ನವದೆಹಲಿ:ಜಲಕ್ಷಾಮ ಎದುರಿಸುತ್ತಿರುವ ಜಾಗತಿಕ ನಗರ ಜನಸಂಖ್ಯೆ 2050ರ ವೇಳೆಗೆ ಭಾರಿ ಏರಿಕೆಯಾಗುವ ಸಾಧ್ಯತೆ ಇದ್ದು, ಈ ಸಮಸ್ಯೆ ಭಾರತಕ್ಕೆ ಅತ್ಯಂತ ತೀವ್ರವಾಗಿ ಬಾಧಿಸಲಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ವಿಶ್ವಸಂಸ್ಥೆಯ ವಿಶ್ವ ಜಲ ಅಭಿವೃದ್ಧಿ ವರದಿ 2023ರಲ್ಲಿ ಈ ಅಂಶ ಉಲ್ಲೇಖ ಮಾಡಲಾಗಿದೆ. ನೀರಿನ ಕೊರತೆ ಎದುರಿಸುತ್ತಿರುವ ಸುಮಾರು 80% ಜನರು ಏಷ್ಯಾದಲ್ಲಿ ವಾಸಿಸುತ್ತಿದ್ದಾರೆ. ಈಶಾನ್ಯ ಚೀನಾ, ಭಾರತ ಮತ್ತು ಪಾಕಿಸ್ತಾನದಲ್ಲಿ ಜಲಕ್ಷಾಮ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ನೀರಿನ ಅಭಾವ ಎದುರಿಸುತ್ತಿರುವ ಜಾಗತಿಕ ನಗರಗಳಲ್ಲಿನ ಜನಸಂಖ್ಯೆ 2016ರಲ್ಲಿ 933 ಮಿಲಿಯನ್ ಇತ್ತು. ಇದು ಜಾಗತಿಕ ನಗರ ಜನಸಂಖ್ಯೆಯ ಮೂರನೇ ಒಂದು ಭಾಗವಾಗಿತ್ತು. ಆದರೆ 2050ರಲ್ಲಿ ಇದು 2.4 ಬಿಲಿಯನ್​ಗೆ ಏರಿಕೆ ಆಗುವ ಸಾಧ್ಯತೆ ಇದೆ. ಇದು ಜಾಗತಿಕ ನಗರ ಜನಸಂಖ್ಯೆಯ ಸುಮಾರು ಅರ್ಧದಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ. ಭಾರತವು ಅತ್ಯಂತ ತೀವ್ರವಾಗಿ ಇದರ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ವರದಿಯ ಪ್ರಧಾನ ಸಂಪಾದಕ ರಿಚರ್ಡ್ ಕಾನರ್, ಮುಂದಿನ ದಿನಗಳಲ್ಲಿ ಜಾಗತಿಕ ಬಿಕ್ಕಟ್ಟು ಎದುರಾಗಲಿದೆ. ಕಡಿಮೆ ಲಭ್ಯತೆ ಮತ್ತು ಬೇಡಿಕೆ ಹೆಚ್ಚಳ ಕಾರಣ ಅಭಾವ ನಿಶ್ಚಿತವಾಗಿದೆ. ನಗರ, ಕೈಗಾರಿಕಾ ಬೆಳವಣಿಗೆ, ಕೃಷಿ ಕ್ಷೇತ್ರದಲ್ಲಿ ವಿಶ್ವದ ಶೇ. 70 ನೀರು ಬಳಸಲಾಗುತ್ತಿದೆ ಎಂದಿದ್ದಾರೆ.
ಜಾಗತಿಕ ನೀರಿನ ಬಿಕ್ಕಟ್ಟು ಸಮಸ್ಯೆಯಿಂದ ಹೊರಬರಲು ಬಲವಾದ ಅಂತರ ರಾಷ್ಟ್ರೀಯ ಕಾರ್ಯವಿಧಾನ ಸ್ಥಾಪಿಸುವ ತುರ್ತು ಅಗತ್ಯವಿದೆ ಎಂದು ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ ಹೇಳಿದ್ದಾರೆ. ನೀರು ನಮ್ಮ ಭವಿಷ್ಯ. ಅದನ್ನು ಸಮನಾಗಿ ಹಂಚಿಕೊಳ್ಳಲು ಮತ್ತು ಸಮರ್ಥವಾಗಿ ನಿರ್ವಹಿಸಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವುದು ಅಗತ್ಯ. ಜಾಗತಿಕವಾಗಿ ಎರಡು ಶತಕೋಟಿ ಜನರಿಗೆ ಸುರಕ್ಷಿತ ಕುಡಿಯುವ ನೀರು ಸಿಗುತ್ತಿಲ್ಲ. 3.6 ಶತಕೋಟಿ ಜನರಿಗೆ ಸುರಕ್ಷಿತವಾದ ನೈರ್ಮಲ್ಯ ಪ್ರವೇಶ ಲಭ್ಯವಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 8 =
Remember me
