ಕೋಲ್ಕತ:ವಿಶ್ವವಿದ್ಯಾಲಯ, ಕಾಲೇಜು ಎಂದಮೇಲೆ ಅಲ್ಲೊಂದಿಷ್ಟು ಶಿಸ್ತು-ನಿಯಮ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ವಿದ್ಯಾರ್ಥಿನಿಯೊಬ್ಬಳು ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದು ವಾದಿಸಿದ್ದಾಳೆ.
ಕೋಲ್ಕತದ ಜಾಧವ್​ಪುರ್ ಯುನಿವರ್ಸಿಟಿಯ ವಿದ್ಯಾರ್ಥಿನಿಯೊಬ್ಬಳು ಇಂಥದ್ದೊಂದು ವಾದ ಮಾಡಿದ್ದಾಳೆ. ಕಾಲೇಜ್ ಕ್ಯಾಂಪಸ್ ಒಳಗೆ ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಹಿನ್ನೆಲೆಯಲ್ಲಿ ಕ್ಯಾಂಪಸ್​ನ ಹಲವೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಆದರೆ ತಮ್ಮ ಪ್ರೈವೆಸಿಗೆ ಧಕ್ಕೆ ಬರುತ್ತದೆ ಎಂದು ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅತ್ತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಟಿ; ಕಾರಣದ ಕುರಿತು ಸುದೀರ್ಘ ಬರಹ!
ವಿವಿ ಕ್ಯಾಂಪಸ್​ನ ಹಲವೆಡೆ ಸಿಸಿಟಿವಿ ಅಳವಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿದ್ಯಾರ್ಥಿನಿಯೊಬ್ಬಳು, ಕಾಲೇಜು ನಮ್ಮ ಎರಡನೇ ಮನೆ, ಹೀಗಿರುವಾಗ ಇಲ್ಲಿ ಮದ್ಯಪಾನ-ಧೂಮಪಾನ ಮಾಡಿದರೆ ತಪ್ಪೇನು? ಎಂದು ಕೇಳಿದ್ದಾಳೆ. ಮಾತ್ರವಲ್ಲ, ಇವರ್ಯಾಕೆ ಇಷ್ಟೊಂದು ಸಿಸಿಟಿವಿ ಅಳವಡಿಸಬೇಕು, ನಮ್ಮ ಪ್ರೈವೆಸಿಗೆ ಧಕ್ಕೆ ಬರುತ್ತದೆ ಅದರಿಂದ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ಮಾಡುವುದು ನಮ್ಮ ಹಕ್ಕು ಎಂದೂ ವಾದಿಸಿದ್ದಾಳೆ. ಈಕೆ ಮಾತಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ. –ಏಜೆನ್ಸೀಸ್
Leftist Bongs thinks#JadavpurUniversityas their second Home 🏡, so it is their right to smoke 💨 and drink 🍺 inside the campus, so oppose CC TV camera.
Now I came to understand why they stay in campus till 45-50 years, only to smoke & drink thinking this as their second homepic.twitter.com/4sHwPXTd0u
— Oxomiya Jiyori 🇮🇳 (@SouleFacts)August 19, 2023

‘ಅಯ್ಯೋ ಪಾಪ..’ ಎಂದು ಹಣ ಹಾಕುವ ಮುನ್ನ ಹುಷಾರು: ಹೀಗೂ ವಂಚಿಸುತ್ತಾರೆ!

ಮನೆ ಬಳಿ ಬಂದವರಿಗೆ ಸಾಕುನಾಯಿ ಕಚ್ಚಿದರೆ ಮಾಲೀಕರಿಗೆ 6 ತಿಂಗಳು ಜೈಲು, ದಂಡ: ಪೊಲೀಸರ ಎಚ್ಚರಿಕೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × 3 =
Remember me
