ಜೈಪುರ:ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದರು ಹಿರಿಯರು ಹೇಳುತ್ತಾರೆ. ಯಾಕೆಂದರೆ ಪ್ರತಿಯೊಬ್ಬರ ಜೀವನದಲ್ಲೂ ಇವೆರಡೂ ಬಹಳ ಮುಖ್ಯ ಮತ್ತು ಅಷ್ಟೇ ಕಷ್ಟ. ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ದೊಡ್ಡ ಜವಾಬ್ದಾರಿಯಂತೆ ಕಾಣುತ್ತಿದೆ. ನಿಜ ಹೇಳಬೇಕೆಂದರೆ ಈ ದಿನಗಳಲ್ಲಿ ಮದುವೆಗಳು, ವರದಕ್ಷಿಣೆ, ಉಡುಗೊರೆಗಳಿಂದ ಹಿಡಿದು ಮದುವೆಯ ಸ್ಥಳ, ಔತಣಕೂಟಗಳು, ಫೋಟೋಗಳು ಮತ್ತು ವೀಡಿಯೊಗಳು ಎಲ್ಲವೂ ಸಹ ದುಬಾರಿಯಾಗಿದ್ದು, ಸಾಕಷ್ಟು ಹಣ ಖರ್ಚಾಗುತ್ತದೆ.
ಇಂದು ಒಂದು ಮದುವೆ ಮಾಡುವುದೇ ತುಂಬಾ ಕಷ್ಟವಾಗಿದೆ. ಅಂತಹದರಲ್ಲಿ ಒಂದೇ ಕುಟುಂಬದ 17 ಮಂದಿಗೆ ಏಕಕಾಲಕ್ಕೆ ಮದುವೆ ಮಾಡಲಾಗಿದೆ. ಇದನ್ನು ಕೇಳಿ ನಿಮಗೆ ಅಚ್ಚರಿ ಮೂಡಬಹುದು. ಈ ಮದುವೆ ನಡೆದಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಮುಂದಿದೆ.
ಇಂದು ಮದುವೆಯಾಗುವುದು ದೊಡ್ಡ ಸವಾಲಾಗಿದೆ. ಅದರಲ್ಲೂ ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿ, ಮನೆ ಕಟ್ಟುವುದಂತೂ ತುಂಬಾ ತ್ರಾಸದಾಯಕ. ಮದುವೆಯಿಂದ ಮನೆ ಕಟ್ಟುವ ತನಕ ಎಲ್ಲದಕ್ಕೂ ಲಕ್ಷಗಟ್ಟಲೆ ಖರ್ಚಾಗುವುದು ಎಲ್ಲರಿಗೂ ಗೊತ್ತು. ಆದರೆ, ರಾಜಸ್ಥಾನದ ನೋಖಾ ಮಂಡಲದ ಲಾಲ್ಮದೇಸರ್ ಗ್ರಾಮದ ಸುರ್ಜಾರಾಮ್ ಗೋಡಾರಾ ಎಂಬ ವ್ಯಕ್ತಿ, ತಮ್ಮ ಮನೆಯಲ್ಲಿದ್ದ ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಒಟ್ಟು 17 ಮಂದಿಗೆ ಏಕಕಾಲಕ್ಕೆ ಮದುವೆ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಎರಡು ದಿನಗಳ ಕಾಲ ಮದುವೆ ಸಂಭ್ರಮ ನಡೆದಿದೆ.
ಸುರ್ಜಾರಾಮ್ ಗೋಡಾರಾ ಗ್ರಾಮದ ಮುಖ್ಯಸ್ಥ. ಅವರ ವಂಶಸ್ಥರು ಅವಿಭಕ್ತ ಕುಟುಂಬವಾಗಿ ವಾಸಿಸುತ್ತಿದ್ದಾರೆ. ಕುಟುಂಬದಲ್ಲಿ 17 ಮೊಮ್ಮಕ್ಕಳಿದ್ದು ಎಲ್ಲರು ಮದುವೆ ವಯಸ್ಸಿಗೆ ಬಂದಿದ್ದರು. ಆದ್ದರಿಂದ, ಅವರೆಲ್ಲರಿಗೂ ಪ್ರತ್ಯೇಕವಾಗಿ ಮದುವೆ ಮಾಡುವುದು ದುಬಾರಿ ಎಂದು ಭಾವಿಸಿದ ಸುರ್ಜಾರಾಮ್ ಗೋಡಾರಾ, ಎಲ್ಲರ ಮದುವೆಯನ್ನು ಎರಡು ದಿನಗಳ ಅಂತರದಲ್ಲಿ ಏಕಕಾಲದಲ್ಲಿ ಮಾಡಿ ಮುಗಿಸಿದ್ದಾರೆ.
ಗಮನಾರ್ಹ ಸಂಗತಿ ಏನೆಂದರೆ, ತಾವು ಯೋಚನೆ ಮಾಡಿದಂತೆಯೇ ಮದುವೆಗೆ ಒಂದೇ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದರು. ಸಂಬಂಧಿಕರನ್ನು ಕರೆಸಿ, ಏಪ್ರಿಲ್ 1ರ ಮೊದಲ ದಿನ ಐದು ಮೊಮ್ಮಕ್ಕಳಿಗೆ ವಿವಾಹ ಮಾಡಿದರು. ಮರುದಿನ 12 ಮೊಮ್ಮಕ್ಕಳು ಮದುವೆಯಾದರು. ಈ ಮದುವೆ ಸ್ಥಳೀಯ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಒಂದೇ ಕುಟುಂಬದಲ್ಲಿ ಸಾಮೂಹಿಕ ವಿವಾಹ ನಡೆದಿರುವುದು ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಾರೆ.
ಈ ಹಿಂದೆ ಇಂತಹ ಮದುವೆಗಳನ್ನು ನೋಡಿಲ್ಲ, ಕೇಳಿಲ್ಲ, ಒಂದೇ ಮನೆಯಲ್ಲಿ ಇಷ್ಟೊಂದು ಜನ ಮದುವೆ ಆಗುತ್ತಿರುವುದು ಇದೇ ಮೊದಲು ಎಂದು ಚರ್ಚೆಯಾಗುತ್ತಿದೆ. ಈ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ.(ಏಜೆನ್ಸೀಸ್​)
ಹೌದು ಫೋನ್​ S*x ಅನುಭವಿಸಿದ್ದೆ! ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಬೋಲ್ಡ್​ ಮಾತುಗಳು ವೈರಲ್​

ಗೃಹಲಕ್ಷ್ಮೀ ಹಣದಿಂದ ಯುಗಾದಿ ದಿನವೇ ಫ್ರಿಡ್ಜ್​ ಖರೀದಿಸಿದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 3 =
Remember me
