ವಯನಾಡು:ದೇವರ ನಾಡು ಕೇರಳದ ವಯನಾಡಿನಲ್ಲಿ ಮಂಗಳವಾರ (ಜುಲೈ 30) ಭಾರಿ ಮಳೆಗೆ ಸಂಭವಿಸಿದ ಬೃಹತ್​ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರತ್ತಲೇ ಇದೆ. ಸಾವಿನ ಸಂಖ್ಯೆ ಶುಕ್ರವಾರ ಬೆಳಗ್ಗೆ ಹೊತ್ತಿಗೆ 308ಕ್ಕೆ ಏರಿಕೆಯಾಗಿದ್ದು, ಇನ್ನೂ ಮಣ್ಣಿನಡಿ ಹಾಗೂ ಕಟ್ಟಡಗಳಲ್ಲಿ ಸಿಲುಕಿರುವ ಹಾಗೂ ಬದುಕುಳಿದಿರುವವರ ಪತ್ತೆಗಾಗಿ ನಿರಂತರವಾಗಿ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ.
ಭೂಕುಸಿತದಿಂದ ರಸ್ತೆಗಳು ಮತ್ತು ಸೇತುವೆಗಳು ಸಂಪೂರ್ಣ ನಾಶವಾಗಿದ್ದು, ಸಾಧನ-ಸಲಕರಣೆಗಳ ಸಾಕಷ್ಟು ಕೊರತೆಗಳಿಂದಾಗಿ ರಕ್ಷಣಾ ಪ್ರಯತ್ನಕ್ಕೆ ಅಡ್ಡಿಯಾಗಿದೆ. ಬೇರುಸಹಿತ ಮರಗಳನ್ನು ತೆರವುಗೊಳಿಸಲು ಹಾಗೂ ಮನೆಗಳು ಮತ್ತು ಇತರ ಕಟ್ಟಡಗಳ ಮೇಲಿನ ಮಣ್ಣುಗಳನ್ನು ತೆಗೆಯಲು ತುರ್ತು ಸಿಬ್ಬಂದಿಗೆ ತುಂಬಾ ಕಷ್ಟವಾಗಿದೆ. ಅಲ್ಲದೆ, ರಕ್ಷಣಾ ಪ್ರಯತ್ನದ ನಡುವೆಯೇ ಸುಮಾರು 200 ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯನ್ನು ಒಳಗೊಂಡ ಜಂಟಿ ತಂಡವು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಪ್ರತಿ ರಕ್ಷಣಾ ತಂಡವೂ ಮೂವರು ಸ್ಥಳೀಯರು ಹಾಗೂ ಒಬ್ಬರು ಅರಣ್ಯ ಇಲಾಖೆ ನೌಕರನನ್ನೂ ಒಳಗೊಂಡಿದೆ.
ಇನ್ನು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ರಕ್ಷಣಾ ಸಿಬ್ಬಂದಿಯ ನಲವತ್ತು ತಂಡಗಳು ಭೂಕುಸಿತ ಶೋಧ ಪ್ರದೇಶಗಳನ್ನು ಆರು ವಲಯಗಳಾಗಿ ವಿಂಗಡಿಸಿವೆ. ಮೊದಲ ವಲಯವು ಅಟ್ಟಮಲ ಮತ್ತು ಆರನ್ಮಲಗಳನ್ನು ಒಳಗೊಂಡಿದೆ. ಮುಂಡಕ್ಕೈ ಎರಡನೇ ವಲಯ, ಪುಂಜಿರಿಮಟ್ಟಂ ಮೂರನೇ ವಲಯ, ವೆಳ್ಳರ್ಮಲಾ ಗ್ರಾಮ ರಸ್ತೆ ನಾಲ್ಕನೇ ವಲಯ, ಜಿವಿಎಚ್‌ಎಸ್‌ಎಸ್ ವೆಳ್ಳರ್ಮಲ ಐದನೇ ವಲಯ ಮತ್ತು ಚಾಲಿಯಾರ್ ನದಿಯ ಕೆಳಭಾಗದ ಆರನೇ ವಲಯವಾಗಿದೆ.
ನದಿಯ ಸುತ್ತಮುತ್ತಲಿನ ಎಂಟು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಮತ್ತು ಈಜು ಪರಿಣಿತ ಸ್ಥಳೀಯರು ಕೂಡ ಶೋಧ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಹೆಲಿಕಾಪ್ಟರ್ ಬಳಸಿ ಕೂಡ ಶೋಧ ಕಾರ್ಯ ನಡೆಸಲಾಗುತ್ತದೆ. ಬದುಕುಳಿದವರ ಹುಡುಕಾಟಕ್ಕೆ ದೆಹಲಿಯಿಂದ ಡ್ರೋನ್ ಆಧಾರಿತ ರಾಡಾರ್ ಶನಿವಾರ ಸ್ಥಳಕ್ಕೆ ಆಗಮಿಸಲಿದೆ. ಕೋಸ್ಟ್ ಗಾರ್ಡ್, ನೌಕಾಪಡೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚಾಲಿಯಾರ್ ನದಿಯ ದಡದಲ್ಲಿ ಮತ್ತು ಮೃತದೇಹಗಳು ಕೊಚ್ಚಿಹೋಗಿರುವ ಸ್ಥಳಗಳಲ್ಲಿ ಶೋಧ ನಡೆಸಲಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಇತರ ಆರು ಶ್ವಾನಗಳನ್ನು ಸೇರಲು ತಮಿಳುನಾಡಿನಿಂದ ಇನ್ನೂ ನಾಲ್ಕು ನಾಯಿಗಳನ್ನು ಇಂದು ವಯನಾಡಿಗೆ ತರಲಾಗುತ್ತದೆ.
ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ವಯನಾಡಿಗೆ ಆಗಮಿಸಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಪರಿಹಾರ ಕಾರ್ಯಗಳಿಗಾಗಿ ಶುಕ್ರವಾರ ತಮ್ಮ ಪಕ್ಷದ ಮುಖಂಡರನ್ನು ಭೇಟಿಯಾಗಲಿದ್ದಾರೆ. ರಾಹುಲ್​ ಮತ್ತು ಪ್ರಿಯಾಂಕಾ ಮೆಪ್ಪಾಡಿ ಗ್ರಾಮ ಪಂಚಾಯತ್‌ನ ನಿಯೋಗವನ್ನು ಭೇಟಿ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ಜಿಲ್ಲಾಡಳಿತ ಘಟನೆಯ ಬಗ್ಗೆ ವಿವರಣೆಯನ್ನು ನೀಡಲಿದೆ.
ರಾಹುಲ್​ ಮತ್ತು ಪ್ರಿಯಾಂಕಾ ಗುರುವಾರ ಭೂಕುಸಿತ ಸಂತ್ರಸ್ತರನ್ನು ಭೇಟಿ ಮಾಡಿದ್ದು, ಇಂದು ಮುಂಡಕ್ಕೈ ಮತ್ತು ಚೂರಲ್ಮಲಾ ಅರಣ್ಯ ಕಚೇರಿಗೆ ಭೇಟಿ ನೀಡಲಿದ್ದಾರೆ. ಈ ಎರಡೂ ಸ್ಥಳಗಳು ಭೂಕುಸಿತದಿಂದ ಭಾರೀ ಹಾನಿಗೊಳಗಾಗಿವೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ವಯನಾಡಿನಲ್ಲಿ ಭೂಕುಸಿತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ರಕ್ಷಣಾ ಕಾರ್ಯದ ವೇಳೆ 200ಕ್ಕೂ ಹೆಚ್ಚು ಜನರು ಗಾಯಗೊಂಡರು ಕೂಡ ಸೇನೆ ಮತ್ತು ಇತರ ಅಧಿಕಾರಿಗಳು ಸುಮಾರು 1,000 ಜನರನ್ನು ರಕ್ಷಿಸಿದ್ದಾರೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಭಾರತ ಹವಾಮಾನ ಇಲಾಖೆ (IMD) ಮುಂದಿನ ಎರಡು ದಿನಗಳಲ್ಲಿ ವಯನಾಡು ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ. ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ.(ಏಜೆನ್ಸೀಸ್​)
ಮೀಮ್​ಗಳಲ್ಲಿ ಕಾಣಿಸಿಕೊಳ್ಳುವ ಈಕೆ​ ಯಾರು ಗೊತ್ತಾ? ಕಿರುಚುತ್ತಾ ಹಾಡುವುದೇಕೆ? ಇಲ್ಲಿದೆ ಅಚ್ಚರಿ ಕಾರಣ…

ಸೂರ್ಯಕುಮಾರ್​, ರಿಂಕು ರೀತಿ ಮತ್ತೊಬ್ಬ ಬ್ಯಾಟರ್​ನನ್ನು ಬೌಲರ್​ ಆಗಿ ಬದಲಾಯಿಸಿದ ಗೌತಮ್​ ಗಂಭೀರ್​!​

ಯಾವಾಗಲೂ ಸೀರಿಯಸ್​ ಆಗಿರುತ್ತಿದ್ದ ಗಂಭೀರ್​​ ಈ ಪರಿ ನಗಲು ಕಾರಣ ಯಾರು ಗೊತ್ತಾ? ನಿಜಕ್ಕೂ ಅಚ್ಚರಿಪಡ್ತೀರಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four − 1 =
Remember me
