ಬೆಂಗಳೂರು:ರಾಜ್ಯದ ಜನರೇ, ನಾಳೆ-ನಾಡಿದ್ದು ಮನೆಯಿಂದ ಹೊರಬರುವ ಮುನ್ನ ಎಚ್ಚರ! ಸುಖಾ ಸುಮ್ಮನೇ ಹೊರ ಬಂದ್ರೆ ಬೀಳುತ್ತೆ ದಂಡ.. ಕೇಸ್.. ಲಿಮಿಟ್ ಕ್ರಾಸ್ ಮಾಡಿದ್ರೆ ಜೈಲುವಾಸ ಫಿಕ್ಸ್.
ರಾಜ್ಯದಲ್ಲಿ ಕೋವಿಡ್​ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ವೀಕ್ ಎಂಡ್ ಲಾಕ್​ಡೌನ್ ಅಸ್ತ್ರ ಬಳಸಲು ಸಜ್ಜಾಗಿದ್ದು, ನಾಳೆಯಿಂದ ರಾಜ್ಯದಾದ್ಯಂತ ಜಾರಿ ಆಗಲಿದೆ. ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕಂಪ್ಲೀಟ್ ಲಾಕ್​ಡೌನ್​ ಇರಲಿದೆ. ಈ ವೇಳೆ ಏನಿರುತ್ತೆ? ಎಂಬುದರ ಮಾಹಿತಿ ಇಲ್ಲಿದೆ.ಇದನ್ನೂ ಓದಿರಿಟಿಎಚ್​ಒ ಎದುರಲ್ಲೇ ಕಣ್ಣಿರೀಟ್ಟ ಕರೊನಾ ಸೇನಾನಿಗಳು
ವೀಕೆಂಡ್ ಲಾಕ್​ಡೌನ್​ ವೇಳೆ ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶವಿದೆ. ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ಹಾಲು, ದಿನಸಿ ಅಂಗಡಿ, ಹೋಟೆಲ್ (ಪಾರ್ಸಲ್ ಮಾತ್ರ), ತರಕಾರಿ, ಮಾಂಸದ ಅಂಗಡಿಗಳು ತೆರೆದಿರುತ್ತವೆ.
ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವಂತಿಲ್ಲ. ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ವಾಹನಗಳನ್ನ ಸೀಜ್​ ಮಾಡಿ ದಂಡ ವಸೂಲಿ ಮಾಡಲು ಆಯಾ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಇದ್ದಂತೆಯೇ ಲಾಕ್​ಡೌನ್ ಮುಂದುವರಿಯಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
