ಅಹಮದಾಬಾದ್​:ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಸೋಂಕಿನಿಂದ ದೂರವುಳಿಯಲು ಹಾಗೂ ಕೆಮ್ಮು ಮತ್ತು ಜ್ವರ ಇರುವಂಥವರಿಂದ ಸೋಂಕು ಬೇರೊಬ್ಬರಿಗೆ ಹರಡದಂತೆ ತಡೆಯಲು ಮಾಸ್ಕ್​ ಧರಿಸುವುದು ವಾಡಿಕೆಯಾಗಿದೆ. ಗುಜರಾತ್​ನ ಅಹಮದಾಬಾದ್​ನ ಸ್ಥಳೀಯ ಆಡಳಿತ ಸಂಸ್ಥೆ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಿದೆ.
ಒಂದು ವೇಳೆ ಮಾಸ್ಕ್​ ಧರಿಸದೆ ಯಾರಾದರೂ ಹೊರಬಂದರೆ, ತಿರುಗಾಡುತ್ತಿರುವುದು ಕಂಡರೆ ಅಂಥ ವ್ಯಕ್ತಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇಲ್ಲವೇ 3 ವರ್ಷ ಸೆರೆವಾಸದ ಶಿಕ್ಷೆಗೆ ಗುರಿಪಡಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಹಮದಾಬಾದ್​ ಮಹಾನಗರಪಾಲಿಕೆಯ ಆಯುಕ್ತ ವಿಜಯ್​ ನೆಹ್ರಾ, ಈ ನಿಯಮ ಸೋಮವಾರ ಬೆಳಗ್ಗೆ 6 ಗಂಟೆಯಿಂದ (ಏಪ್ರಿಲ್​ 13) ಜಾರಿಗೆ ಬರುತ್ತಿದೆ. ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆಯನ್ವಯ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಮಾಸ್ಕ್​ ಧರಿಸುವ ಕಡ್ಡಾಯ ನಿಯಮ ಉಲ್ಲಂಘಿಸುವವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ದಂಡ ಪಾವತಿಸದಿದ್ದರೆ, ತಪ್ಪಿತಸ್ಥರನ್ನು 3 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಂಗಡಿಗಳಲ್ಲಿ ಸಿಗುವ ಮಾಸ್ಕ್​ಗಳು ಇಲ್ಲವೇ ಮನೆಯಲ್ಲಿ ತಯಾರಿಸಿದ ಮಾಸ್ಕ್​ಗಳಲ್ಲಿ ಯಾವುದನ್ನಾದರೂ ಜನರು ಧರಿಸಬಹುದಾಗಿದೆ. ಇಲ್ಲವೇ ಮೂಗು ಮತ್ತು ಬಾಯಿ ಮುಚ್ಚುವ ರೀತಿಯಲ್ಲಿ ಕರವಸ್ತ್ರವನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ವಿವರಿಸಿದ್ದಾರೆ.ಸಾರ್ವಜನಿಕರಲ್ಲದೆ ಬೀದಿಬದಿ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು ಮತ್ತಿತರರಿಗೂ ಈ ಆದೇಶ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.
https://www.vijayavani.net/is-helicopter-money-good-idea/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + thirteen =
Remember me
