ಕೇರಳ:ನಿರಂತರ ಸುರಿದ ಮಳೆಗೆ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 200ಕ್ಕೂ ಅಧಿಕ ಎಂದು ಹೇಳಲಾಗಿದೆ. ನೂರಾರು ಮಂದಿ ಇನ್ನೂ ಮಣ್ಣು ಹಾಗೂ ಅವಷೇಶಗಳಡಿ ಸಿಲುಕಿರುವ ಶಂಕೆ ಇದೆ. ವರದಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಒಂದೇ ಕುಟುಂಬದ ಹಲವರು ದುರಂತ ಸಾವು ಕಂಡಿದ್ದಾರೆ. ಮೃತರ ದೇಹ ಹೊರತೆಗೆಯಲು ರಕ್ಷಣಾ ಪಡೆ ನಿರಂತರವಾಗಿ ಶ್ರಮಿಸುತ್ತಿದೆ. ಈಗಾಗಲೇ 1000ಕ್ಕೂ ಹೆಚ್ಚು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿರುವ ರಕ್ಷಣಾ ಪಡೆ, ಇನ್ನು ಹಲವರಿಗಾಗಿ ಶೋಧ ಕಾರ್ಯ ಮುಂದುವರೆಸಿದೆ.
ಇದನ್ನೂ ಓದಿ:ಯಾವುದು ನನ್ನ ಕೈಯಲ್ಲಿಲ್ಲ… ಐಪಿಎಲ್​ ನಿವೃತ್ತಿ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಕ್ಯಾಪ್ಟನ್ ಕೂಲ್
ಕೇರಳದ ಇತಿಹಾಸದಲ್ಲಿ ನಡೆದ ಭೀಕರ ದುರಂತ ಇದಾಗಿದ್ದು, ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಮುಂದಿನ ನಡೆಯೇನು? ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ನಾವು ನಿಲ್ಲಬೇಕು, ಅವರ ಸಹಾಯಕ್ಕೆ ಕೈಜೋಡಿಸಬೇಕು ಎಂದು ನಿರ್ಧರಿಸಿ ಇದೀಗ ಟಾಲಿವುಡ್​, ಕಾಲಿವುಡ್​ ಚಿತ್ರರಂಗದ ನಟ-ನಟಿಯರು ಧನ ಸಹಾಯ ಮಾಡಿದ್ದಾರೆ. ಕೇರಳದ ಸಿಎಂ ರಿಲೀಫ್​ ಫಂಡ್​ಗೆ ಹಣ ಕಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭೂದುರಂತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ತಮಿಳು ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ 50 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ನಟ ಕಾರ್ತಿ ಕೂಡ 50 ಲಕ್ಷ ಕೊಟ್ಟಿದ್ದಾರೆ. ವಿಕ್ರಮ್​ 20 ಲಕ್ಷ ರೂ. ನೀಡಿದರೆ, ನಟಿ ರಶ್ಮಿಕಾ ಮಂದಣ್ಣ 10 ಲಕ್ಷ ರೂ. ಮೊತ್ತವನ್ನು ಸಿಎಂ ರಿಲೀಫ್ ಫಂಡ್​ಗೆ ದೇಣಿಗೆಯಾಗಿ ನೀಡಿದ್ದಾರೆ. ದುರಂತದಲ್ಲಿ 250ಕ್ಕೂ ಹೆಚ್ಚು ಜನರ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಹಲವಾರು ಜನರು ಮಣ್ಣಿನಡಿಯಲ್ಲಿ ಸಿಲುಕಿ, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ,(ಏಜೆನ್ಸೀಸ್).
ಟೀಮ್ ಇಂಡಿಯಾಗೆ ಸಿಕ್ಕರು ಹೊಸ ಸಚಿನ್​, ಸೆಹ್ವಾಗ್​ ಮತ್ತು ಯುವರಾಜ್​! ಯಾರು ಆ 3 ಸ್ಟಾರ್​ ಆಟಗಾರರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 3 =
Remember me
