ನವದೆಹಲಿ:ಟ್ವಿಟರ್ ಮಾಲೀಕತ್ವ ವಹಿಸಿಕೊಂಡಾಗಿನಿಂದ ಹೊಸ ಹೊಸ ಕ್ರಮಕೈಗೊಳ್ಳುತ್ತಿರುವ ಎಲಾನ್ ಮಸ್ಕ್, ಇದೀಗ ಅದನ್ನು ‘ಎಕ್ಸ್’ ಆಗಿಸಿದಾಗಿನಿಂದ ಈ ಮೈಕ್ರೋ ಬ್ಲಾಗಿಂಗ್ ಸೈಟನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ, ಇಂದು ವಿಶೇಷ ಹಾಗೂ ಕೆಲವರು ಹುಬ್ಬೇರಿಸುವಂಥ ಘೋಷಣೆಯೊಂದನ್ನು ಮಾಡಿದ್ದಾರೆ.
ಬಹಳಷ್ಟು ಉದ್ಯೋಗಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಇನ್ನು ಕೆಲವರು ತಮ್ಮ ಅನಿಸಿಕೆಗಳನ್ನು ಉದ್ಯೋಗದಾತ ಕಂಪನಿಗಳ ಅನಿಸಿಕೆ ಎಂದು ಯಾರೂ ತಪ್ಪು ಭಾವಿಸಬಾರದು ಅಥವಾ ತಮ್ಮ ಪೋಸ್ಟ್​ಗಳಿಂದ ತೊಂದರೆ ಎದುರಾಗಬಾರದು ಎಂದು ‘views are personal’ ಎಂಬ ಸಾಲನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಯೋದಲ್ಲಿ ಹಾಕಿಕೊಂಡಿರುತ್ತಾರೆ. ಬಹುಶಃ ಇದನ್ನೆಲ್ಲ ಗಮನಿಸಿಯೇ ಏನೋ ಎಲಾನ್ ಮಸ್ಕ್ ಇದೀಗ ಹೊಸದೊಂದು ಘೋಷಣೆ ಮಾಡಿದ್ದಲ್ಲದೆ ಭರವಸೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
‘ಈ ಪ್ಲ್ಯಾಟ್​​ಫಾರ್ಮ್​ನಲ್ಲಿ ಏನನ್ನಾದರೂ ಪೋಸ್ಟ್ ಮಾಡುವ ಅಥವಾ ಲೈಕ್​ ಮಾಡುವ ಕಾರಣದಿಂದಾಗಿ ನಿಮ್ಮ ಉದ್ಯೋಗದಾತರಿಂದ ನಿಮಗೆ ಅನ್ಯಾಯವಾಗಿದ್ದರೆ, ನಾವು ನಿಮ್ಮ ಕಾನೂನು ಶುಲ್ಕ ಭರಿಸಲು ಧನಸಹಾಯ ಮಾಡುತ್ತೇವೆ’ ಎಂಬುದಾಗಿ ಎಲಾನ್ ಮಸ್ಕ್​ ಘೋಷಿಸಿದ್ದಾರೆ. ಮಾತ್ರವಲ್ಲದೆ, ‘ಇದಕ್ಕೆ ಮಿತಿ ಇಲ್ಲ’ ಎನ್ನುವ ಮೂಲಕ ಎಷ್ಟು ಖರ್ಚಾದರೂ ಕೊಡುತ್ತೇವೆ ಎಂದು ಪರೋಕ್ಷವಾಗಿ ಹೇಳಿರುವ ಮಸ್ಕ್​, ‘ದಯವಿಟ್ಟು ನಮಗೆ ತಿಳಿಸಿ’ ಎಂದೂ ಕೇಳಿಕೊಂಡಿದ್ದಾರೆ.
ಯಾರೂ ನಿರೀಕ್ಷೆ ಮಾಡಿರದ, ಅದರಲ್ಲೂ ಇದುವರೆಗೆ ಯಾವ ಸೋಷಿಯಲ್ ಮೀಡಿಯಾದವರೂ ಘೋಷಿಸಿರದ ಇಂಥ ಒಂದು ಭರವಸೆಯನ್ನು ಎಲಾನ್ ಮಸ್ಕ್ ನೀಡಿರುವುದು ಭಾರಿ ಅಚ್ಚರಿ ಮೂಡಿಸಿದ್ದು, ಅವರ ಈ ಪೋಸ್ಟ್ ಭರ್ಜರಿ ಪ್ರತಿಕ್ರಿಯೆ ಪಡೆಯುವ ಮೂಲಕ ವೈರಲ್ ಕೂಡ ಆಗಿದೆ.
If you were unfairly treated by your employer due to posting or liking something on this platform, we will fund your legal bill.No limit.Please let us know.— Elon Musk (@elonmusk)August 6, 2023
If you were unfairly treated by your employer due to posting or liking something on this platform, we will fund your legal bill.No limit.Please let us know.
ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × two =
Remember me
