಸದಲ್ಲಿ ಭಾಗವಹಿಸಿದರು.
ಕರೊನಾ ಹಿನ್ನೆಲೆಯಲ್ಲಿ ಮತ್ತೆ ಹಲವರು ಮನೆಯಲ್ಲೇ ಯೋಗಾಸನಗಳನ್ನು ಮಾಡಿದ್ದಾರೆ. ಸೆಲೆಬ್ರಿಟಿಗಳು ಯೋಗಾಸನ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರೂ ರಾಷ್ಟ್ರಪತಿ ಭವನದ ಆವರಣದಲ್ಲಿ ಯೋಗಾಸನ ಮಾಡುತ್ತಿರುವ ಚಿತ್ರವನ್ನು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೇನೆಯ ವಿವಿಧ ಬಟಾಲಿಯನ್​ಗಳ ಸಿಪಾಯಿಗಳು ತಂತಮ್ಮ ಕಾರ್ಯಸ್ಥಳಗಳಲ್ಲೇ ಯೋಗ ದಿನವನ್ನು ಆಚರಿಸಿದರು. ಇಂಡೋ-ಟಿಬೆಟನ್ ಬಾರ್ಡರ್​ ಪೊಲೀಸ್​(ಐಟಿಬಿಪಿ) ಸಿಬ್ಬಂದಿ ಲಡಾಖ್​ನಲ್ಲಿ 18,000 ಅಡಿ ಎತ್ತರದಲ್ಲಿ ಗುಂಪಾಗಿ ಸೂರ್ಯನಮಸ್ಕಾರ ಮಾಡಿದ ವಿಡಿಯೋ ನೋಡಿ –
#WATCH| ITBP (Indo-Tibetan Border Police) personnel perform Yoga at an altitude of 18,000 ft in Ladakh, on#InternationalDayOfYogapic.twitter.com/nszW0LpdyY— ANI (@ANI)June 21, 2021
#WATCH| ITBP (Indo-Tibetan Border Police) personnel perform Yoga at an altitude of 18,000 ft in Ladakh, on#InternationalDayOfYogapic.twitter.com/nszW0LpdyY
ಯೋಗ ದಿನದ ಸಂದರ್ಭಕ್ಕೆ ರಾಷ್ಟ್ರವನ್ನು ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಗತ್ತು ಕರೊನಾ ಸಾಂಕ್ರಾಮಿಕದೊಂದಿಗೆ ಹೋರಾಡುತ್ತಿರುವ ಈ ಸಮಯದಲ್ಲಿ, ಯೋಗವು ಒಂದು ಆಶಾಕಿರಣವಾಗಿದೆ ಎಂದಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳ ಉಸಿರಾಟ ವ್ಯವಸ್ಥೆಯನ್ನು ಬಲಪಡಿಸಲು ವೈದ್ಯರು ಮತ್ತು ದಾದಿಯರು ಅನುಲೋಮ ವಿಲೋಮ ಪ್ರಾಣಾಯಾಮವನ್ನು ಅಭ್ಯಾಸ ಮಾಡಿಸಿದ್ದಾರೆ ಎಂದಿದ್ದಾರೆ.(ಏಜೆನ್ಸೀಸ್)
ಸೊಪ್ಪು-ತರಕಾರಿ ಒದ್ದು ದರ್ಪ ಮೆರೆದ ಪಿಎಸ್​ಐ ಸಸ್ಪೆಂಡ್
ಬಿಎಂಟಿಸಿ ಪಾಸ್​ದಾರರಿಗೆ ಗುಡ್ ನ್ಯೂಸ್! ಏಪ್ರಿಲ್​ ಪಾಸ್​ ಈಗ ಬಳಸಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + sixteen =
Remember me
