ತಿರುವನಂತಪುರಂ:ಕಲ್ಲಂಗಡಿ ಹಣ್ಣು ಬಹುತೇಕರಿಗೆ ಪ್ರಿಯವಾದ ಹಣ್ಣು. ಬೇಸಿಗೆ ಕಾಲದಲ್ಲಂತೂ ಈ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ತುಂಬಾ ಸಿಹಿಯಾದ ಕಲ್ಲಂಗಡಿ ಹಣ್ಣು ಸ್ಫೋಟವಾಗುತ್ತದೆ ಎಂದರೆ ನೀವು ನಂಬುತ್ತೀರಾ? ಅದು ಹೇಗೆ ಸಾಧ್ಯ ಅಂತಾ ಮರು ಪ್ರಶ್ನೆ ಮಾಡೇ ಮಾಡುತ್ತೀರಿ. ಆದರೆ, ಕೇರಳದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ.
ಹೌದು, ಅಂಗಡಿಯಿಂದ ಖರೀದಿಸಿ ಮನೆಗೆ ತಂದ ಕಲ್ಲಂಗಡಿ ಹಣ್ಣು ಸ್ಫೋಟಿಸಿದೆ. ಈ ಘಟನೆ ಕೇರಳದ ಪೊನ್ನನಿಯ ನಸ್ರುದ್ದೀನ್ ಎಂಬುವರ​ ಮನೆಯ ಅಡುಗೆ ಕೋಣೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಹತ್ತಿರದ ಎಂಇಎಸ್​ ಕಾಲೇಜಿನಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ತರಲಾಗಿತ್ತು. ಅಡುಗೆ ಮನೆಯಲ್ಲಿ ಸ್ಫೋಟಗೊಂಡ ಶಬ್ಧ ಕೇಳಿ ಬೆಚ್ಚಿಬಿದ್ದ ಅಕ್ಕಪಕ್ಕದ ಮನೆಯವರು ಓಡಿ ಬಂದು ನೋಡಲು, ಕಲ್ಲಂಗಡಿ ಹಣ್ಣು ಛಿದ್ರಗೊಂಡಿತ್ತು. ಅಲ್ಲದೆ, ನೆಲದ ಮೇಲೆ ಅಲ್ಲಲ್ಲಿ ಕೊಳಕು ವಾಸನೆಯೊಂದಿಗೆ ಕಲ್ಲಂಗಡಿ ಹಣ್ಣಿನ ತುಂಡುಗಳು ಬಿದ್ದಿದ್ದವು.
ಮಾಹಿತಿ ತಿಳಿದು ಆರೋಗ್ಯ ಇಲಾಖೆ ಮತ್ತು ಮುನ್ಸಿಪಾಲಿಟಿಯ ಆಹಾರ ಸುರಕ್ಷತಾ ಅಧಿಕಾರಿಗಳು ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಹಣ್ಣನ್ನು ಖರೀದಿ ಮಾಡಿದ ಅಂಗಡಿಗೆ ತೆರಳಿ ಹಣ್ಣಿನ ಸ್ಯಾಂಪಲ್​ ಪಡೆದು ಪರೀಕ್ಷೆಗೆಂದು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಪರೀಕ್ಷೆ ಮಾಡಿದ ಬಳಿಕ ಸ್ಫೋಟಕ್ಕೆ ಕಾರಣ ಏನೆಂದು ತಿಳಿದುಬರಲಿದೆ.
ತಜ್ಞರು ಹೇಳೋದೇನು?ಅಮೆರಿಕದಲ್ಲಿ ಪ್ರತಿ ವರ್ಷ 5.1 ಬಿಲಿಯನ್ ಪೌಂಡ್ ಕಲ್ಲಂಗಡಿ ಹಣ್ಣು ತಿನ್ನುತ್ತಾರೆ. ಆದರೆ, ಪ್ರತಿ ವರ್ಷವೂ ಕಲ್ಲಂಗಡಿ ಸ್ಫೋಟದಂತಹ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಸಾಕಷ್ಟು ಉದಾಹರಣೆಗಳು ಇವೆ. ಆದರೆ, ಕಲ್ಲಂಗಡಿ ಹಣ್ಣು ಯಾಕೆ ಸ್ಫೋಟಿಸುತ್ತದೆ ಎಂಬ ಪ್ರಶ್ನೆಗೆ ನ್ಯೂಯಾರ್ಕ್​ನ ನ್ಯೂಟ್ರಿಷನ್ ಗ್ರೂಪ್​ನ ಸಿಇಒ ಲಿಸಾ ಮಾಸ್ಕೋಯಿಟ್ಜ್ ಇನ್​ಸೈಡ್​ ಎಡಿಸನ್​ ಎಂಬ ಮಾಧ್ಯಮಕ್ಕೆ ವಿವರಿಸಿದ್ದಾರೆ. ತೀವ್ರವಾದ ಶಾಖವು ಕಲ್ಲಂಗಡಿ ಹಣ್ಣುಗಳ ಒಳಗೆ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಬ್ಯಾಕ್ಟೀರಿಯಾವು ಕಲ್ಲಂಗಡಿಯಲ್ಲಿರುವ ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುತ್ತದೆ, ಇದು ಕಾರ್ಬನ್ ಡೈಆಕ್ಸೈಡ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಗಾಳಿಯ ಒತ್ತಡ ನಿರ್ಮಾಣವಾಗಿ, ಕಲ್ಲಂಗಡಿ ಸ್ಫೋಟಿಸುತ್ತದೆ ಎಂದು ಲಿಸಾ ಮಾಸ್ಕೋಯಿಟ್ಜ್ ತಿಳಿಸಿದ್ದಾರೆ. ಕೇರಳ ಪ್ರಕರಣದಲ್ಲೂ ಇದೇ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)
ಆರ್​ಸಿಬಿಗೆ ಬಿಗ್​ಶಾಕ್​! ಮಿಲಿಯನ್​ ಡಾಲರ್​ ಪ್ರಶ್ನೆಯಾದ ಕೊಹ್ಲಿ, ಏನಿದು ಬ್ರೋ ಎಂದ ಅಭಿಮಾನಿಗಳು

ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + fourteen =
Remember me
