ಉತ್ತರ ಪ್ರದೇಶ:ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ವಿಲಕ್ಷಣ ಸಂಪ್ರದಾಯಗಳನ್ನು ಅಳವಡಿಸಲಾಗುತ್ತಿದೆ. ವಿಚಿತ್ರ ಸಂಗತಿಗಳು ನಡೆಯುತ್ತಿವೆ. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಮದುವೆಯೊಂದು ಮುರಿದು ಬಿಳಲು ಕಾರಣ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.
ಹೌದು ಮಕ್ಕಳ ಮದುವೆ ಎಂದರೆ ಪೋಷಕರಿಗೆ ಸಂತೋಷ, ಸಂಭ್ರಮ. ಆದರೆ ಇಲ್ಲೊಬ್ಬಳು ತಾಯಿ ಮಗಳ ಮದುವೆಯಲ್ಲಿ ಸಿಗರೇಟ್ ಹಚ್ಚಿ ಡಿಜೆ ಹಾಡುಗಳಿಗೆ ಡ್ಯಾನ್ಸ್ ಮಾಡಿದ ಕಾರಣ ಮದುವೆ ಮುರಿದು ಬಿದ್ದಿದೆ.
ರಾಜಪುರದ ಹುಡುಗಿಯೊಂದಿಗೆ ಸರಯಾತ್ರಿನ್‌ನ ಯುವಕನ ವಿವಾಹವನ್ನು ಏರ್ಪಡಿಸಲಾಗಿತ್ತು. ಮದುವೆಯ ಪೂರ್ವ ಸಮಾರಂಭವನ್ನು ಚೆನ್ನಾಗಿ ಮಾಡಲಾಗಿತ್ತು. ಎಲ್ಲರೂ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಸಂಭ್ರಮಾಚರಣೆಯ ನಡುವೆಯೇ ವಧುವಿನ ತಾಯಿ ಸಿಗರೇಟ್ ಸೇದುತ್ತಾ ಡ್ಯಾನ್ಸ್ ಮಾಡುತ್ತಿದ್ದುದನ್ನು ವರನು ನೋಡಿದ್ದಾನೆ. ಕೂಡಲೇ ಮದುವೆ ನಿಲ್ಲಿಸುವಂತೆ ಕುಟುಂಬಸ್ಥರಿಗೆ ತಿಳಿಸಿದರು. ತದನಂತರ ಎರಡು ಕುಟುಂಬಗಳ ನಡುವೆ ತೀವ್ರ ಜಗಳ ನಡೆದಿದೆ.
A post shared by Joohi K Patel | Vadodara Food Blogger (@joohiie)
ಕುಟುಂಬಗಳ ನಡುವೆ ಪಂಚಾಯತಿ ನಡೆದಿದೆ. ಹಿರಿಯರ ಮಧ್ಯಸ್ಥಿಕೆ ವಹಿಸಿದ ನಂತರ ಎರಡು ಕುಟುಂಬಗಳು ಮದುವೆಗೆ ಒಪ್ಪಿದವು. ಒಟ್ಟಿನಲ್ಲಿ ನಿಂತು ಹೋಗಿದ್ದ ಮದುವೆಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದಾಗ ಎಲ್ಲರಿಗೂ ಖುಷಿಯಾಯಿತು.
ಇತ್ತ ಮತ್ತೊಂದು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅತ್ತೆ-ಮಾವ ವರನಿಗೆ ಸಿಗರೇಟು ಕೊಟ್ಟು ಸ್ವಾಗತಿಸಿರುವ ವಿಡಿಯೋ ವೈರಲ್ ಆಗಿದೆ. ಅಳಿಯನನ್ನು ಈ ರೀತಿ ಆಹ್ವಾನಿಸುತ್ತಿರುವ ಅತ್ತೆಯನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.
ಹೊಟ್ಟೆ ನೋವು ತಾಳಲಾರದೆ ಪ್ರಾಣ ಬಿಟ್ಟ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
