ನವದೆಹಲಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಹಣಕಾಸು ವರ್ಷಕ್ಕೆ ತಮ್ಮ ಸತತ ಏಳನೇ ಬಜೆಟ್​​ ಅನ್ನು ಮಂಗಳವಾರ(ಜುಲೈ 23) ಮಂಡಿಸಿದರು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕಾಪಿ ಪೇಸ್ಟ್​​ ಮಾಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಇದನ್ನು ಓದಿ:ಇದು ಸ್ನೇಹಿತರ ಲಾಭಕ್ಕಾಗಿ ಮಾಡಿರುವ ಬಜೆಟ್; ರಾಹುಲ್​ಗಾಂಧಿ
ಇದೊಂದು ದುರ್ಬಲ ಬಜೆಟ್​ ಆಗಿದ್ದು, ಇದರಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಏನನ್ನೂ ಕೇಳಲಿಲ್ಲ. ಮನರೇಗಾ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಮತ್ತು ಸಾಮಾನ್ಯ ವ್ಯಕ್ತಿಯ ಆದಾಯವನ್ನು ಸುಧಾರಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾಕಷ್ಟು ಉಲ್ಲೇಖವಿಲ್ಲ. ಉದ್ಯೋಗ ಸೃಷ್ಟಿಯ ಬಗ್ಗೆ ಕೇವಲ ಸುಳಿವು ನೀಡಲಾಗಿದೆ ಎಂದು ಹೇಳಿದರು.
ಬಜೆಟ್​ನಲ್ಲಿ ನಾನು ಸ್ವಾಗತಿಸಬಹುದಾದ ಏಕೈಕ ವಿಷಯವೆಂದರೆ ಅದರು ಏಂಜೆಲ್​ ಹೂಡಿಕೆದಾರರ ಮೇಲಿನ ತೆರಿಗೆಯನ್ನು ರದ್ದುಗೊಳಿಸಿರುವುದು. ನಾನು ಇದನ್ನು 5 ವರ್ಷಗಳ ಹಿಂದೆ ಅರುಣ್ ಜೇಟ್ಲಿ ಅವರಿಗೆ ಶಿಫಾರಸು ಮಾಡಿದ್ದೆ ಎಂದು ಶಶಿ ತರೂರ್​ ಹೇಳಿದ್ದಾರೆ.
ಬಜೆಟ್ 2024 ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್​ ಅವರು, ಭಾರತೀಯ ಸ್ಟಾರ್ಟ್​​ಅಪ್​​ ವ್ಯವಸ್ಥೆಯನ್ನು ಉತ್ತೇಜಿಸಲು, ಉದ್ಯಮಶೀಲತಾ ಮನೋಭಾವವನ್ನು ಹೆಚ್ಚಿಸಲು ಮತ್ತು ನಾವೀನ್ಯತೆಗಳನ್ನು ಬೆಂಬಲಿಸಲು, ಎಲ್ಲಾ ವರ್ಗದ ಹೂಡಿಕೆದಾರರಿಗೆ ಏಂಜಲ್ ತೆರಿಗೆ ಎಂದು ಕರೆಯಲ್ಪಡುವುದನ್ನು ರದ್ದುಗೊಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು. (ಏಜೆನ್ಸೀಸ್​​)
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ನಿರಾಕರಣೆ; ನಿತೀಶ್​​ ಕುಮಾರ್​ ಹೇಳಿದ್ದೇನು ಗೊತ್ತಾ?​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
