ತಿರುವನಂತಪುರ:ವಿವಾದಿತ ದ್ವೇಷ ಭಾಷಣಗಳಿಗೆ ಕುಖ್ಯಾತಿ ಪಡೆದ ಧರ್ಮಬೋಧಕ ಮುಜಾಹಿದ್ ಬಲುಸ್ಸೇರಿ ಕಿಲಾಫತ್​ಗೆ ಕರೆ ನೀಡಿದ್ದು, ಕೇರಳವನ್ನು ನಾವು ಇಸ್ಲಾಮಿಕ್ ಸ್ಟೇಟ್ ಮಾಡಬಹುದು ಎಂದು ಹೇಳಿದ ವಿಡಿಯೋ ಒಂದು ವೈರಲ್ ಆಗಿದೆ. ಇದು ರಾಜ್ಯದಲ್ಲಿ ಹಿಂದು ಮತ್ತು ಕ್ರಿಶ್ಚಿಯನ್ ಸಮುದಾಯದವರಲ್ಲಿ ಕಳವಳ ಮೂಡಿಸಿದೆ.
ಹಲವು ವಿಡಿಯೋಗಳ ಪೈಕಿ, 2017ರಲ್ಲಿ ಕಿಲಾಫತ್​ಗೆ ಕರೆ ನೀಡಿದ ವಿಡಿಯೋದಲ್ಲಿ ಮುಜಾಹಿದ್ ಬಲುಸ್ಸೇರಿ ಹೇಳಿದ್ದಿಷ್ಟು – ಪ್ರತಿ ಶುಕ್ರವಾರ ಕೇರಳದ ಎಲ್ಲ ಮುಸ್ಲಿಮರನ್ನೂ ಮುಜಾಹಿದ್ ಮಸೀದಿಗಳಿಗೆ ಕಳುಹಿಸಿ. ಮುಂದಿನ ಹತ್ತು ವರ್ಷದೊಳಗೆ ನಾವು ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸಬಹುದು. ಹಾಗಾಗಿ ನಮಗೆ ಇಲ್ಲಿ ಒಂದು ಕರ್ತವ್ಯವಿದೆ. ಕೇರಳದಲ್ಲಿರುವ ಇತರೆ ಮುಸ್ಲಿಂ ಶಾಖೆಗಳ ಮಸೀದಿಗಳನ್ನು ಮುಚ್ಚಿ ಎಲ್ಲವನ್ನೂ, ಎಲ್ಲರನ್ನೂ ಮುಜಾಹಿದ್ ಅಧೀನಕ್ಕೆ ತಂದರೆ ಹತ್ತೇ ವರ್ಷದೊಳಗೆ ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸಬಹುದು.
ಇದನ್ನೂ ಓದಿ:ಗಾಂಜಾ ವ್ಯಸನಿಗಳ ಚಳಿ ಬಿಡಿಸಿದ ಪೊಲೀಸರು, ಉಡುಪಿಯಲ್ಲಿ 10 ಮಂದಿ ವಶಕ್ಕೆ
ಮನುಷ್ಯ ನೈತಿಕವಾಗಿ ಪರಿಪೂರ್ಣನೇ ಆಗಿರಬಹುದು. ಆದರೆ, ಆತ ಬೇರೆ ದೇವರುಗಳನ್ನು ಪೂಜಿಸಿದರೆ ಸ್ವರ್ಗದ ಬಾಗಿಲು ತೆರೆಯಲಾರದು. ಗುರುವಾಯೂರಪ್ಪನೇ ಕಾಪಾಡು ಎಂದು ಹೇಳುವುದು ಸಲಿಂಗಕಾಮ, ಬಡ್ಡಿಗಾಗಿ ಲೇವಾದೇವಿ ನಡೆಸುವುದಕ್ಕಿಂತಲೂ ದೊಡ್ಡ ಅಪರಾಧ, ಪಾಪಕಾರ್ಯ. ಅಂಥವರು ನರಕಕ್ಕೆ ಹೋಗುವರು. ಹಿಂದು ದೇವಸ್ಥಾನ ಅಥವಾ ಅವರ ಉತ್ಸವಗಳಿಗೆ ನಿಮ್ಮ ಹಣವನ್ನು ದೇಣಿಗೆ ನೀಡಿದರೆ, ನೀವು ಪಬ್​ ಅಥವಾ ವೇಶ್ಯಾವಾಟಿಕೆಗೆ ಹಣ ನೀಡಿದಂತೆ ಎಂದು ಆತ ಹೇಳಿರುವುದು ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)
ಅಗಸ್ಟಾವೆಸ್ಟ್​ಲ್ಯಾಂಡ್ ಕೇಸ್ – ಮಾಜಿ ರಕ್ಷಣಾ ಕಾರ್ಯದರ್ಶಿ ವಿಚಾರಣೆಗೆ ಅನುಮತಿ ಕೋರಿದ ಸಿಬಿಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
