ಪಾಟ್ನಾ:ಪ್ರತಿಭಟನೆಯನ್ನು ಯಾವ ಯಾವ ವಿಚಾರಕ್ಕೆ ನಡೆಸುತ್ತಾರೆ. ಯಾವುದಾದರೂ ಮುಖ್ಯ ವಿಚಾರಗಳು ನಡೆಯದಿದ್ದಾಗ ಅಥವಾ ದೇಶದ ನಾಗರಿಕರಿಗೆ ವ್ಯತಿರಿಕ್ತವಾಗಿ ಏನಾದರೂ ನಡೆದರೆ ಅಂತಹ ಸಂದರ್ಭದಲ್ಲಿ ಪ್ರೊಟೆಸ್ಟ್​​ ಮಾಡುವುದು ಸಹಜ. ಇತ್ತೀಚೆಗೆ ರಾಜಕೀಯ ಪಕ್ಷಗಳು ತಮ್ಮದೆ ಆದ ಕಾರಣಗಳಿಗೆ ಪ್ರತಿಭಟನೆ ನಡೆಸುವುದಾಗಿ ಕರೆ ನೀಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರ ಗುಂಪೊಂದು ಪ್ರತಿಭಟನೆ ಕೂಗುತ್ತಾ ಸಾಗುತ್ತಿರುವ ವಿಡಿಯೋ ವೈರಲ್​ ಆಗುತ್ತಿದೆ. ವಿಚಿತ್ರ ಎಂದರೆ ಇದರಲ್ಲಿ ಬ್ಯೂಟಿ ಪಾರ್ಲರ್​​ ಮುಚ್ಚಬೇಕು ಎಂದು ಕೂಗುತ್ತಾ ಪ್ರತಿಭಟಿಸುತ್ತಿದ್ದಾರೆ.
ಇದನ್ನು ಓದಿ:ರೈಲಿನಲ್ಲಿ ವೃದ್ಧರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಗ್ಯಾಂಗ್​​; ವೈರಲ್​ ವಿಡಿಯೋಗೆ ಕಮಿಷನರ್​ ರಿಯಾಕ್ಷನ್​​​ ಹೀಗಿದೆ….
ಈ ಪ್ರತಿಭಟನೆ ಬಿಹಾರದ ಸಸಾರಾಮ್​ನಲ್ಲಿ ನಡೆದಿದೆ ಎನ್ನಲಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಬ್ಯೂಟಿ ಪಾರ್ಲರ್ ವಿರುದ್ಧ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ಯೂಟಿ ಪಾರ್ಲರ್ ಬಂದ್ ಮಾಡಿ ಎಂದು ಎಲ್ಲರೂ ಜೋರಾಗಿ ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿದೆ. ಅಲ್ಲದೆ ಈ ಪ್ರತಿಭಟನೆಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುತ್ತಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದ್ದು ಜನರಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿವೆ.
A post shared by 🆁🅰🆅🅸 🅺🆄🆂🅷🆆🅰🅷🅰 (@bhojpuri_vlogs_00)
ಈ ಆಂದೋಲನವನ್ನು ಗಂಭೀರ ವಿಚಾರಕ್ಕಾಗಿ ನಡೆಸಲಾಗಿದೆಯೇ ಅಥವಾ ಮನರಂಜನೆಗಾಗಿ ಮಾಡಿರುವ ಚೇಷ್ಟೆಯ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಪ್ರತಿಭಟನೆಯ ಹಿಂದಿನ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಲವರು ತಮಾಷೆಯಾಗಿ ಕಾಮೆಂಟ್​ ಮಾಡುತ್ತಿದ್ದರೆ, ಮತ್ತೆ ಕೆಲವರು ಗಂಭೀರವಾಗಿ ಪರಿಗಣಿಸಿ ಇಂತಹ ಪ್ರತಿಭಟನೆಯಲ್ಲಿ ತ್ರಿವರ್ಣ ಧ್ವಜ ಏಕೆ ಬಳಸಿದ್ದಾರೆ?, ಈ ರೀತಿ ಮಾಡುವುದು ರಾಷ್ಟ್ರಧ್ವಜವನ್ನು ಅವಮಾನಿಸಿದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ.(ಏಜೆನ್ಸೀಸ್​)
ಪ್ರತಿಭೆಯಿಂದ ಹೆಸರು ಬಂದಿದೆಯೇ ಹೊರತು ತೊಡುವ ಬಟ್ಟೆ-ವಿವಾದಗಳಿಂದಲ್ಲ; ಅನುಷ್ಕಾ ಶರ್ಮಾ ಹೀಗೆಳಿದ್ದೇಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
