ನವದೆಹಲಿ:ನಾವು ಬೇರೆಯವರ ಭೂಮಿಯನ್ನು ಕಬಳಿಸುವವರಲ್ಲ. ನಮಗೆ ರಾಜ್ಯ ವಿಸ್ತರಣೆಯ ಅವಶ್ಯಕತೆಯೂ ಇಲ್ಲ… ಅದಕ್ಕಾಗಿ ಹುನ್ನಾರ ನಡೆಸುವವರಂತೂ ಮೊದಲೇ ಅಲ್ಲ ಎಂದು ಚೀನಾ ಹೇಳಿದೆ.
ಲೇಹ್​ಗೆ ಶುಕ್ರವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗಡಿ ವಿಸ್ತರಣೆಯವರ ಕಾಲ ಮುಗಿದಿದೆ. ಇನ್ನೇನಿದ್ದರೂ ಅಭಿವೃದ್ಧಿಯ ಪರ್ವದ ಕಾಲವಾಗಿದೆ. ಭೂಕಬಳಿಸುವವರು ಅಂಥ ಕುಕೃತ್ಯಗಳನ್ನು ಕೈಬಿಟ್ಟು ಸುಮ್ಮನಿರಬೇಕು. ಇಲ್ಲವೇ ನಾಶವಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಚೀನಾ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಮಾಡಿರುವ ಭೂಕಬಳಿಕೆಯ ಆರೋಪಗಳೆಲ್ಲವೂ ಸುಳ್ಳು. ನಾವು ಅಂಥ ಮನೋಭಾವದವರೇ ಅಲ್ಲ ಎಂದು ಭಾರತದಲ್ಲಿನ ಚೀನಾದ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್​ ಹೇಳಿದ್ದಾರೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ ಲೇಹ್​ ಭೇಟಿಯ ಪರಿಣಾಮ ಅಗಾಧ
#Chinahas demarcated boundary with 12 of its 14 neighboring countries through peaceful negotiations, turning land borders into bonds of friendly cooperation. It's groundless to view China as "expansionist", exaggerate & fabricate its disputes with neighbours.
— Wang Xiaojian (@ChinaSpox_India)July 3, 2020

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಚೀನಾ 14 ರಾಷ್ಟ್ರಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಅವುಗಳಲ್ಲಿ 12 ರಾಷ್ಟ್ರಗಳ ಜತೆ ಮಾತುಕತೆಯ ಮೂಲಕ ಶಾಂತಿಯುತವಾಗಿ ಗಡಿಯನ್ನು ನಿಖರವಾಗಿ ಗುರುತಿಸಿಕೊಂಡಿದೆ. ಸ್ನೇಹ ಮತ್ತು ಸೌಹಾರ್ದಯುತವಾಗಿ ಆ ರಾಷ್ಟ್ರಗಳೊಂದಿಗೆ ಒಡನಾಡುತ್ತಿದೆ. ಹೀಗಿರುವಾಗ ಚೀನಾವನ್ನು ಗಡಿವಿಸ್ತರಣೆಯ ಹಪಾಹಪಿ ಹೊಂದಿರುವ ರಾಷ್ಟ್ರದ ಎಂದು ದೂಷಿಸುವುದು ಸರಿಯಲ್ಲ. ಇಂಥ ವೃಥಾ ಆರೋಪಗಳನ್ನು ಮಾಡುವುದರಿಂದ, ವಿವಾದ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಲೇಹ್​ಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗಡಿವಿಸ್ತರಣೆಯ ಯುಗ ಮುಗಿದು ಹೋಗಿದೆ. ಭಾರತದ ಶತ್ರುಗಳಿಗೆ ನಿಮ್ಮೆಲ್ಲ ಶಕ್ತ, ಸಾಮರ್ಥ್ಯ, ಶೌರ್ಯದ ಪರಿಚಯವಾಗಿದೆ ಎಂದು ಹೇಳಿ, ಚೀನಾದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಪರಿಪೂರ್ಣ ವ್ಯಕ್ತಿಯಾಗಲು ಕೆಲ ರೀತಿನೀತಿ ಅಗತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
