ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಲ್ಲಿ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಆವರಿಸಿ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ. ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್​ ಇದು ಅಲೆಯಲ್ಲ, ಸುನಾಮಿ. ಕರೊನಾ ರೋಗಿಗಳಿಗೆ ಅವಶ್ಯವಾಗಿ ಬೇಕಾಗಿರುವ ಆಮ್ಲಜನಕದ ಪೂರೈಕೆಯಲ್ಲಿ ಯಾರಾದರೂ ತಡೆ ಒಡ್ಡಿದರೇ ಅಂತವರನ್ನು ನೇಣಿಗೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದೆ.
ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ಕೇಂದ್ರ ಮತ್ತು ಕೇಜ್ರಿವಾಲ್ ಸರ್ಕಾರದಿಂದ ಸ್ಪಷ್ಟನೆ ಪಡೆಯಬೇಕು ಎಂದು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ದೆಹಲಿಯಲ್ಲಿ ಕೋವಿಡ್ ಹರಡುತ್ತಿರುವುದನ್ನು ಗಮನಿಸಿದರೆ ಇದು ಅಲೆಯಲ್ಲ ಸುನಾಮಿಯೇ ಸರಿ. ದೆಹಲಿಯಲ್ಲಿ ಕರೊನಾ ಎದುರಿಸಲು ಆಸ್ಪತ್ರೆಗಳೆಷ್ಟಿವೆ? ಹಾಸಿಗೆಗಳನ್ನು ಎಷ್ಟು ಮೀಸಲಿಟ್ಟಿದ್ದಿರಾ? ಮೇ ಮಧ್ಯದಲ್ಲಿ ಸೋಂಕು ಇನ್ನೂ ಹೆಚ್ಚು ವ್ಯಾಪಿಸಬಹುದು ಎಂದು ಅಂದಾಜಿಸಲಾಗಿದೆ ಇದನ್ನು ಎದುರಿಸಲು ಏನು ಸಿದ್ದತೆ ಮಾಡಿಕೊಂಡಿದ್ದಿರಾ ಎಂದು ದೆಹಲಿ ಹೈಕೋರ್ಟ್​ ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದೆ. ರೋಗನಿರೋಧಕ ಶಕ್ತಿ ಇಲ್ಲದವರು ಕೆಲವರು ಸಾಯುತ್ತಿದ್ದಾರೆ. ಆದರೆ, ಬದುಕಿಸಿಕೊಳ್ಳಬಹುದಾದ ಜೀವಗಳನ್ನು ಏಕೆ ಬದುಕಿಸಿಕೊಳ್ಳುತ್ತಿಲ್ಲ ಎಂದು ಕೋರ್ಟ್ ಕೇಂದ್ರ ಮತ್ತು ದೆಹಲಿ​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಳ್ಳಿ ಅವರ ನೇತೃತ್ವದ ಪೀಠ ಈ ಅಭಿಪ್ರಾಯಪಟ್ಟಿದೆ. ಶನಿವಾರ ದೆಹಲಿಯಲ್ಲಿ 25331 ಕರೊನಾ ಸೋಂಕಿನ ಹೊಸ ಪ್ರಕರಣಗಳು ದಾಖಲಾಗಿವೆ. 348 ಜನ ಮೃತಪಟ್ಟಿದ್ದಾರೆ.
ಕರೊನಾ ಲಸಿಕೆ, ಆಮ್ಲಜನಕ ಉಪಕರಣ : ಆಮದು ಶುಲ್ಕ ವಿನಾಯಿತಿ

ಬಹುದೊಡ್ಡ ಸವಾಲು ಮುಂದಿದೆ: ಹಳ್ಳಿಗಳಿಗೆ ಕರೊನಾ ಹರಡದಂತೆ ನೋಡಿಕೊಳ್ಳಿ ಎಂದು ಪಂಚಾಯಿತಿಗಳಿಗೆ ಸೂಚನೆ ಕೊಟ್ಟ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 7 =
Remember me
