ನವದೆಹಲಿ:ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಡೊನಾಲ್ಡ್​ ಟ್ರಂಪ್​ಗೆ ಭಾರತದಲ್ಲಿ ತುಸು ವಿಭಿನ್ನವಾಗಿ, ಅದ್ದೂರಿಯಾಗಿ ಸ್ವಾಗತ ಸಿಗುತ್ತಿದೆ.
ಡೊನಾಲ್ಡ್​ ಟ್ರಂಪ್​ ಬರುವಿಕೆಗಾಗಿ ಭಾರತ ಕಾಯುತ್ತಿರುವಂತೆ, ಅತ್ತ ಟ್ರಂಪ್​ ಕೂಡ ಭಾರತವನ್ನು ತಲುಪಲು ತುಂಬ ಉತ್ಸುಕರಾಗಿದ್ದಂತೆ ತೋರುತ್ತದೆ. ನಿನ್ನೆಯಿಂದಲೂ ಟ್ವೀಟ್ ಮೂಲಕವೇ ಅದನ್ನು ಹೇಳುತ್ತಿದ್ದಾರೆ.
ಈಗ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಅದನ್ನೂ ಹಿಂದಿಯಲ್ಲಿ ಮಾಡಿರುವುದು ವಿಶೇಷ. ನಾವೆಲ್ಲ ಭಾರತದ ಭೇಟಿಗೆ ತುಂಬ ಉತ್ಸುಕರಾಗಿದ್ದೇವೆ. ಮಾರ್ಗ ಮಧ್ಯದಲ್ಲಿ ಇದ್ದೇವೆ. ಕೆಲವೇ ಹೊತ್ತಲ್ಲಿ ಭಾರತಕ್ಕೆ ಬಂದು ತಲುಪುತ್ತೇವೆ ಎಂದು ಟ್ರಂಪ್​ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಟ್ರಂಪ್ ಟ್ವೀಟ್ ಮಾಡಿ ಕೆಲವೇ ನಿಮಿಷಗಳಲ್ಲಿ 30 ಸಾವಿರಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದಿದೆ. 8 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. (ಏಜೆನ್ಸೀಸ್​)
Ahead of his arrival in Gujarat's Ahmedabad, US President Donald Trump tweets – "Hum Bharat aane ke liye tatpar hain. Hum raaste mein hain, kuch hi ghanton mein hum sabse milenge."pic.twitter.com/Ao4BUQiZWh
— ANI (@ANI)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
