ಚಂಡೀಗಢ (ಪಂಜಾಬ್​):ಮುಸುಕುಧಾರಿಯೊಬ್ಬನ ದುಷ್ಕೃತ್ಯದಿಂದ ಚಂಡೀಗಢದ ಹೋಟೆಲ್​ ಒಂದರಲ್ಲಿ ಬಹಳ ಸಂಭ್ರಮ ಸಡಗರದಿಂದ ನಡೆಯುತ್ತಿದ್ದ ಮದುವೆ ಒಂದು ಕ್ಷಣ ಕಣ್ಣೀರಿಗೆ ಜಾರಿದ ಘಟನೆ ನಡೆದಿದೆ.
ಸುಮಾರು 3 ಲಕ್ಷ ಮೌಲ್ಯದ ಉಡುಗೊರೆ, ಡೈಮಂಡ್​ ರಿಂಗ್​ ಮತ್ತು ಎರಡು ಮೊಬೈಲ್​ಗಳನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಿರುವುದು ಮದುವೆ ಸಂಭ್ರಮಕ್ಕೆ ಹುಳಿ ಹಿಂಡಿದಂತಾಗಿದೆ.
ಉಷಾ ಠಾಕೂರ್​ ಎಂಬುವರು ತನ್ನ ಮಗಳ ಮದುವೆಯನ್ನು ಚಂಡೀಗಢದ 22ನೇ ಸೆಕ್ಟರ್​ನ ಹೋಟೆಲ್​ ಒಂದರಲ್ಲಿ ಆಯೋಜಿಸಿದ್ದರು. ಈ ವೇಳೆ ಅವರು ಒಂದು ಹ್ಯಾಂಡ್​ಬ್ಯಾಗ್​​ ಅನ್ನು ತೆಗೆದುಕೊಂಡು ಹೋಗಿದ್ದರಂತೆ. ಅದರಲ್ಲಿ ನವದಂಪತಿಗೆ ನೀಡಿದ 3 ಲಕ್ಷ ರೂ. ಮೌಲ್ಯದ ಉಡುಗೊರೆ ಸೇರಿದಂತೆ ಡೈಮಂಡ್​ ರಿಂಗ್​ ಮತ್ತು ಎರಡು ಮೊಬೈಲ್​ಗಳನ್ನು ಇಟ್ಟಿದ್ದರಂತೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ ಹ್ಯಾಂಡ್​ ಬ್ಯಾಗ್​​ ಇರಲಿಲ್ಲ ಎಂದು ಉಷಾ ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಂಗನಾ ವಿರುದ್ಧ ಕ್ರಿಮಿನಲ್​ ದೂರು; ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ, ಆದರೆ…
ಪ್ರಕರಣ ದಾಖಲಿಸಿಕೊಂಡ ಬಳಿಕ ಮದುವೆ ನಡೆದ ಹೋಟೆಲ್​ನ ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಸಂಬಧಿಕರ ವೇಷದಲ್ಲಿ ಬಂದಿದ್ದ ಮುಸುಕುಧಾರಿಯ ದುಷ್ಕೃತ್ಯ ಬಯಲಾಗಿದೆ. ಹ್ಯಾಂಡ್​ಬ್ಯಾಗ್​ ಹಿಡಿದುಕೊಂಡು ಹೋಡೆಲ್​ನಿಂದ ಹೊರಗಡೆ ಹೋಗಿತ್ತಿರುವ ದೃಶ್ಯ ಸೆರೆಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಖದೀಮನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ನ.17ಕ್ಕೆ ಕಾಲೇಜು ಆರಂಭ, ತರಗತಿಗೆ ಬರೋದು-ಬಿಡೋದು ವಿದ್ಯಾರ್ಥಿಗಳಿಗೆ ಬಿಟ್ಟದ್ದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
