ನವದೆಹಲಿ:ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಎನ್​ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಮಧ್ಯೆ ಭಾರೀ ಹಣಾಹಣಿ ನಡೆಯುತ್ತಿದ್ದು, ಪ್ರಸ್ತುತ 270 ಸೀಟ್​ಗಳಿಂದ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್​ 217 ಸೀಟ್​ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಬಿಜೆಪಿಯ ಡಾ.ಜಾಧವ ಮುನ್ನಡೆ : ಕಾಂಗ್ರೆಸ್ ಟಫ್ ಫೈಟ್
ಈಗಾಗಲೇ ಗೆಲುವಿನ ನಗೆ ಬೀರಿರುವ ಬಿಜೆಪಿ ನಾಯಕರು, ಹಲವು ರಾಜ್ಯಗಳಲ್ಲಿ ಸಿಹಿ ಹಂಚಿ, ಸಂಭ್ರಮಾಚರಣೆ ಪ್ರಾರಂಭಿಸಿದ್ದಾರೆ. ಮೇಲ್ನೋಟಕ್ಕೆ ಎನ್​ಡಿಎಗೆ ಗೆಲುವು ಖಚಿತ ಎಂದು ಅನಿಸಿದರೂ ಸಹ ಅಧಿಕೃತ ಘೋಷಣೆಗಾಗಿ ಮಧ್ಯಾಹ್ನ 12 ಗಂಟೆಯವರೆಗೂ ಕಾದು ನೋಡಬೇಕಿದೆ. ಸದ್ಯ ಗೆಲುವಿನ ಖುಷಿಯಲ್ಲಿರುವ ಬಿಜೆಪಿ ನಾಯಕ ಶಹನವಾಜ್ ಹುಸೇನ್, ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ 300ಕ್ಕೂ ಅಧಿಕ ಸೀಟ್​ಗಳನ್ನು ನಾವು ಗೆಲ್ತೇವೆ ಎಂದು ಹೇಳಿದ್ದರು. ಬರೆದಿಟ್ಟುಕೊಳ್ಳಿ, ಖಂಡಿತವಾಗಿ ಬಿಜೆಪಿ 400 ಸೀಟ್​ಗಳ ಗಡಿದಾಟಲಿದೆ. ಅಂತಿಮ ಫಲಿತಾಂಶದಲ್ಲಿ ಎನ್​ಡಿಎಗೆ ಮೇಲುಗೈ. ಪ್ರಧಾನಿ ನರೇಂದ್ರ ಮೋದಿ ಗೆಲುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹುಸೈನ್ ಹೆಚ್ಚಿನ ಭರವಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಕ್ಯಾಪ್ಟನ್ ಸ್ಥಾನದಲ್ಲಿದ್ದು ಇಂಥ.. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಬಾಬರ್​, ನಾಚಿಕೆಯಾಗಬೇಕು! ಫ್ಯಾನ್ಸ್​ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 14 =
Remember me
