ಗೋದಾವರಿ:ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಅನುಭವ. ಹಾಗಾಗಿ ಕೆಲವರು ಮದುವೆ ಸಮಾರಂಭವನ್ನು ತಮ್ಮ ಜೀವನದುದ್ದಕ್ಕೂ ಸಿಹಿ ಸಂಕೇತವಾಗಿಸಲು ವಿನೂತನವಾಗಿ ಯೋಚಿಸುತ್ತಾರೆ. ಆಮಂತ್ರಣ ಪತ್ರಿಕೆಯಿಂದ ಹಿಡಿದು ಔತಣಕೂಟದದಲ್ಲಿ ಏನಾದರೂ ವಿಶೇಷತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಾರೆ. ಅದೇ ರೀತಿ ಪಶ್ಚಿಮ ಗೋದಾವರಿ ಜಿಲ್ಲೆಯ ಯುವಕನೊಬ್ಬ ತನ್ನ ಮದುವೆ ಆಮಂತ್ರಣವನ್ನು ವಿನೂತನವಾಗಿ ಪ್ರಿಂಟ್​ ಹಾಕಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.
ಪೆನುಮಂತ್ರ ಮಂಡಲ ಸಮೀಪದ ಚಿರ್ಲಾ ಕೃಷ್ಣಾರೆಡ್ಡಿ ಹಾಗೂ ಸಿರಿಶಾ ವಿವಾಹವನ್ನು ಸೆ.2ಕ್ಕೆ ನಿಗದಿ ಮಾಡಲಾಗಿದ್ದು, ಯುವಕ ಎಟಿಎಂ ಕಾರ್ಡ್‌ನ ಗಾತ್ರದಲ್ಲಿ ಮದುವೆ ಕಾರ್ಡ್​ ಪ್ರಿಂಟ್​ ಹಾಕಿಸಿದ್ದಾನೆ. ಅಲ್ಲದೇ ಈ ಕಾರ್ಡ್​ನಲ್ಲಿ ಕ್ಯೂಆರ್ ಕೋಡ್ ಮುದ್ರಿಸಿದ್ದು, ಈ ಕಾರ್ಡ್‌ಗಳನ್ನು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕೊಟ್ಟು ಮದುವೆಗೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ:ರಕ್ಷಾಬಂಧನಕ್ಕೂ ಮುನ್ನವೇ ಸಹೋದರನಿಗೆ ಎಂದಿಗೂ ಮರೆಯದ ಕೊಡುಗೆ ನೀಡಿದ ಅಕ್ಕ..
ಆ ಕಾರ್ಡ್‌ನಲ್ಲಿರುವ ವಿವರಗಳನ್ನು ತಿಳಿದುಕೊಳ್ಳಲು ನೀವು ಮೊಬೈಲ್ ಫೋನ್ ಹೊಂದಿರಬೇಕಾಗಿದ್ದು, ಕ್ಯೂಆರ್ ಕೋಡ್​​ನ್ನು ಸ್ಕ್ಯಾನ್ ಮಾಡುವ ಮೂಲಕ ಮದುವೆ ಸಮಾರಂಭದ ವಿವರಗಳು ಸೇರಿದಂತೆ, ಕಲ್ಯಾಣ ಮಂಟಪದ ಸ್ಥಳ, ಊಟದ ಸಮಯ ಇತ್ಯಾದಿಗಳನ್ನು ಪ್ರದರ್ಶಿಸುವಂತೆ ಮಾಡಲಾಗಿದೆ. ಜತೆಗೆ ವಧು ಮತ್ತು ವರನ ಫ್ರೀ ವೆಡ್ಡಿಂಗ್​ ಶೂಟ್​​ ಪೋಟೊಗಳನ್ನು ಸಹ ನೋಡಬಹುದಾಗಿದ್ದು, ಎಟಿಎಂ ಕಾರ್ಡ್ ಗಾತ್ರದ ಈ ಆಮಂತ್ರಣ ಪತ್ರ ನೋಡಲು ಆಕರ್ಷಕವಾಗಿದೆ.ಇದೀಗ ಈ ಕಾರ್ಡ್ ವೈರಲ್ ಆಗುತ್ತಿದ್ದು, ಇದನ್ನು ಬೆಂಗಳೂರಿನಲ್ಲಿ ವಿಶೇಷವಾಗಿ ಮುದ್ರಿಸಲಾಗಿದೆ. ಈ ಕಾರ್ಡ್​ ಸಿದ್ಧಪಡಿಸಲು ಸುಮಾರು 20 ದಿನಗಳನ್ನು ಬೇಕಾಯಿತು ಎಂದು ಹೇಳಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twenty =
Remember me
