ನವದೆಹಲಿ:ಕೋವಿಡ್​-19 ಲಾಕ್​ಡೌನ್​ನಿಂದ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಚ್ಚಲ್ಪಟ್ಟಿರುವ ಶಾಲೆ-ಕಾಲೇಜುಗಳನ್ನು ಆಗಸ್ಟ್​ 15ರ ನಂತರದಲ್ಲಿ ಪುನರಾರಂಭಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಮಕ್ಕಳ ಪಾಲಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೋವಿಡ್​-19 ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಅಥವಾ ಸೂಕ್ತ ಲಸಿಕೆ ಕಂಡುಹಿಡಿಯುವವರೆಗೆ ಶಾಲೆ-ಕಾಲೇಜುಗಳನ್ನು ಪುನರಾರಂಭಿಸಬೇಡಿ. ಕನಿಷ್ಠಪಕ್ಷ ಅಕ್ಟೋಬರ್​ವರೆಗೆ ಈ ನಿರ್ಧಾರವನ್ನು ಮುಂದೂಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿ ಕೋವಿಂದ, ಪ್ರಧಾನಿ ಮೋದಿಗಾಗಿ ಬರಲಿರುವ ವಿಮಾನಗಳು ಹೇಗಿವೆ ಗೊತ್ತಾ…?
ಟ್ವಿಟರ್​ನಲ್ಲಿ ತಮ್ಮೆಲ್ಲ ಆಕ್ರೋಶ, ಆತಂಕವನ್ನು ಹಂಚಿಕೊಂಡಿರುವ ಪಾಲಕರು, ನಿಮಗೆ ಅಷ್ಟೊಂದು ಧೈರ್ಯ ಇರುವುದಾದರೆ ಮೊದಲಿಗೆ ಸಂಸತ್​ನ ಮುಂಗಾರು ಅಧಿವೇಶನ ಆರಂಭಿಸಿ. ಆಮೇಲೆ ಬೇಕಾದರೆ ಶಾಲೆಗಳ ಪುನರಾರಂಭದ ಬಗ್ಗೆ ಆಲೋಚಿಸಿ ಎಂದು ಹೇಳಿದ್ದಾರೆ.ಕಳೆದ 24 ಗಂಟೆಗಳಲ್ಲಿ ದಾಖಲೆಯ 9,971 ಕೋವಿಡ್​-19 ಪ್ರಕರಣಗಳು ದೇಶದಲ್ಲಿ ವರದಿಯಾಗುವ ಮೂಲಕ ಒಟ್ಟಾರೆ ಸೋಂಕಿತರ ಲೆಕ್ಕದಲ್ಲಿ ಭಾರತ ವಿಶ್ವದಲ್ಲೇ 5ನೇ ಸ್ಥಾನಕ್ಕೇರಿದೆ. ಸೋಂಕಿತರ ಪೈಕಿ 287 ಮಂದಿ ಮೃತಪಟ್ಟಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ದೇಶಾದ್ಯಂತ ಶಾಲೆ-ಕಾಲೇಜು ಆರಂಭಿಸುವ ಮೂಲಕ ಒಟ್ಟು 33 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಜೀವವನ್ನು ಕರೊನಾ ಸೋಂಕಿನ ಅಪಾಯಕ್ಕೆ ಒಡ್ಡುವುದು ಸೂಕ್ತವಲ್ಲ ಎಂದು ಪಾಲಕರು ಪ್ರತಿಪಾದಿಸಿದ್ದಾರೆ.
ನಾವು ಕಳುಹಿಸುವುದಿಲ್ಲ:ಸರ್ಕಾರ ಬೇಕಾದರೆ ಆಗಸ್ಟ್​ 15ರ ನಂತರ ಶಾಲೆ-ಕಾಲೇಜುಗಳನ್ನು ಆರಂಭಿಸಲಿ. ಆದರೆ, ನಾವು ಮಾತ್ರ ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಕಳುಹಿಸಿದರೆ ಅದೊಂದು ರೀತಿ ಬೆಂಕಿಯೊಡನೆ ಸರಸವಾಡಿದಂತೆ ಎಂದು ಪಾಲಕರು ಹೇಳಿದ್ದಾರೆ.
ನೂರು ಕನಸು ಹೊತ್ತು ಗಂಡನ ಮನೆಗೆ ಹೋದಾಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
