ನವದೆಹಲಿ:ಇತ್ತೀಚಿನ ವಿಧಾನಸಭಾ ಚುನಾವಣೆ ಗಳಿಂದ ಪಕ್ಷ ಅಮೂಲ್ಯವಾದ ಪಾಠ ಕಲಿತಿದ್ದು, ಮತ್ತದೇ ತಪು್ಪಗಳನ್ನು ಮಾಡದಿರಲು ಬದ್ಧವಾಗಿದೆ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಂದಿನ ಲೋಕಸಭಾ ಚುನಾವಣೆ ಮೇಲೆ ಗಮನಹರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಗಳು ನಡೆದ ಬಳಿಕ ಮೊದಲ ಸಿಡಬ್ಲ್ಯುಸಿ ಸಭೆ ಇದಾಗಿದೆ. ಇತ್ತೀಚೆಗೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಪಂಚರಾಜ್ಯಗಳ ಪೈಕಿ ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಬಹುಮತ ಗಳಿಸಿ ಅಧಿಕಾರ ಪಡೆದಿದೆ ಎಂಬುದನ್ನು ಉಲ್ಲೇಖಿಸಿದ ಖರ್ಗೆ, ಇದು ಅಸಮಾಧಾನಕರ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಾಥಮಿಕ ವಿಶ್ಲೇಷಣೆ ನಡೆಸಿದ್ದು, ಸೋಲಿನ ಹಿಂದಿನ ಕಾರಣಗಳನ್ನು ಗುರುತಿಸಿದೆ ಎಂದರು. ಈ ವ್ಯತಿರಿಕ್ತ ಫಲಿತಾಂಶದ ಹೊರತಾಗಿಯೂ ಮತಗಳಿಕೆ ಪ್ರಮಾಣದಲ್ಲಿ ಹೆಚ್ಚಳ ಮುಂತಾದ ಧನಾತ್ಮಕ ಸಂಗತಿಗಳು ಕಂಡುಬಂದಿವೆ. ಅವುಗಳ ಮೇಲೆ ಗಮನಹರಿಸಿ ಕಾರ್ಯೋನ್ಮುಖ ರಾದರೆ ನಾವು ಮತ್ತೆ ಪುಟಿದೇಳಲು ಸಾಧ್ಯವಿದೆ ಎಂಬ ವಿಶ್ವಾಸವನ್ನೂ ಖರ್ಗೆ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ ತುಂಬಾ ದೂರವೇನಿಲ್ಲ, ನಮಗೆ ಇನ್ನು ಹೆಚ್ಚು ಸಮಯವಿಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ಕೈಗೊಳ್ಳಬೇಕಾದ ಅಗತ್ಯಕ್ರಮಗಳ ಕುರಿತು ಕಾರ್ಯಗತಗೊಳಿಸಬೇಕಾದ ಅಂಶಗಳ ಬಗ್ಗೆ ಎಲ್ಲರೂ ಗಮನಹರಿಸಿ ಎಂದು ಖರ್ಗೆ ಕರೆ ನೀಡಿದರು.
ಆಡಳಿತ ಪಕ್ಷದ ಪಿತೂರಿರಾಜ್ಯಸಭಾ- ಲೋಕಸಭಾ ಸದಸ್ಯರ ಅಮಾನತು ಕುರಿತು ಮಾತನಾಡಿದ ಖರ್ಗೆ, ಸಂಸತ್ತನ್ನು ಆಡಳಿತ ಪಕ್ಷದ ವೇದಿಕೆ ಆಗಿಸುವ ನಿಟ್ಟಿನಲ್ಲಿ ಅದೊಂದು ಪಿತೂರಿ ಎಂದು ಹೇಳಿದರು. ಚರ್ಚೆ ಇಲ್ಲದೆ ಮಸೂದೆಗಳನ್ನು ನಿರಂಕುಶವಾಗಿ ಅಂಗೀಕರಿಸಿಕೊಳ್ಳುವ ಮೂಲಕ ಬಿಜೆಪಿ ಹೇಗೆ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂಬುದನ್ನು ದೇಶವೇ ಗಮನಿಸುತ್ತಿದೆ ಎಂದೂ ಅವರು ಹೇಳಿದರು.
ಮತ್ತೆ ಭಾರತ್ ಜೋಡೋ?ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 2ನೇ ಭಾರತ್ ಜೋಡೋ ಯಾತ್ರೆ 2024ರ ಜನವರಿ 2ನೇ ವಾರದಲ್ಲಿ ಆರಂಭಗೊಳ್ಳಲಿದೆ. ಈ ಸಲ ಅರುಣಾಚಲದಿಂದ ಗುಜರಾತ್​ವರೆಗೆ ಪ್ರಯಾಣಿಸಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಶಕ್ತಿ ತುಂಬುವ ಸಲುವಾಗಿ ಈ ಯಾತ್ರೆ ನಡೆಯಲಿದೆ. ರಾಹುಲ್ ಇನ್ನೊಂದು ಭಾರತ್ ಜೋಡೋ ಯಾತ್ರೆ ಕೈಗೊಳ್ಳಬೇಕೆಂದು ಪಕ್ಷದ ಹಲವು ನಾಯಕರು ಬಯಸಿದ್ದಾರೆ ಎಂದು ಖರ್ಗೆ ಸಿಡಬ್ಲ್ಯುಸಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಮೊದಲ ಯಾತ್ರೆ ಕಳೆದ ವರ್ಷ ಸೆ.7 ರಂದು ಕನ್ಯಾಕುಮಾರಿಯಲ್ಲಿ ಆರಂಭಗೊಂಡು,136 ದಿನ 12 ರಾಜ್ಯ, ಒಟ್ಟು 4 ಸಾವಿರ ಕಿ.ಮೀ. ಪ್ರಯಾಣ ದೊಂದಿಗೆ ಜಮ್ಮು-ಕಾಶ್ಮೀರದಲ್ಲಿ ಕೊನೆಗೊಂಡಿತ್ತು.
ಪುರಿ ಜಗನ್ನಾಥ ದೇವಸ್ಥಾನಕ್ಕೆ ಗೋಮಾಂಸ ಪ್ರಚಾರಕಿ ಎಂಟ್ರಿ! ತರಾಟೆಗೆ ತೆಗೆದುಕೊಂಡ ಬಿಜೆಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 6 =
Remember me
