‘ಕಾರ್ಗಿಲ್ ರಣಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಭಾರತೀಯ ಸೇನೆ ಸುಮಾರು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಭಾರತ ವಿಜಯ ಸಾಧಿಸುವುದರೊಂದಿಗೆ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡು ವಿಜಯದುಂದುಭಿ ಮೊಳಗಿಸಿದ ಕರ್ನಾಟಕದ ವೀರಯೋಧರು ತಮ್ಮ ಆ ರಣರೋಚಕ ಅನುಭವಗಳನ್ನು ವಿಜಯವಾಣಿ ಓದುಗರಿಗಾಗಿ ಹಂಚಿಕೊಂಡಿದ್ದಾರೆ.
ಕಾರ್ಗಿಲ್​ನಲ್ಲಿ 60ರಿಂದ 80 ಡಿಗ್ರಿವರೆಗೂ ಲಂಬ ಆಗಿರುವ ಬೃಹತ್ ಪರ್ವತಗಳ ಬುಡದಿಂದ ನಾವು ಯುದ್ಧ ಮಾಡಬೇಕಿತ್ತು. ಮೇಲೆ ಎತ್ತರದಲ್ಲಿದ್ದ ಪಾಕಿಸ್ತಾನಿ ಯೋಧರು ಒಂದು ಕಲ್ಲು ಉರುಳಿಸಿ ಬಿಟ್ಟರೂ ನಾವು ಸಾಯುವ ಪರಿಸ್ಥಿತಿ ಇತ್ತು. ರಾತ್ರಿಯಿಡೀ ಗುಡ್ಡ ಹತ್ತಿ ಪೋಸ್ಟ್ ಗಳನ್ನು ವಶಪಡಿಸಿಕೊಳ್ಳುವ ಗುರಿಯಿಂದ ಸಾಗುತ್ತಿದ್ದೆವು. ಬೆಳಗಾಗುತ್ತಿದ್ದಂತೆ ಇದ್ದಲ್ಲೇ ಕುಳಿತಿರುತ್ತಿದ್ದೆವು. ಕೆಲವು ಬಾರಿ 3-4 ದಿನ ಊಟ-ನಿದ್ದೆ ಇಲ್ಲದೆ ಯುದ್ಧನಿರತರಾಗಿದ್ದಿದೆ. ನಮ್ಮ ಬಳಿ ಕೊಂಡೊಯ್ದ ರೇಷನ್ ಇದ್ದರೂ ಎದುರಿರುತ್ತಿದ್ದ ಗುರಿಯ ಮುಂದೆ ಊಟ ಮಾಡುವ ಮನಸ್ಥಿತಿ ಇರುತ್ತಿರಲಿಲ್ಲ.
| ನಾಗರಾಜ ನಾಯ್ಕ ಶಿರಸಿ (ಸದ್ಯ ಹೊನ್ನಾವರ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ)
ಇದನ್ನೂ ಓದಿ:ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು
ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಈಗಲೂ ಇಮ್ಮಡಿಸುತ್ತದೆ ಉತ್ಸಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
