ನವದೆಹಲಿ:ಕಳೆದ ಮೂರು ವರ್ಷಗಳಲ್ಲಿ ಅಂದರೆ 2020ರಿಂದ ಈಚೆಗೆ ಜಗತ್ತಿನ ಐವರು ಅತಿಶ್ರೀಮಂತರ ಆಸ್ತಿ ದುಪ್ಪಟ್ಟಾಗಿದೆ. ಮತ್ತೊಂದೆಡೆ 500 ಕೋಟಿ ಮಂದಿ ಬಡವರಾಗಿದ್ದಾರೆ. ವರ್ಲ್ಡ್ ಎಕಾನಮಿಕ್ ಫೋರಂ ವಾರ್ಷಿಕ ಸಭೆಯ ಮೊದಲ ದಿನ ಆಕ್ಸ್​ಫ್ಯಾಮ್ ಬಿಡುಗಡೆ ಮಾಡಿದ ಅಂಕಿ-ಅಂಶದಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಜಗತ್ತಿನ ಹತ್ತು ಬೃಹತ್ ಕಂಪನಿಗಳಲ್ಲಿ ಏಳರ ಸಿಇಒ ಅಥವಾ ಪ್ರಿನ್ಸಿಪಲ್ ಶೇರ್ ಹೋಲ್ಡರ್ ಕೂಡ ಬಿಲಿಯನೇರ್​ಗಳಾಗಿದ್ದಾರೆ ಎಂಬುದನ್ನೂ ಆಕ್ಸ್​ಫ್ಯಾಮ್ ಹೇಳಿದೆ. ಅಲ್ಲದೆ 148 ದೊಡ್ಡ ನಿಗಮಗಳು 1.8 ಟ್ರಿಲಿಯನ್ ಲಾಭ ಗಳಿಸಿವೆ. ಇದು ಮೂರು ವರ್ಷಗಳ ಸರಾಸರಿಯಲ್ಲಿ ಶೇ. 52ರಂತೆ ಹೆಚ್ಚಳವಾಗಿದ್ದು, ಶ್ರೀಮಂತ ಪಾಲುದಾರರಿಗೆ ಭಾರಿ ಆದಾಯ ತಂದುಕೊಟ್ಟಿದೆ. ಆದರೆ ನೂರಾರು ದಶಲಕ್ಷಗಳಷ್ಟು ಮಂದಿ ತಮ್ಮ ರಿಯಲ್ ಟಮ್ರ್ ವೇತನದಲ್ಲಿ ಕಡಿತ ಎದುರಿಸಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಹತ್ತು ನಿಗಮಗಳ ಪೈಕಿ ಏಳು 10.2 ಟ್ರಿಲಿಯನ್ ಡಾಲರ್ ಮೌಲ್ಯದವಾಗಿದ್ದು, ಇದು ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ ಎಲ್ಲ ದೇಶಗಳ ಒಟ್ಟು ಜಿಡಿಪಿಗಳಿಗೆ ಸಮನಾಗಿದೆ ಎಂದೂ ಈ ಅಂಕಿ-ಅಂಶ ತಿಳಿಸಿದೆ.
ಬಡತನ ತೊಲಗಿಸಲು 229 ವರ್ಷಗಳು ಸಾಲದು!ಜಗತ್ತಿನ ಐವರು ಅತ್ಯಂತ ಶ್ರೀಮಂತ ವ್ಯಕ್ತಿಗಳ ಆಸ್ತಿ ಎರಡುಪಟ್ಟಿಗಿಂತಲೂ ಹೆಚ್ಚಾಗಿದ್ದು, 2020ರಲ್ಲಿ 405 ಬಿಲಿಯನ್ ಡಾಲರ್ ಇದ್ದ ಅದು ಈಗ 869 ಬಿಲಿಯನ್ ಡಾಲರ್ ಆಗಿದೆ. ಅಂದರೆ ಗಂಟೆಗೆ 14 ಮಿಲಿಯನ್ ಡಾಲರ್​ಗಳ ಲೆಕ್ಕದಲ್ಲಿ ಹೆಚ್ಚಾಗಿದೆ. ಆದರೆ ಸುಮಾರು 5 ಬಿಲಿಯನ್ ಮಂದಿ ಬಡವರಾಗಿದ್ದಾರೆ ಎಂದು ಅಸಮಾನತೆ ಮತ್ತು ಗ್ಲೋಬಲ್ ಕಾಪೋರೇಟ್ ಪವರ್ ಕುರಿತ ಆಕ್ಸ್​ಫ್ಯಾಮ್ ವರದಿ ಹೇಳಿದೆ. ಇದೇ ರೀತಿಯ ಬೆಳವಣಿಗೆ ಮುಂದುವರಿದರೆ ಇನ್ನು ಹತ್ತೇ ವರ್ಷಗಳಲ್ಲಿ ಜಗತ್ತು ತನ್ನ ಮೊದಲ ಟ್ರಿಲಿಯನೇರ್ ಕಾಣಲಿದೆ. ಆದರೆ ಬಡತನವನ್ನು ನಿವಾರಿಸಲು 229 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದೂ ಹೇಳಿದೆ.
ಭಾರತದ 24.8 ಕೋಟಿ ಜನ ಬಡತನದಿಂದ ಮುಕ್ತಭಾರತದಲ್ಲಿ ಕಳೆದ 9 ವರ್ಷಗಳಲ್ಲಿ ಬಹು ಆಯಾಮದ ಬಡತನದಿಂದ ಹೊರಬಂದವರ ಸಂಖ್ಯೆ 24.8 ಕೋಟಿಗೂ ಅಧಿಕ ಎಂದು ನೀತಿ ಆಯೋಗ ತಿಳಿಸಿದೆ. 2013-14ರಿಂದ 2022-23ರ ಅವಧಿಯಲ್ಲಿ ಇದು ಸಂಭವಿಸಿದ್ದು, ಆ ಪೈಕಿ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಆಗಿದೆ ಎಂದು ಆಯೋಗ ಹೇಳಿದೆ. ಆರೋಗ್ಯ, ಶಿಕ್ಷಣ, ಜೀವನಮಟ್ಟಗಳಲ್ಲಿನ ಒಟ್ಟಾರೆ ಸುಧಾರಣೆ ಸೇರಿದಂತೆ 12 ವಿವಿಧ ಅಂಶಗಳ ಮೇಲೆ ಬಹು ಆಯಾಮ ಬಡತನವನ್ನು ನಿರ್ಧರಿಸಲಾಗುತ್ತದೆ ಎಂದು ಅದು ಹೇಳಿದೆ. ಭಾರತದಲ್ಲಿನ ಬಹು ಆಯಾಮ ಬಡತನ 2013-14ರಲ್ಲಿ ಶೇ. 29.17 ಇದ್ದಿದ್ದು, 2022-23ರಲ್ಲಿ ಅದು ಶೇ. 11.28ಕ್ಕೆ ಇಳಿದಿದೆ. ಈ ಮೂಲಕ 24.82 ಕೋಟಿಗೂ ಅಧಿಕ ಮಂದಿ ಬಹು ಆಯಾಮ ಬಡತನದಿಂದ ಹೊರಬಂದಿದ್ದಾರೆ ಎಂದು ಆಯೋಗ ಹೇಳಿದೆ.
ವಿರಾಟ್ ಕೊಹ್ಲಿ ಅಬ್ಬರದ​ ಬ್ಯಾಟಿಂಗ್ ಕಂಡು ವಾರ್ನಿಂಗ್​ ಕೊಟ್ಟ ಆಕಾಶ್​ ಚೋಪ್ರಾ​! ಆತಂಕದಲ್ಲಿ ಅಭಿಮಾನಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
