ಲಖನೌ:ಹುಡುಗಿ ವೇಷ ಧರಿಸಿ ಪ್ರೇಯಸಿಯನ್ನು ಭೇಟಿಯಾಗಲು ಬರುವ ದೃಶ್ಯಗಳನ್ನು ಸಾಮಾನ್ಯವಾಗಿ ನೀವು ಸಿನಿಮಾಗಳಲ್ಲಿ ನೋಡಿರುತ್ತೀರಿ. ಆದರೆ, ಇದೀಗ ಅಂಥದ್ದೇ ದೃಶ್ಯ ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ನಿಜವಾಗಿದೆ ನಡೆದಿದೆ. ಆದರೆ, ಈ ಪ್ರಕರಣದಲ್ಲಿ ಬುರ್ಖಾ ಧರಿಸಿ ಬಂದವನಿಗೆ ಕೊನೆಯಲ್ಲಿ ಒಂದು ಟ್ವಿಸ್ಟ್​ ಕಾದಿತ್ತು. ಅದೇನು ಅಂತಾ ನಾವೀಗ ತಿಳಿಯೋಣ.
ಮೊರಾದಾಬಾದ್‌ನಲ್ಲಿ ಹಗಲು ಹೊತ್ತಿನಲ್ಲಿ ಈ ಘಟನೆ ನಡೆದಿದೆ. ಬುರ್ಖಾ ಧರಿಸಿ ಬಂದಿದ್ದ ವ್ಯಕ್ತಿಯನ್ನು ಚಾಂದ್ ಭುರಾ ಎಂದು ಗುರುತಿಸಲಾಗಿದೆ. ಆತನ ಹೇಳಿಕೆ ಪ್ರಕಾರ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದಿದ್ದಾನೆ. ಆತನ ವಿಚಿತ್ರ ವರ್ತನೆಯನ್ನು ಕಂಡ ಸ್ಥಳೀಯರು, ನಿಲ್ಲಿಸಿ ಬುರ್ಖಾ ತೆಗಿಸಿದ್ದಾರೆ. ಮಹಿಳೆಯಲ್ಲ, ಪುರುಷನೆಂದು ಗೊತ್ತಾದ ಕೂಡಲೇ ಮಕ್ಕಳ ಕಳ್ಳನೆಂದು ಸಂಶಯ ವ್ಯಕ್ತಪಡಿಸಿ, ಸ್ಥಳದಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ಬುರ್ಖಾಧಾರಿ ಮಹಿಳೆಯ ವೇಷದಲ್ಲಿದ್ದ ವ್ಯಕ್ತಿ ಒಂದು ಕಟ್ಟಡದಿಂದ ಹೊರಗೆ ಬರುತ್ತಾನೆ. ಆತನ ವಿಚಿತ್ರ ವರ್ತನೆ ಕಂಡು ಅಲ್ಲಿಯೇ ಇದ್ದ ಜನರು ತಡೆಯುತ್ತಾರೆ. ಬಳಿಕ ಬುರ್ಖಾ ತೆಗೆಯುವಂತೆ ಹೇಳುತ್ತಾರೆ. ಆದರೆ, ಆತ ಮುಖಕ್ಕೆ ಕಟ್ಟಿದ ಹಿಜಾಬ್​ ತೆಗೆಯುತ್ತಾನೆ. ಬಳಿಕ ಅಲ್ಲಿದ್ದವರು ಮುಖ ಸುತ್ತಿದ್ದ ಬಟ್ಟೆಯನ್ನು ಸಂಪೂರ್ಣ ತೆಗೆಸಿದಾಗ ಆತನ ನಿಜ ಸ್ವರೂಪ ಬಯಲಾಗುತ್ತದೆ. ಮಹಿಳೆಯಲ್ಲ ಪುರಷನೆಂಬುದು ಗೊತ್ತಾಗುತ್ತದೆ. ಇದರಿಂದ ಒಂದು ಕ್ಷಣ ಅಚ್ಚರಿಗೀಡಾಗುತ್ತಾರೆ. ಬಳಿಕ ಇನ್ನಷ್ಟು ಜನರು ಅಲ್ಲಿಗೆ ಸೇರುತ್ತಾರೆ. ಆತನನ್ನು ಪ್ರಶ್ನಿಸಿದಾಗ ನಾನು ತನ್ನ ಪ್ರೇಯಸಿ ಭೇಟಿಯಾಗಲು ಬಂದಿದ್ದಾಗಿ ಹೇಳುತ್ತಾನೆ. ಆದರೆ, ಆತನನ್ನು ನಂಬದ ಸ್ಥಳೀಯರು ಕಳ್ಳನೆಂದು ಭಾವಿಸಿ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಕೋಲಿನಿಂದೆಲ್ಲ ಹಲ್ಲೆ ಮಾಡುತ್ತಾರೆ. ಇದಿಷ್ಟು ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿದೆ.
इन जनाब पर आशिक़ी का भूत कुछ ज़्यादा ही सवार था. बुर्का पहन प्रेमिका से मिलने उसके मोहल्ले में पहुंच गये. लोगों ने पकड़ लिया.
चाल-ढाल देख लोगों को शक हुआ, जिसके बाद ये हुआ. पहले तो लोगों को लगा कि यह बच्चा चोर है,लेकिन पुलिस आने के बाद मामला क्लीयर हुआ.pic.twitter.com/RXLE7iMJcZ
— Priya singh (@priyarajputlive)September 1, 2024

ಈ ಮಾಹಿತಿ ಪೊಲೀಸರಿಗೆ ಗೊತ್ತಾದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಉದ್ರಿಕ್ತ ಗುಂಪಿನಿಂದ ರಕ್ಷಿಸಿ, ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.(ಏಜೆನ್ಸೀಸ್​)
ತಮ್ಮ ತಂಡದಲ್ಲಿ ಕೊಹ್ಲಿಗೆ ಸ್ಥಾನ ನೀಡಿ ರೋಹಿತ್​, ಬುಮ್ರಾಗೆ ಶಾಕ್​ ಕೊಟ್ಟ ಗೌತಮ್​ ಗಂಭೀರ್​!

ಬಾಹ್ಯಾಕಾಶದಲ್ಲಿ ಸ್ಟಾರ್​ಲೈನರ್ ನೌಕೆಯಲ್ಲಿ ಕೇಳಿಬಂತು ನಿಗೂಢ ಶಬ್ದ​: ಸುನಿತಾ ವಿಲಿಯಮ್ಸ್ ಜೀವಕ್ಕೆ ಅಪಾಯ?​!

ಒಂಟಿ ಕಾಲಿನ ಮೇಲೆ ನೀವು ಇಷ್ಟು ಸೆಕೆಂಡ್ ನಿಲ್ಲಲೇಬೇಕು! ಇಲ್ಲವಾದಲ್ಲಿ ಸಾವು ಸಮೀಪಿಸುತ್ತಿದೆ ಎಂದರ್ಥ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 4 =
Remember me
