ವಯನಾಡು:ಭೂಕುಸಿತದಿಂದ 200ಕ್ಕೂ ಹೆಚ್ಚು ಜನರು ಮೃತಪಟ್ಟು ಜನಜೀವನ ಆಘಾತಕ್ಕೀಡಾದ ಕೇರಳದ ವಯನಾಡು ಜಿಲ್ಲೆ ಶುಕ್ರವಾರ ಬೆಳಗ್ಗೆ ಭೂಮಿಯೊಳಗಿಂದ ಬಂದ ನಿಗೂಢ ಶಬ್ದದಿಂದ ಬೆಚ್ಚಿ ಬಿದ್ದಿದೆ. ಭೂಗತ ಸದ್ದು ಹಾಗೂ ಅದರ ಪ್ರತಿಧ್ವನಿಯಿಂದಾಗಿ ಜನರು ಹಾಗೂ ಅಧಿಕಾರಿಗಳಲ್ಲಿ ಆತಂಕ ಉಂಟಾಯಿತು. ಸದ್ದಿನಿಂದ ಸಂತ್ರಸ್ತವಾದ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ತಿಳಿಸಿದ್ದಾರೆ.
ನೆನ್ಮೇನಿ, ಅಂಬಲವಯಲ್ ಗ್ರಾಮ ಮತ್ತು ವೈಥಿರಿ ತಾಲೂಕಿನಲ್ಲಿ ಬೂಮಿಂಗ್ ಶಬ್ದ ಮತ್ತು ಪ್ರತಿಧ್ವನಿಯ ಅನುಭವವಾಯಿತು. ಬೆಳಗ್ಗೆ 10.15ರ ಸುಮಾರಿಗೆ ಸದ್ದು ಕೇಳಿಸಿತು ಎಂದು ಒಂದು ಪಂಚಾಯತಿಯ ವಾರ್ಡ್ ಸದಸ್ಯ ಹೇಳಿದ್ದಾರೆ. ಸಂತ್ರಸ್ತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು.
ಭೂಕಂಪ ಕುರಿತ ಪರಿಶೀಲನೆ: ಸದ್ದಿನ ಮೂಲ ಅರಿಯಲು ಭೂಕಂಪನದ ದಾಖಲೆಗಳನ್ನು ಪರಿಶೀಲಿಸುತ್ತಿ ರುವುದಾಗಿ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್​ಡಿಎಂಎ) ಅಧಿಕಾರಿಗಳು ಹೇಳಿದ್ದಾರೆ. ಅಸಹಜ ಆದುದೇನಾದರೂ ಸಂಭವಿಸಿದೆಯೇ ಎಂದು ಸ್ಥಳೀಯ ವಾಗಿ ಪರಿಶೀಲನೆ ಮಾಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
‘ಸದ್ಯಕ್ಕೆ ಭೂಮಿಯೊಳಗಡೆ ಚಲನೆಯ ಯಾವುದೇ ಸೂಚನೆಯು ಕಂಪನ ದಾಖಲೆಗಳ ಪರಿಶೀಲನೆಯಿಂದ ಕಂಡುಬಂದಿಲ್ಲ’ ಎಂದು ಪ್ರಾಧಿಕಾರ ತಿಳಿಸಿದೆ.
ಗೋವಾ ಸಮಿತಿಗೆ ಮರುಜೀವ:ವಯನಾಡು ಧರೆ ಜರಿತ ದುರಂತದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ವಿಪತ್ತು ನಿರ್ವಹಣೆ ಕುರಿತ ಉನ್ನತ ಮಟ್ಟದ ಸಮಿತಿಯನ್ನು ಪುನರುಜ್ಜೀವನಗೊಳಿಸಿದೆ. ಬೆಟ್ಟ-ಗುಡ್ಡಗಳನ್ನು ಅಕ್ರಮವಾಗಿ ಕಡಿದರೆ ತಳ-ಮಟ್ಟದ ಕಂದಾಯ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಸರ್ಕಾರ ಎಚ್ಚರಿಸಿದೆ. ಶುಕ್ರವಾರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಕಂದಾಯ ಸಚಿವ ಅತನಾಸಿಯೊ ಮೊನ್ಸರಾಟ್ಟೆ ಮತ್ತು ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ ವ್ಯಾಪಿಸಿದೆ.
ಕುಟುಂಬಗಳಿಗೆ ಆರ್ಥಿಕ ನೆರವು:ವಯನಾಡು ಜಿಲ್ಲೆಯ ಮುಂಡಕೈ ಮತ್ತು ಚೂರಲ್​ವುಲಾ ಕುಗ್ರಾಮಗಳಲ್ಲಿ ಭೂಕುಸಿತದಿಂದ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡ ಕುಟುಂಬಗಳಿಗೆ ಆರ್ಥಿಕ ನೆರವನ್ನು ಒದಗಿಸುವುದಾಗಿ ಕೇರಳ ಸರ್ಕಾರ ಶುಕ್ರವಾರ ಘೋಷಿಸಿದೆ. ಸಂತ್ರಸ್ತರನ್ನು ಹೊಸ ಪ್ರದೇಶಕ್ಕೆ ಸ್ಥಳಾಂತರಿಸುವುದು ಇದರ ಉದ್ದೇಶವಾಗಿದೆ. ವಯನಾಡು ಪ್ರಕೃತಿ ವಿಕೋಪದ ಎಲ್ಲ ಸಂತ್ರಸ್ತರಿಗೆ ಹಣಕಾಸು ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಜೀವನಕ್ಕೆ ಆಧಾರ ಆಗಿರುವವರನ್ನು ಕಳೆದುಕೊಂಡ ಕುಟುಂಬಗಳ ಪ್ರತಿ ವಯಸ್ಕರಿಗೆ ದೈನಿಕ 300 ರೂಪಾಯಿ ಭತ್ಯೆ ನೀಡಲು ಕೂಡ ಸರ್ಕಾರ ನಿರ್ಧರಿಸಿದೆ.
ರೈತ ಸಂಘಗಳಿಂದ ದೇಣಿಗೆ:ವಯನಾಡು ದುರಂತ ಸಂತ್ರಸ್ತರಿಗೆ ನೆರವು ಒದಗಿಸಲು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಕೇರಳ ಕರ್ಷಕ ಸಂಘಂ (ಕೆಕೆಎಸ್) ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿವೆ. ಉಭಯ ರೈತ ಸಂಘಟನೆಗಳ ಮುಖಂಡರು ಗುರುವಾರ ತಿರುವನಂತಪುರದಲ್ಲಿ ದೇಣಿಗೆಯ ಚೆಕ್ಕನ್ನು ಸಿಎಂಗೆ ಹಸ್ತಾಂತರಿಸಿದರು.
ವಯನಾಡು ಭೂಕುಸಿತ ದುರಂತದ ನಂತರ ಗೋವಾ ಎಚ್ಚರಗೊಂಡಿದೆ. ಇಂಥ ಘಟನೆಗಳು ರಾಜ್ಯದಲ್ಲಿ ಸಂಭವಿಸದಂತೆ ತಡೆಯಲು ಕ್ರಮ ವಹಿಸಲಾಗುತ್ತದೆ.
| ಪ್ರಮೋದ್ ಸಾವಂತ್ ಗೋವಾ ಸಿಎಂ
ವಯನಾಡಿಗೆ ನಾಳೆ ಪ್ರಧಾನಿ ಮೋದಿ ಭೇಟಿ: ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
