ನವದೆಹಲಿ:ಮಹಿಳೆಯರು ಶಾರ್ಟ್​ ಸ್ಕರ್ಟ್​ ಧರಿಸಿ ನೃತ್ಯ ಮಾಡುವುದು ಆಶ್ಲೀಲತೆ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬ್​ ಹೈಕೋರ್ಟ್​ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ. ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನಾಗ್ಪುರ ಪೀಠದ ನ್ಯಾಯಮೂರ್ತಿಗಳಾದ ಜಸ್ಟೀಸ್​​​ ವಾಲ್ಮೀಕಿ ಮೆಂಗಸ್​​​ ಹಾಗೂ ಜಸ್ಟೀಸ್​​ ವಿನಯ್​​ ಜೋಶಿ ಅವರಿದ್ದ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶಿದೆ.
ಕಳೆದ 2023ರ ಮೇ 31ರಂದು ನಾಗುರ ಜಿಲ್ಲೆಯ ಪ್ಯಾರಡೈಸ್ ರೆಸಾರ್ಟ್ ವಾಟರ್ ಪಾರ್ಕ್ ತಿರ್ಕುರಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮಹಿಳೆಯರು ಶಾರ್ಟ್ ಸ್ಕರ್ಟ್‌ಗಳಲ್ಲಿ ನೃತ್ಯ ಮಾಡುತ್ತಿದ್ದರು. ಮಹಿಳೆಯರು ನೃತ್ಯ ಮಾಡುವಾಗ ಪುರುಷರು ಅವರ ಮೇಲೆ ಹಣವನ್ನು ಸುರಿಯುತ್ತಿದ್ದರು. ಈ ಸಂಬಂಧ ಮಹಿಳೆಯರ ವಿರುದ್ಧ ಮಹಾರಾಷ್ಟ್ರ ನಿಷೇಧ ಕಾಯ್ದೆ 1949ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಶಾರ್ಟ್ ಸ್ಕರ್ಟ್ ಧರಿಸಿ ನೃತ್ಯ ಮಾಡಿದ ಸಂಬಂಧ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಐವರು ಮಹಿಳೆಯರು ಬಾಂಬೆ ಹೈಕೋರ್ಟ್ ನಾಗುರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲ ಅಕ್ಷಯ್ ನಾಯ್ ವಾದ ಮಂಡಿಸಿ:ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 24ರ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರ ನೃತ್ಯದಿಂದಾಗಿ ಬೇರೆಯವರಿಗೆ ಸಮಸ್ಯೆ ಉಂಟಾದ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ ಮಹಿಳೆಯರ ನೃತ್ಯ ಅಶ್ಲೀಲ ಎಂದು ಹೇಳಲಾಗದು ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಡೊಯಿಫೋಡ್ ವಾದ ಮಂಡಿಸಿ:ಪೊಲೀಸರ ಪರವಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ. ನೃತ್ಯದ ಬಗ್ಗೆ ಜನರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಹೇಳಿದರು.  ವಾದ – ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಮಹತ್ತರವಾದ ತೀರ್ಪು ನೀಡಿದೆ.
ಕೋರ್ಟ್​​ ಹೇಳಿದ್ದೇನು?:ಮಹಿಳೆಯರು ಶಾರ್ಟ್‌ ಸ್ಕರ್ಟ್‌ಗಳಲ್ಲಿ ನೃತ್ಯ ಮಾಡುವುದು ಅಶ್ಲೀಲತೆ ಮತ್ತು ಅನೈತಿಕತೆಗೆ ಸಮಾನವಲ್ಲ. ಸೆನ್ಸಾರ್‌ಶಿಪ್‌ನಲ್ಲಿ ಪಾಸಾದ ಚಲನಚಿತ್ರಗಳಲ್ಲಿ ತುಂಡು ಉಡುಗೆ ಬಳಕೆಯನ್ನು ಕಾಣಬಹುದು. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳಲ್ಲಿಯೂ ಇಂತಹ ಉಡುಪುಗಳನ್ನು ನೋಡಬಹುದಾಗಿದೆ. ಇಂತಹ ಘಟನೆಗಳನ್ನು ಪ್ರಗತಿಪರ ಚಿಂತನೆಯಿಂದ ನೋಡುವಂತೆ ಪೊಲೀಸರಿಗೆ ನ್ಯಾಯಾಲಯ ಸಲಹೆ ನೀಡಿತು. ಜತೆಗೆ ಅರ್ಜಿದಾರರ ವಿರುದ್ಧ ಸಲ್ಲಿಸಲಾದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿ ತೀರ್ಪು ನೀಡಿದೆ.
ಗೋವಾದಲ್ಲಿ ಮನೆ ಮಾಡಿದ ದಕ್ಷಿಣ ಆಫ್ರಿಕಾ‌ ಕ್ರಿಕೆಟರ್ ಜಾಂಟಿ ರೋಡ್ಸ್

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:four × five =
Remember me
