ಕೋಲ್ಕತ್ತ:ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ, ಸಂಸದ ದಿಲೀಪ್​ ಘೋಷ್​ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಇಂದು ಕೋಲ್ಕತ್ತಾದ ನ್ಯೂಟೌನ್​ನಲ್ಲಿ ಘಟನೆ ನಡೆದಿದೆ. ದಿಲೀಪ್ ಘೋಷ್​ ಮತ್ತು ಅವರ ಭದ್ರತಾ ಸಿಬ್ಬಂದಿಯ ಕಾರುಗಳನ್ನು ಅಡ್ಡಗಟ್ಟಿ, ವಾಹನಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಅದಾದ ನಂತರ ದಿಲೀಪ್​ ಘೋಷ್​ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತನೋರ್ವನ ಮನೆಗೆ ಕರೆದುಕೊಂಡು ಹೋಗಿ ರಕ್ಷಣೆ ಮಾಡಲಾಗಿದೆ.ಇದನ್ನೂ ಓದಿ:ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಪತಂಜಲಿಯ ‘ಕರೊನಿಲ್’​: ಬಾಬಾ ರಾಮ್​ದೇವ್​
ಘೋಷ್​ ಅವರು ಚಾಯ್​ ಪೆ ಚರ್ಚಾ ಸಮಾರಂಭ ಆಯೋಜಿಸುವ ಸಲುವಾಗಿ ತಮ್ಮ ಒಂದಷ್ಟು ಬೆಂಬಲಿಗರೊಂದಿಗೆ ತೆರಳುತ್ತಿದ್ದರು. ನ್ಯೂಟೌನ್ ಬಳಿ ತೃಣಮೂಲ ಕಾಂಗ್ರೆಸ್​ನ ಕೆಲವು ಕಾರ್ಯಕರ್ತರು ಒಮ್ಮೆಲೆ ಇವರ ಜತೆ ಗಲಾಟೆಗೆ ಇಳಿದಿದ್ದಾರೆ.ಘೋಷ್​ ಅವರ ಮೇಲೆ ದಾಳಿ ಮಾಡಿದ್ದಾರೆ. ಹಾಗೇ ಬಿಜೆಪಿ ಕಾರ್ಯಕರ್ತರ ಕಾರುಗಳ ಗ್ಲಾಸ್​ಗಳನ್ನೆಲ್ಲ ಒಡೆದು ಧ್ವಂಸ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಈ ಹಲ್ಲೆಯ ಹಿಂದೆ ಟಿಎಂಸಿಯ ನಾಯಕ ಮೊಹ್ಸಿನ್​ ಘಾಜಿ ಇದ್ದಾರೆಂದು ದಿಲೀಪ್​ ಘೋಷ್​ ಅವರು ಆರೋಪಿಸಿದ್ದಾರೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿ ಹಾಕಿದೆ. ಬಿಜೆಪಿ ಬೇಕೆಂದೇ ಟಿಎಂಸಿ ಹೆಸರು ಹೇಳುತ್ತಿದೆ. ನಮ್ಮ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿಲ್ಲ ಎಂದಿದ್ದಾರೆ.ಇದನ್ನೂ ಓದಿ:ಬೆಳಗ್ಗೆ ಸೆಕ್ಷನ್​ 144, ರಾತ್ರಿ ಕರ್ಫ್ಯೂ; ಹೊರಗೆ ಬಂದ್ರೆ ಕರೊನಾನೂ ಬಿಡಲ್ಲ, ಪೊಲೀಸರು ಸುಮ್ಮನಿರಲ್ಲ
ದಿಲೀಪ್​ ಘೋಷ್​ ಅವರ ಮೇಲಿನ ದಾಳಿಯನ್ನು ಕಾಂಗ್ರೆಸ್​ ಸಂಸದ ಅಧೀರ್​ ರಂಜನ್​ ಚೌಧರಿ ಖಂಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷಗಳ ನಾಯಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಪದೇಪದೆ ಹೀಗೆ ದಾಳಿ, ಹಲ್ಲೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ರಜೆ: ಇನ್ನೊಂದು ಇಲಾಖೆ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
