ಕೊಲ್ಕತಾ/ಚೆನ್ನೈ:ಮತದಾನದ ದಿನಾಂಕವನ್ನು ಘೋಷಿಸಿದ ತಕ್ಷಣ ಮಾದರಿ ನೀತಿ ಸಂಹಿತೆಯು ಜಾರಿಗೆ ಬರುವುದರಿಂದ, ಆಡಳಿತಾರೂಢ ಸರ್ಕಾರಗಳು ಯಾವುದೇ ಹೊಸ ಕಲ್ಯಾಣ ಯೋಜನೆಗಳನ್ನು ಘೋಷಿಸಬಾರದು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೆ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳು ಇಂದು ತಮ್ಮ ಮತದಾರರನ್ನು ಆಕರ್ಷಿಸುವ ಕೊನೆಯ ಹಂತದ ಪ್ರಯತ್ನವನ್ನು ಮಾಡಿವೆ. ಚುನಾವಣೆ ಘೋಷಿಸಲು ಇಂದು ನಿಗದಿಯಾಗಿದ್ದ ಸಮಯಕ್ಕೆ ಸ್ವಲ್ಪ ಹೊತ್ತು ಮುಂಚೆ ಎರಡು ಪ್ರಮುಖ ನಿರ್ಧಾರಗಳನ್ನು ಎರಡೂ ರಾಜ್ಯದ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ.
ಚುನಾವಣಾ ಆಯೋಗವು ಇಂದು ಸಂಜೆ 4.30 ಕ್ಕೆ ಈ ಎರಡೂ ರಾಜ್ಯಗಳೊಂದಿಗೆ ಕೇರಳ, ಪುದುಚೇರಿ ಮತ್ತು ಅಸ್ಸಾಂಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸುವುದಾಗಿ ನಿಗದಿಯಾಗಿತ್ತು. ಮಧ್ಯಾಹ್ನ 3.27 ಕ್ಕೆ ನಗರ ಪ್ರದೇಶಗಳ ದಿನಗೂಲಿ ಕಾರ್ಮಿಕರಿಗೆ ವೇತನದಲ್ಲಿ ಹೆಚ್ಚಳವನ್ನು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಟ್ವಿಟರ್ ಮೂಲಕ ಘೋಷಿಸಿದರು. ಅತ್ತ ಕೆಲವು ಗಂಟೆಗಳ ಮುನ್ನ ತಮಿಳುನಾಡು ಸಿಎಂ ಎಡಪ್ಪಾಡಿ ಈ.ಪಳನಿಸ್ವಾಮಿ ಬಡವರಿಗೆ ಮತ್ತು ರೈತರಿಗೆ ಸಹಕಾರಿ ಬ್ಯಾಂಕ್​ಗಳು ನೀಡಿರುವ 6 ಸವರನ್​​ವರೆಗಿನ ಚಿನ್ನದ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದರು.
ಇದನ್ನೂ ಓದಿ:ಬಾಯಲ್ಲೇನು ಇಟ್ಕೊಂಡಿದೀರಾ ಎನ್ನುತ್ತಾ ಸ್ಕೂಟರ್​ ಸವಾರಿ ಹೊರಟ ದೀದಿ!
ಪಶ್ಚಿಮ ಬಂಗಾಳ ನಗರ ಉದ್ಯೋಗ ಯೋಜನೆಯ ಅಡಿಯಲ್ಲಿ ದಿನಗೂಲಿ ಕಾರ್ಮಿಕರಿಗೆ ವೇತನವನ್ನು ಹೆಚ್ಚಿಸಿರುವ ಬ್ಯಾನರ್ಜಿ, ಇದರಿಂದ ಒಟ್ಟು 56,500 ಕಾರ್ಮಿಕರಿಗೆ ಉಪಯೋಗವಾಗಲಿದೆ. ಈ ಹೆಚ್ಚಳವು 2021 ಮತ್ತು 2022 ರ ಹಣಕಾಸು ವರ್ಷಗಳೆರಡಕ್ಕೂ ಅನ್ವಯವಾಗಲಿದೆ ಎಂದಿದ್ದಾರೆ.
I am pleased to announce a HIKE in the wages of daily wage workers under WB Urban Employment Scheme:> To ₹202 per day from ₹144 earlier for unskilled labour> To ₹303 from ₹172 earlier for semi-skilled> ₹404 for skilled labour (new category introduced)(1/2)— Mamata Banerjee (@MamataOfficial)February 26, 2021
I am pleased to announce a HIKE in the wages of daily wage workers under WB Urban Employment Scheme:> To ₹202 per day from ₹144 earlier for unskilled labour> To ₹303 from ₹172 earlier for semi-skilled> ₹404 for skilled labour (new category introduced)(1/2)
ಆರ್ಥಿಕತೆಯು ಇನ್ನೂ ಚೇತರಿಸಿಕೊಳ್ಳುತ್ತಿದೆ ಎಂದು ಸಿಎಂ ಪ್ರಕಟಿಸಿರುವ ಸಾಲ ಮನ್ನಾ ಯೋಜನೆಯ ಕೆಳಗೆ ಲಾಕ್​ಡೌನ್​ ಸಮಯದಲ್ಲಿ ಮೂರು ತಿಂಗಳ ಅವಧಿಗೆ ರೂ. 25,000 ದಿಂದ 1 ಲಕ್ಷದವರೆಗೆ ತೆಗೆದುಕೊಂಡಿರುವ ಚಿನ್ನದ ಸಾಲಗಳು ಮನ್ನಾ ಆಗಲಿವೆ. ಇದರ ಜೊತೆಗೆ, ಮತದಾನದ ದಿನಾಂಕ ಘೋಷಣೆಗೆ ಕೆಲವೇ ನಿಮಿಷಗಳ ಮೊದಲು, ತಮಿಳುನಾಡು ವಿಧಾನಸಭೆಯು ಹಿಂದುಳಿದ ವರ್ಗಗಳಿಗಿರುವ ಮೀಸಲಾತಿಯಲ್ಲಿ ವನ್ನಿಯಾರ್ ಸಮುದಾಯಕ್ಕೆ 10.5% ಮೀಸಲಾತಿ ನೀಡುವ ಮಸೂದೆಯನ್ನು ಸಹ ಅಂಗೀಕರಿಸಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪಂಚರಾಜ್ಯಗಳ ಚುನಾವಣೆ ಕಹಳೆ ಮೊಳಗಿಸಿದ ಕೇಂದ್ರ ಚುನಾವಣಾ ಆಯೋಗ: ದಿನಾಂಕ ಪ್ರಕಟ
ಮೈಸೂರು ಮೇಯರ್ ಚುನಾವಣೆ : ಶಾಸಕ ತನ್ವೀರ್ ಸೇಠ್​ಗೆ ಡಿಕೆಶಿ ಬುಲಾವ್
ಮಮತಾ ಮಾತ್ರ ಏಕೆ, ನಾನೂ ಬಿಡ್ತೇನೆ ಅಂತ ಸ್ಕೂಟರ್ ಏರಿದ ಬಿಜೆಪಿ ನಾಯಕಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
