ಎಲತ್ತೂರು: ಜನತಾ ಕರ್ಫ್ಯೂವನ್ನು ಬೆಂಬಲಿಸಬೇಕು ಎಂದು ಕೇರಳ ಸರ್ಕಾರ ರಾಜ್ಯದ ಜನತೆಗೆ ಸೂಚನೆ ನೀಡಿದ್ದರ ಹೊರತಾಗಿಯೂ, ಅದನ್ನು ಉಲ್ಲಂಘಿಸಿ ವಿವಾಹ ನಡೆಸಿದ ವಧುವಿನ ತಂದೆ ಮತ್ತು ಇತರೆ 50 ಜನರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ವರನ ಕಡೆಯವರ ದಿಬ್ಬಣ ಕರೆದುಕೊಂಡು ಬಂದಿದ್ದ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.
ಎಲತ್ತೂರು ರೈಲ್ವೆ ಸ್ಟೇಷನ್​ನ ಪೂರ್ವಕ್ಕೆ ಇರುವ ಮನೆಯೊಂದರಲ್ಲಿ ಈ ವಿವಾಹ ನಡೆದಿದ್ದು, ಅಲ್ಲಿ ಭಾರಿ ಜನ ಸಂದಣಿ ಸೇರಿದ ಕಾರಣ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಅಲ್ಲದೆ, ಜನಸಂದಣಿ ಸೇರದಂತೆ ಆದೇಶಿಸಿದ್ದರು. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ವರನ ಕಡೆಯಿಂದ ಭಾರಿ ಪ್ರಮಾಣದ ಬಂಧುಗಳು, ಸ್ನೇಹಿತರು ಆಗಮಿಸಿದ್ದರು. ಆದರೆ, ವಧುವಿನ ಕಡೆಯಿಂದ ಬೆರಳೆಣಿಕೆ ಜನ ಮಾತ್ರ ಇದ್ದರು.
ಈ ವಿವಾಹಕ್ಕೆ ಸಂಬಂಧಿಸಿ ವಧುವಿನ ಕಡೆಯವರು ಸ್ಥಳೀಯಾಡಳಿತ ಸಂಸ್ಥೆಗೆ ಮದುವೆಯ ಮಾಹಿತಿ ನೀಡಿದ್ದರು. ಇದರಂತೆ, ಅವರು ಸಣ್ಣ ಮಟ್ಟಿನಲ್ಲಿ ಮದುವೆ ನಡೆಸುವುದಕ್ಕೆ ಆಕ್ಷೇಪವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. ಆದರೆ, ಹೆಲ್ತ್ ಇನ್​ಸ್ಪೆಕ್ಟರ್ ಒಬ್ಬರು ಹೇಳುವ ಪ್ರಕಾರ, ವಿಶೇಷ ಮತ್ತು ತುರ್ತು ಸನ್ನಿವೇಶ ಎದುರಾಗಿರುವ ಕಾರಣ ಮದುವೆಯನ್ನು ಮುಂದೂವಂತೆ ಕುಟುಂಬಗಳಿಗೆ ಸೂಚಿಸಲಾಗಿತ್ತು. ಆದರೆ, ಎರಡೂ ಕುಟುಂಬವರು ಆದೇಶ ಮೀರಿ, ಅರೋಗ್ಯ ಇಲಾಖೆಗೂ ಸುಳಿವು ನೀಡದೆ ಮದುವೆ ಕಾರ್ಯ ಮುಗಿಸಿದ್ದಾರೆ.
ಜನಸಂದಣಿ ಸೇರಿದ ಕಾರಣ ಸುದ್ದಿ ಬಹಳ ಬೇಗ ಪೊಲೀಸ್ ಠಾಣೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂತು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಮದುವೆ ಮುಗಿಯತ್ತಿದ್ದಂತೆ ವರನ ಕುಟುಂಬದವರು ಆಗಮಿಸಿದ ವಾಹನವನ್ನು ಜಪ್ತಿಮಾಡಿ, 50 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಗ್ಯ ಅಧಿಕಾರಿಗಳು ಅಗತ್ಯ ತಪಾಸಣೆ ಮಾಡಿದ್ದಾರೆ. (ಏಜೆನ್ಸೀಸ್)
ಕರೊನಾ ಭೀತಿ: ಲಾಕ್​ಡೌನ್ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆಯಾಗಲಿದೆ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
