ಅಹಮದಾಬಾದ್​:ನಾವು ಪಾಕಿಸ್ತಾನದಲ್ಲಿ ಇರುವ ನಮ್ಮ ಮನೆಗಳಿಗೆ ಹೋಗುವುದಿಲ್ಲ. ಇಲ್ಲೇ ಭಾರತದಲ್ಲಿ ಇದ್ದು ಬಿಡುತ್ತೇವೆ. ಕರೊನಾ ಸೋಂಕು ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ಲಾಕ್​ಡೌನ್​ನಿಂದ ಭಾರತಕ್ಕೆ ಬಂದು ಸಿಲುಕಿಕೊಂಡಿರುವ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ…
ಇದು ಭಾರತದಲ್ಲಿನ ತನ್ನ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದ ಪಾಕಿಸ್ತಾನದ ಅಲ್ಪಸಂಖ್ಯಾತರ ಮಾತು.ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿ ಬದುಕುವುದು ತುಂಬಾ ಕಷ್ಟ. ಭಾರತದ ಸರ್ಕಾರ ಮತ್ತು ಜನರು ಕರೊನಾ ಸೋಂಕು ನಿಗ್ರಹಕ್ಕೆ ಹೇಗೆಲ್ಲಾ ಹೋರಾಡುತ್ತಿದ್ದಾರೆ ಎಂಬುದನ್ನು ಕಣ್ಣಾರೆ ಕಂಡ ಬಳಿಕ ನಾವು ಪಾಕಿಸ್ತಾನಕ್ಕೆ ಮರಳದಿರಲು ನಿರ್ಧರಿಸಿದ್ದೇವೆ ಎಂದು ಪಾಕಿಸ್ತಾನದಿಂದ ವಲಸೆ ಬಂದಿರುವ ಅರ್ಜುನ್​ ಹೇಳಿದ್ದಾರೆ.
ಲಾಕ್​ಡೌನ್​ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ನಾವು ಒಂದು ಗುಂಪಾಗಿ ಭಾರತಕ್ಕೆ ಬಂದಿದ್ದೆವು. ನಾವು ಪಾಕಿಸ್ತಾನದವರು ಎಂಬುದು ಗೊತ್ತಾದ ನಂತರದಲ್ಲಿ ಜಿಲ್ಲಾಡಳಿತ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದೆ. ಇದಕ್ಕಾಗಿ ನಾವು ಚಿರಋಣಿಗಳು. ನಮ್ಮ ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ನಾವು ಭಾರತದಲ್ಲೇ ಉಳಿಯಲು ನಿರ್ಧರಿಸಿದ್ದೇವೆ ಎಂದು ಮಾಲಾ ಪಾರ್ಮಾರ್​ ಎಂಬುವರು ತಿಳಿಸಿದ್ದಾರೆ.
ಕೋವಿಡ್-19: ರಾಜ್ಯ ಸರ್ಕಾರದ ಹೊಸ ಪರೀಕ್ಷಾ ನೀತಿ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
