ನವದೆಹಲಿ:ಆಘಾತಕಾರಿ ಘಟನೆಯೊಂದರಲ್ಲಿ ಸ್ನೇಹಿತನ ಮಗಳ ಮೇಲೆ ವ್ಯಕ್ತಿಯೋರ್ವ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ರಾಷ್ಟ್ರ ರಾರಜಧಾನಿ ದೆಹಲಿಯಲ್ಲಿ ನಡೆದಿದೆ. ಬಂಧಿತ ಆರೋಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿ, ಆಕೆಯ ಪತ್ನಿ ಹಾಗೂ ಮಗನನ್ನು ವಶಕ್ಕೆ ಪಡೆದಿದ್ದು, ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಚಾರ್ಜ್​ಶೀಟ್​​ ಸಿದ್ದಪಡಿಸಿದ್ದಾರೆ.
ದೆಹಲಿ ಸರ್ಕಾರದ ಮಹಿಳಾ ಮತ್ತು ಅಭಿವೃದ್ದಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿಯ ತಂದೆ ಮೃತಪಟ್ಟಿದ್ದು, ಈ ವಿಚಾರಚನ್ನೇ ದುರುಪಯೋಗ ಮಾಡಿಕೊಂಡ ಆರೋಪಿಯು ಆಕೆಯನ್ನು ಸಾಕುವ ನೆಪದಲ್ಲಿ ತನ್ನ ಮನೆಗೆ ಕರೆತಂದಿದ್ದಾನೆ. ಬಳಿಕ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಇದನ್ನೂ ಓದಿ:VIDEO| ಚಿತ್ರದುರ್ಗದಲ್ಲಿ ಚಾಲಕ ರಹಿತ ವಿಮಾನ ಪತನ
ಬಳಿಕ ಆಕೆ ಬಸರಿಯಾಗಿರುವ ವಿಚಾರ ಬೆಳಕಿಗೆ ಬಂದಾಗ ಆರೋಪಿಯೂ ತನ್ನ ಪತ್ನಿ ಬಳಿ ನಡೆದಿದ್ದನ್ನು ಹೇಳಿಕೊಂಡಿದ್ದಾನೆ. ಆಕೆಯ ಪತ್ನಿ ತನ್ನ ಮಗನಿಗೆ ಹೇಳಿ ಗರ್ಭಪಾತಕ್ಕೆ ಬೇಕಾದ ಔಷಧಿಗಳನ್ನು ತರಿಸಿಕೊಂಡು ಬಾಲಕಿ ಸೇವಿಸುವ ಆಹಾರದಲ್ಲಿ ಬೆರೆಸಿ ಕೊಟ್ಟಿದ್ದಾರೆ. ಆಹಾರ ಸೇವಿಸಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ಬಾಲಕಿಯನ್ನು ಆರೋಪಿಗಳು ಆಸ್ಪತ್ರೆಗೆ ಸೇರಿಸಿದ್ದು, ಗರ್ಭಪಾತವಾಗಿದೆ ಎಂಬ ವಿಚಾರ ತಿಳಿದ ಬಳಿಕೆ ಆಕೆಯನ್ನು ಮನೆಗೆ ವಾಪಸ್​ ಕಳುಹಿಸಿದ್ದಾರೆ.
ಬಳಿಕ ಬಾಲಕಿ ತನ್ನ ಮನೆಗೆ ವಾಪಸ್​ ಆಗಿದ್ದು, ಮಂಕಾಗಿರುವುದನ್ನು ಗಮನಿಸಿದ ಆಕೆಯ ತಾಯಿ ಮನೋಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಿದ್ದಾರೆ. ಮನೋಶಾಸ್ತ್ರಜ್ಞರ ಬಳಿ ಬಾಲಕಿ ನಡೆದ ವಿಚಾರವನ್ನು ಹೇಳಿಕೊಂಡಿದ್ದು, ವೈದ್ಯರು ತಕ್ಷಣವೇ ಬುರಾರಿ ಪೊಲೀಸ್ ಠಾಣೆಯ​ ಅಧಿಕಾರಿಗಳಿಗೆ ಮಾಹಿತಿ ನೀಡಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಚಾರ್ಜ್​ಶೀಟ್​ ಸಿದ್ದಪಡಿಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಆರೋಪಿ ಸ್ಥಾನದಲ್ಲಿರುವ ಅಧಿಕಾರಿಯನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಿ ಅದೇಶ ಹೊರಡಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
