ಭೋಪಾಲ್​:ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿನ ನಿಯಂತ್ರಣಕ್ಕೆಂದು ಲಾಕ್​ಡೌನ್​ ಮಾಡಲಾಗಿದೆ. ಲಾಕ್​ಡೌನ್​ ಮುಗಿಯುವವರೆಗೂ ದಯವಿಟ್ಟು ಯಾರೂ ಹೊರಗೆ ಹೋಗಬೇಡಿ, ಮದುವೆ ಕಾರ್ಯಕ್ರಮ ಎಂದು ಓಡಾಡಬೇಡಿ ಎಂದು ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೂ ಕೇಳದೆ ಮದುವೆಗೆ ಹೋಗಿದ್ದ ಜನರಿಗೆ ಪೊಲೀಸರು ವಿಶೇಷ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ನಡೆದಿದೆ.
ಭಿಂದ್​ ಜಿಲ್ಲೆಯ ಉಮಾರಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಸುಮಾರು 300 ಜನರು ಸೇರಿಕೊಂಡು ಭರ್ಜರಿಯಾಗಿ ಮದುವೆ ಮಾಡುತ್ತಿದ್ದರು. ಈ ವೇಳೆ ಕರೊನಾ ನಿಯಮ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಲು ಪೊಲೀಸರು ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ನೂರಾರು ಜನರು ಮಾಸ್ಕ್​, ಸಾಮಾಜಿಕ ಅಂತರವಿಲ್ಲದೆಯೇ ಮದುವೆ ಮಾಡುತ್ತಿದ್ದುದ್ದನ್ನು ಕಂಡ ಪೊಲೀಸರು, ಅವರಿಗೆ ಶಿಕ್ಷೆ ನೀಡುವ ನಿರ್ಧಾರ ಮಾಡಿದ್ದಾರೆ.
ಅಯ್ಯಯ್ಯೋ.. ಈ ಮದುವೆ ಸಹವಾಸ ಬೇಡಪ್ಪೋ…ಲಾಕ್​ಡೌನ್​ ನಿಯಮ ಮೀರಿ ಮದುವೆಗೆ ತೆರಳಿದ್ದ ಜನರಿಗೆ ಪೊಲೀಸರು ಕಪ್ಪೆ ಓಟದ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯ ಉಮಾರಿ ಗ್ರಾಮದಲ್ಲಿ ನಡೆದಿದೆ. ಶಿಕ್ಷೆ ಅನುಭವಿಸಿದ ಜನರು ಮದುವೆ ಸಹವಾಸ ಸಾಕೆನ್ನುತ್ತ ಮನೆಗೆ ತೆರಳಿದ್ದಾರೆ.pic.twitter.com/m78cpZjcTz
— Vijayavani (@VVani4U)May 20, 2021

ಪೊಲೀಸರು ಬಂದಿದ್ದನ್ನು ಕಂಡೊಡನೆ ಅನೇಕರು ಮದುವೆ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಸುತ್ತುವರೆದ ಪೊಲೀಸರು ಸಾಕಷ್ಟು ಜನರಿಗೆ ಕಪ್ಪೆ ಓಟ ಮಾಡುವ ಶಿಕ್ಷೆ ನೀಡಿದ್ದಾರೆ. ಈ ಶಿಕ್ಷೆಯ ವಿಡಿಯೋ ಕೂಡ ವೈರಲ್​ ಆಗಿದೆ. (ಏಜೆನ್ಸೀಸ್)
ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − ten =
Remember me
