ಕೇಂದ್ರಪಾರಾ:ಲಾಕ್​ಡೌನ್​ ತೆರವುಗೊಳಿಸಿದ್ದರೂ ಕೊವಿಡ್​-19 ನಿಯಂತ್ರಣಕ್ಕಾಗಿ ಒಂದಷ್ಟು ನಿಯಮಗಳ ಜಾರಿಯನ್ನು ಮಾಡಲಾಗಿದ್ದು, ಅದನ್ನು ಚಾಚೂತಪ್ಪದೆ ಪಾಲಿಸುವಂತೆ ಸಾರ್ವಜನಿಕರಿಗೆ ಸರ್ಕಾರಗಳು ಹೇಳುತ್ತಿವೆ.ಆದರೂ ಅನೇಕರು ಮದುವೆ, ರಿಸಪ್ಷನ್​, ಅಂತ್ಯಕ್ರಿಯೆ, ಸಾರ್ವಜನಿಕ ಸಮಾರಂಭದ ನೆಪದಲ್ಲಿ ಎಲ್ಲ ನಿಯಮಗಳನ್ನೂ ಉಲ್ಲಂಘಿಸುತ್ತಿದ್ದಾರೆ.
ಇಷ್ಟು ದಿನ ಅನೇಕ ಕಡೆಗಳಿಂದ ನಿಯಮಗಳು ಉಲ್ಲಂಘನೆಯಾದ ಮೇಲೆ ಪ್ರಕರಣ ದಾಖಲಾದ ಸುದ್ದಿಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಒಡಿಶಾದ ಒಂದು ಹಳ್ಳಿಯಲ್ಲಿ ಸ್ಥಳೀಯ ಜಿಲ್ಲಾಡಳಿತ ತುಸು ಒಂದು ಹೆಜ್ಜೆ ಮುಂದಿಟ್ಟು, ರೆಬಲ್​ ಆಗಿ ಕ್ರಮ ಕೈಗೊಂಡಿದೆ. ಕರೊನಾ ನಿಯಂತ್ರಣದ ನಿಯಮಗಳು ಉಲ್ಲಂಘನೆ ಆಗುತ್ತಿರುವಾಗ ಮಧ್ಯದಲ್ಲೇ ಪ್ರವೇಶ ಮಾಡಿ, ಖಡಕ್​ ಎಚ್ಚರಿಕೆ ನೀಡಿದೆ.ಆಯತ್​ಪುರ ಗ್ರಾಮದಲ್ಲಿ ಮದುವೆ ರಿಸಪ್ಷನ್ ನಡೆಯುತ್ತಿತ್ತು. ಈ ವೇಳೆ ಅನೇಕರು ಸೇರಿದ್ದರು. ಆದರೆ ಅಲ್ಲಿ ಕೊವಿಡ್​-19 ನಿಯಮಗಳು ಪಾಲನೆಯಾಗುತ್ತಿರಲಿಲ್ಲ. ಈ ಬಗ್ಗೆ ಕೇಂದ್ರಪಾರಾ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗಿದ್ದೇ ತಡ, ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.ಇದನ್ನೂ ಓದಿ:ಪ್ಲೇಬಾಯ್​ ಮಾಡೆಲ್​ಗಳಿಗೆ​ ಹಣ ಪಾವತಿ ವಿಚಾರ; ಸುಪ್ರೀಂ ಕೋರ್ಟ್​ನಿಂದ ಅಮೆರಿಕ ಅಧ್ಯಕ್ಷ ಟ್ರಂಪ್​ಗೆ ಭಾರಿ ಮುಖಭಂಗ
ರಿಸಪ್ಷನ್​ ನಡೆಯುತ್ತಿದ್ದಾಗಲೇ ಆಗಮಿಸಿದ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿ, ಅತಿಥಿಗಳನ್ನೆಲ್ಲ ವಾಪಸ್​ ಕಳಿಸಿದ್ದಾರೆ. ಅಲ್ಲದೆ, ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ, ವಧು-ವರನ ಮನೆ ಕಡೆಯವರಿಗೆ ಸರಿಯಾಗಿ ಬೆಂಡೆತ್ತಿದ್ದಾರೆ. ಸ್ಥಳೀಯರ ಬಾಯಲ್ಲಂತೂ ಇದೇ ದೊಡ್ಡ ಸುದ್ದಿಯಾಗಿಬಿಟ್ಟಿದೆ.
ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಖಡಕ್​ ಆಗಿ ಸೂಚನೆ ನೀಡಿವೆ. ಮದುವೆ ಸಮಾರಂಭದಲ್ಲಿ ಯಾವ ಕಾರಣಕ್ಕೂ 50ಕ್ಕಿಂತ ಜಾಸ್ತಿ ಜನ ಸೇರಬಾರದು ಎಂದು. ಆದರೆ ಅದನ್ನು ಅನೇಕರು ಪಾಲಿಸುತ್ತಿಲ್ಲ. ಕೆಲವು ಕಡೆಗಳಲ್ಲಂತೂ ಮದುವೆ ಮನೆಗಳೇ ಕರೊನಾ ಸ್ಪ್ರೆಡರ್​ ಸ್ಥಳಗಳಾಗಿ ಮಾರ್ಪಟ್ಟಿದ್ದೂ ಇದೆ. ಅಷ್ಟೆಲ್ಲಾ ಆದರೂ ಜನರು ಬುದ್ಧಿ ಕಲಿಯುತ್ತಿಲ್ಲ.  ಒಡಿಶಾದಲ್ಲಿ ಒಟ್ಟು 11, 201 ಕರೊನಾ ಸೋಂಕಿತರು ಇದ್ದು, 52 ಮಂದಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)
ಮಾ.25ರಿಂದ ಜುಲೈವರೆಗೆ 66 ಅಪ್ರಾಪ್ತರ ಆತ್ಮಹತ್ಯೆ; ಕಾರಣ ತಿಳಿಯದೆ ಆತಂಕಕ್ಕೀಡಾಗಿದೆ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
