ಕೋಲ್ಕತಾ:ರಾಜ್ಯದಲ್ಲಿ ನೆರೆಯ ರಾಷ್ಟ್ರ ಬಾಂಗ್ಲಾದೇಶದ ಜನರಿಗೆ ಆಶ್ರಯ ನೀಡುವ ನೀಡುವ ಕುರಿತು ಸಿಎಂ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಗೆ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರು ಕೇಳಿದ್ದಾರೆ. ಸಂವಿಧಾನದ 167ನೇ ಪರಿಚ್ಛೇದದ ಅಡಿಯಲ್ಲಿ ಯಾವ ಆಧಾರದ ಮೇಲೆ ಸಾಂವಿಧಾನಿಕ ಸೌಜನ್ಯವನ್ನು ಕಡೆಗಣಿಸಿ ಇಂತಹ ಸಾರ್ವಜನಿಕ ಘೋಷಣೆ ಮಾಡಲಾಗಿದೆ ಎಂಬುದರ ಕುರಿತು ಸಮಗ್ರ ವರದಿಯನ್ನು ಸಲ್ಲಿಸುವಂತೆ ರಾಜ್ಯಪಾಲರು ಕೇಳಿದ್ದಾರೆ.
ಇದನ್ನು ಓದಿ:ಷೇರು ಮಾರುಕಟ್ಟೆ ಮೇಲೆ ಬಜೆಟ್​​​ ಪ್ರಭಾವ; ಸೆನ್ಸೆಕ್ಸ್​​-ನಿಫ್ಟಿಯಲ್ಲಿ ಭಾರೀ ಕುಸಿತ
ವಿದೇಶದಿಂದ ಬರುವ ಜನರಿಗೆ ಆಶ್ರಯ ನೀಡುವ ವಿಷಯವು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಹೊರರಾಜ್ಯದಿಂದ ಬರುವ ಜನರಿಗೆ ಆಶ್ರಯ ನೀಡುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಯೊಬ್ಬರು ವಹಿಸಿಕೊಂಡು ಬಹಿರಂಗ ಹೇಳಿಕೆ ನೀಡಿರುವುದು ಗಂಭೀರ ಸಾಂವಿಧಾನಿಕ ಉಲ್ಲಂಘನೆಯನ್ನು ಸೂಚಿಸುತ್ತದೆ ಎಂದು ರಾಜಭವನದ ಮಾಧ್ಯಮ ಕೋಶವು ಸಾಮಾಜಿಕ ಜಾಲತಾಣದ ಪೋಸ್ಟ್​​ನಲ್ಲಿ ತಿಳಿಸಿದೆ.
HG has sought a report under Article 167 on the reported comment made by Chief Minister publicly on 21.07.2024:“…But I can tell you this, if helpless people come knocking on the doors of Bengal, we will surely provide them shelter.”Close on its heels came Government of India’s…
ರಾಜ್ಯದಲ್ಲಿ ಒಳನುಸುಳುವಿಕೆಯನ್ನು ಸಿಎಂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರಿಗೆ ಆಶ್ರಯ ನೀಡಲು ಸಿದ್ಧ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ನಂತರ ಬಿಜೆಪಿ ಈ ಆರೋಪ ಮಾಡಿದೆ. ಭಾರತದ ಏಕತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ಬಾಂಗ್ಲಾದೇಶ ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ನಾನು ಅದರ ವ್ಯವಹಾರಗಳ ಬಗ್ಗೆ ಮಾತನಾಡಬಾರದು. ಈ ವಿಷಯದ ಬಗ್ಗೆ ಏನು ಹೇಳಬೇಕೋ ಅದನ್ನು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಅಸಹಾಯಕರು ಪಶ್ಚಿಮ ಬಂಗಾಳದ ಬಾಗಿಲನ್ನು ತಟ್ಟಿದರೆ, ನಾವು ಖಂಡಿತವಾಗಿಯೂ ಅವರಿಗೆ ಆಶ್ರಯ ನೀಡುತ್ತೇವೆ ಎಂದು ನಿಮಗೆ ಹೇಳಬಲ್ಲೆ ಎಂದು ಈ ಹಿಂದೆ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. (ಏಜೆನ್ಸೀಸ್​​)
ನಮ್ಮ ಮನೆ ಬಾಗಿಲು ತಟ್ಟುವ ಅಸಹಾಯಕರಿಗೆ ಆಶ್ರಯ ನೀಡಲು ಸಿದ್ಧ; ಮಮತಾ ಬ್ಯಾನರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
