ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ ಭಾರಿ ಮುನ್ನಡೆಯೊಂದಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತ ದಾಪುಗಾಲು ಇಡುತ್ತಿದ್ದೆ. ಆದರೆ, ಸಂಜೆ ವೇಳೆಗೆ ಫಲಿತಾಂಶದ ಚಿತ್ರಣವೇ ಬದಲಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯವರ್ಗಿಯ ಹೇಳಿದ್ದಾರೆ.
ಸದ್ಯದ ಟ್ರೆಂಡ್​ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 188 ಮತ್ತು ಬಿಜೆಪಿ 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಟ್ರೆಂಡ್​ ಹೀಗೆ ಮುಂದುವರಿದರೆ ಟಿಎಂಸಿ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ.
ಮತಎಣಿಕೆಯ ನಡುವೆಯೇ ಮಾತನಾಡಿರುವ ಕೈಲಾಶ್​ ವಿಜಯವರ್ಗಿಯ, ಇನ್ನು ಹಲವು ಸುತ್ತುಗಳಿರುವ ಕಾರಣ ಈಗಲೇ ಏನನ್ನೂ ಹೇಳಲು ಆಗುವುದಿಲ್ಲ. ಸಂಜೆ ವೇಳೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ನಾವು 3 ರಿಂದ ಪ್ರಾರಂಭಿಸಿದ್ದೇವೆ ಮತ್ತು ನಮಗೆ 100 ಸ್ಥಾನವು ಸಹ ಸಿಗುವುದಿಲ್ಲ ಎಂದು ಸವಾಲು ಹಾಕಲಾಯಿತು. ಆದರೆ, ನಾವು ಆ ಗಡಿ ದಾಟಿದ್ದೇವೆ. ನೋಡ್ತಾ ಇರಿ ನಾವು ಮ್ಯಾಜಿಕ್ ಸಂಖ್ಯೆಯನ್ನು ಸಹ ದಾಟುತ್ತೇವೆಂದು ಹೇಳಿದ್ದಾರೆ.
ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಏರಲು 147 ಮ್ಯಾಜಿಕ್​ ನಂಬರ್​ ಅವಶ್ಯಕತೆ ಇದೆ. ಅಸ್ತಿತ್ವವೇ ಇರದ ಒಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಬಾರಿ ಗಟ್ಟಿಯಾಗಿ ನಲೆಯೂರಿದ್ದು, ಟಿಎಂಸಿ ಟಕ್ಕರ್​ ಕೊಡುವ ಸಾಧ್ಯತೆ ಇದೆ. ಹೀಗಾಗಿ ಈ ಚುನಾವಣಾ ಫಲಿತಾಂಶದ ಭಾರೀ ನಿರೀಕ್ಷೆ ಇದೆ.(ಏಜೆನ್ಸೀಸ್​)
Too early to say anything because there are so many rounds. Situation will be clear only by evening. We had started from 3 & were challenged that we won't get even 100, we have crossed that mark. We will cross the magic number too: Kailash Vijayvargiya, BJP#WestBengalPollspic.twitter.com/ZS5LmrGcNF
— ANI (@ANI)May 2, 2021

ಚುನಾವಣಾ ಫಲಿತಾಂಶ ಮೇಲಿನ ಮಾಧ್ಯಮ ಚರ್ಚೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್​ ನಿರ್ಧಾರ!

ಕೇರಳದ ಸಿಎಂ ಮೊಗದಲ್ಲಿ ಭಾರಿ ಹರ್ಷ: ಎಲ್‌ಡಿಎಫ್‌ ಮೈತ್ರಿಕೂಟ 78 ಕ್ಷೇತ್ರಗಳಲ್ಲಿ ದಾ‍ಪುಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
