ಪಶ್ಚಿಮ ಬಂಗಾಳ:ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಜೆಪಿ ಶಾಸಕಿ ಚಂದನಾ ಬೌರಿ ತಮ್ಮ ಜಿಲ್ಲೆಯಲ್ಲಿ ಬಹುದಿನಗಳಿಂದ ಹದಗೆಟ್ಟಿದ್ದ ರಸ್ತೆಯನ್ನು ತಮ್ಮ ಪತಿಯೊಡನೆ ಸೇರಿಕೊಂಡು ಕಾಮಗಾರಿ ಮಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:ಸೆ.14ರಿಂದ ಪುಣೆಯಲ್ಲಿ ಆರ್‌ಎಸ್‌ಎಸ್ ವಾರ್ಷಿಕ ಸಮನ್ವಯ ಸಭೆ ನಿಗದಿ
ಆಡಳಿತ ಸರ್ಕಾರವು ರಸ್ತೆ ದುರಸ್ತಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ಮುಖೇನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ನಿವಾಸಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಶಾಸಕಿ ಚಂದನಾ ಬೌರಿ, ತಮ್ಮ ಪತಿಯ ಸಹಾಯದೊಂದಿಗೆ ರಸ್ತೆಗಿಳಿದು ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ.
The woman you see in the video is Chandana Bauri, a@BJP4IndiaMLA from#WestBengal
When road construction was obstructed by TMC govt in her area, she and her husband took it upon themselves to build a 200-meter road, utilizing their own earnings.
This displays her unwavering…pic.twitter.com/peE5o9ajzV
— Vishnu Vardhan Reddy (@SVishnuReddy)September 4, 2023

ಸಾಮಾನ್ಯವಾಗಿ ಕೆಲಸದ ವೇಳೆ ಕೂಲಿ ಕಾರ್ಮಿಕರು ತೊಡುವ ಬಟ್ಟೆಯಂತೆ ದಂಪತಿಯೂ ತೊಟ್ಟು, ಜಲ್ಲಿ ಚೀಲಗಳನ್ನು ಹೊತ್ತು ಕೆಲಸ ಮಾಡಿದ್ದಾರೆ. ರಸ್ತೆಯ ಗುಂಡಿಗಳು ಮತ್ತು ಬಿರುಕುಗಳನ್ನು ತುಂಬಲು ಪತಿ ಶ್ರವಣ್ ತಮ್ಮ ಪತ್ನಿಗೆ ಸಹಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕರು, “ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಅವರ ಮನವಿಗಳು ನನೆಗುದಿಗೆ ಬಿದ್ದಿವೆ” ಎಂದು ಹೇಳಿದರು.
ಇದನ್ನೂ ಓದಿ:DK Shivakumar Master Plan For New Education Policy |ಹೊಸ ಶಿಕ್ಷಣ ವ್ಯವಸ್ಥೆಗೆ ಡಿಕೆಶಿ ಮಾಸ್ಟರ್​ ಪ್ಲ್ಯಾನ್​!
“ಆಡಳಿತ ಪಕ್ಷ, ತೃಣಮೂಲ ಕಾಂಗ್ರೆಸ್ (TMC), ತಮ್ಮ ಅಭಿವೃದ್ಧಿ ಪ್ರಚಾರಗಳು ಮತ್ತು ತಾವು ಮಾಡಿರುವುದಾಗಿ ಹೇಳಿಕೊಳ್ಳುವ ಕೆಲಸಗಳ ಬಗ್ಗೆ ಹೆಮ್ಮೆಪಡುತ್ತದೆ. ಆದ್ರೆ, ರಂಗಮತಿಯಿಂದ ರಾಜಮೇಳ ಮಾರ್ಗದ ರಸ್ತೆಯ ಹದಗೆಟ್ಟ ಸ್ಥಿತಿಯ ಬಗ್ಗೆ ಈ ಪ್ರದೇಶದ ಹಿರಿಯ ಟಿಎಂಸಿ ನಾಯಕರಿಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಆದರೂ ಅವರು ಮನವಿಗೆ ಕಿವಿಗೊಡಲಿಲ್ಲ” ಎಂದು ಶಾಲ್ತೋರಾ ವಿಧಾನಸಭೆಯ ಬಿಜೆಪಿ ಶಾಸಕರು ಆರೋಪಿಸಿದರು,(ಏಜೆನ್ಸೀಸ್).
ಈ ಒಟಿಟಿ ಪ್ಲಾಟ್​ಫಾರ್ಮ್​ ಪಾಲಾಯ್ತು ‘ಮಾರ್ಕ್ ಆಂಟೋನಿ’ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
