ಕೋಲ್ಕತ:ಆರ್​ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರೖೆನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬುಧವಾರ 12 ಗಂಟೆ ಅವಧಿಯ ಹರತಾಳ ನಡೆಸಲು ಬಿಜೆಪಿ ಕಾರ್ಯಕರ್ತರು ನೀಡಿದ್ದ ಕರೆ, ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ಸಂಘರ್ಷವಾಗಿ ಪರಿಣಮಿಸಿತು.
ಹರತಾಳ ನಡೆಸುವ ಭರದಲ್ಲಿ ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾಗಿದ್ದು, ಬಂಗಾಳ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹರತಾಳ ಯಶಸ್ವಿ ಆಗಿಸುವ ನಿಟ್ಟಿನಲ್ಲಿ ಮಾಜಿ ಸಂಸದರಾದ ರೂಪಾ ಗಂಗೂಲಿ, ಲಾಕೆಟ್ ಚಟರ್ಜಿ, ರಾಜ್ಯಸಭಾ ಸದಸ್ಯ ಸಮಿಕ್ ಭಟ್ಟಾ ಚಾರ್ಯ, ಶಾಸಕ ಅಗ್ನಿಮಿತ್ರ ಪೌಲ್ ಅವರು ರಸ್ತೆ ತಡೆ ನಡೆಸಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಬಹಳಷ್ಟು ಮಂದಿ ಮನೆಯಲ್ಲೇ ಉಳಿದರಾದ್ದರಿಂದ ಬಂಗಾಳ ಬಂದ್​ನಿಂದ ದೈನಂದಿನ ಜನಜೀವನಕ್ಕೆ ದೊಡ್ಡ ಪ್ರಮಾಣದ ತೊಂದರೆ ಆಗಲಿಲ್ಲ. ರಾಜ್ಯ ರಾಜಧಾನಿ ಕೋಲ್ಕತದಲ್ಲಿ ಎಂದಿನ ಜನಜಂಗುಳಿ ಕಂಡುಬರದ್ದರಿಂದ, ಬಸ್- ಟ್ಯಾಕ್ಸಿ- ಆಟೋರಿಕ್ಷಾಗಳು ಕಡಿಮೆ ಪ್ರಮಾಣದಲ್ಲಿ ಸಂಚರಿಸಿದವು. ಅಂಗಡಿ-ಮಾರುಕಟ್ಟೆಗಳು ತೆರೆದಿದ್ದರೂ ಖಾಸಗಿ ವಾಹನಗಳ ಸಂಚಾರ ಸಣ್ಣ ಪ್ರಮಾಣದಲ್ಲಿತ್ತು. ಶಾಲಾ-ಕಾಲೇಜುಗಳು ತೆರೆದಿದ್ದರೂ ಮಕ್ಕಳ ಸಂಖ್ಯೆ ಕೂಡ ಕಡಿಮೆ ಇತ್ತು, ಕೋಲ್ಕತದ ಕೆಲವು ಆಂಗ್ಲ ಮಾಧ್ಯಮ ಶಾಲೆಗಳು ತರಗತಿ ತೆಗೆದುಕೊಂಡಿರಲಿಲ್ಲ. ಖಾಸಗಿ ಕಚೇರಿಗಳಲ್ಲಿ ಹಾಜರಾತಿ ಕೊರತೆ ಇತ್ತಾದರೂ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಎಂದಿನಂತೆಯೇ ಹಾಜರಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಮ್ದಾರ್ ಬಗುಯ್ಹಟಿ ಪ್ರದೇಶದಲ್ಲಿ ನಡೆಸಿದ ಪ್ರತಿಭಟನೆ ಕೂಡ ಪೊಲೀಸರ ಜತೆಗೆ ವಾಗ್ವಾದಕ್ಕೆ ಕಾರಣವಾಯಿತು. ಇನ್ನೊಂದೆಡೆ ಪ್ರತಿಭಟನಾ ಕಾರರು 49 ಕಡೆ ರೈಲು ಹಳಿಗಳ ಮೇಲೆ ತಡೆ ನಡೆಸಿದ್ದು, ಕ್ರಮೇಣ ಅವರನ್ನು ತೆರವುಗೊಳಿಸಲಾಯಿತು. ಮಾಲ್ಡಾದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಬೀದಿಜಗಳ ನಡೆದಿದ್ದು, ಬಳಿಕ ಪೊಲೀಸರು ಅವರನ್ನು ಚದುರಿಸಿದರು.
ಬಾಂಬೆಸೆತ, ಗುಂಡಿನ ದಾಳಿ:ಉತ್ತರ 24 ಪರಗಣ ಜಿಲ್ಲೆಯ ಭಟ್ಪರದಲ್ಲಿ ಟಿಎಂಸಿ ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ ಮಾಡಿ, ತಮ್ಮತ್ತ ಗುಂಡು ಹಾರಿಸಿದ್ದು, ಜೊತೆಗಿದ್ದ ಇಬ್ಬರು ಗಾಯಗೊಂಡಿದ್ದು, ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ ಆರೋಪಿಸಿದ್ದಾರೆ. ಸುಮಾರು 50 ಜನರ ಗುಂಪು ವಾಹನದತ್ತ ಏಳೆಂಟು ಬಾಂಬುಗಳನ್ನು ಎಸೆದಿದ್ದು, ಆರೇಳು ಸುತ್ತು ಗುಂಡು ಕೂಡ ಹಾರಿಸಲಾಗಿದೆ ಎಂದಿದ್ದಾರೆ. ಆದರೆ ಅವರು ಆಂಗ್ಲೋ ಇಂಡಿಯಾ ಜೂಟ್ ಮಿಲ್ ಹೊರಗೆ ಬೇರೆಯವರಿಂದ ಥಳಿಸಲ್ಪಟ್ಟಿ ದ್ದಾರೆ, ಗಾಯಾಳುಗಳಿಗೆ ಆರಂಭದಲ್ಲಿ ಭಟ್ಪರ ರಾಜ್ಯ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯ ನಡೆದ ಏಳೇ ದಿನದಲ್ಲಿ ಶಿಕ್ಷೆ:ಅಪರಾಧ ನಡೆದ ಏಳು ದಿನಗಳ ಒಳಗೆ ಅತ್ಯಾಚಾರಿಗೆ ಶಿಕ್ಷೆ ನೀಡುವಂಥ ಅತ್ಯಾಚಾರ ವಿರೋಧಿ ಕಾನೂನುಗಳ ಮಸೂದೆಯನ್ನು ಮುಂದಿನ ವಾರ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅದನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದು, ಅವರು ಅಂಗೀಕರಿಸದಿದ್ದಲ್ಲಿ ನಾವು ರಾಜಭವನದ ಹೊರಗೆ ಪ್ರತಿಭಟಿಸಲಿದ್ದೇವೆ. ಈ ಮಸೂದೆಯನ್ನು ಅಂಗೀಕರಿಸಲೇಬೇಕು, ಅವರು ಈ ಸಲ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಗಳಿಗೆ ಕೇಂದ್ರದ ಸೂಚನೆ:ಆರೋಗ್ಯ ವೃತ್ತಿಪರರಿಗೆ ಸುರಕ್ಷೆ ಹಾಗೂ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಎರಡು ವಾರಗಳ ಒಳಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬುಧವಾರ ಸೂಚನೆ ನೀಡಿದೆ. ಭದ್ರತೆ ಹೆಚ್ಚಿಸಿ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸುವಂತೆಯೂ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಮತ್ತು ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರ ಜತೆ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.
ಇಲ್ಲಿ ಪ್ರಜಾಪ್ರಭುತ್ವವೇ ಇಲ್ಲ, ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆಯುತ್ತಿದ್ದಾರೆ ವಿನಃ ಗುಂಡು ಹಾರಿಸುವುದನ್ನು ತಡೆಯುತ್ತಿಲ್ಲ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ. ಏಳು ದಿನಗಳ ಧರಣಿ ನಡೆಸಲು ಕೋಲ್ಕತ ಹೈಕೋರ್ಟ್ ನಮಗೆ ಅನುಮತಿ ನೀಡಿದೆ, ನಾಳೆಯೇ ಧರಣಿ ಆರಂಭಿಸುತ್ತೇವೆ.
| ಸುಕಾಂತ ಮಜುಮ್ದಾರ್ ರಾಜ್ಯ ಬಿಜೆಪಿ ಅಧ್ಯಕ್ಷ, ಪಶ್ಚಿಮ ಬಂಗಾಳ
ಕೋಲ್ಕತದಲ್ಲಿ ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಾರ್ವಜನಿಕರು ಕೂಡ ಪ್ರತಿಭಟನೆ ನಡೆಸುತ್ತಿದ್ದರೂ ಅಪರಾಧಿಗಳು ಬೇರೆಡೆ ಅಲೆದಾಡುತ್ತಿದ್ದಾರೆ. ಯಾವುದೇ ನಾಗರಿಕ ಸಮಾಜ ತಮ್ಮ ಮಕ್ಕಳು-ಸಹೋದರಿಯರು ಇಂಥ ಹಿಂಸೆಗೆ ಒಳಗಾಗಲು ಅವಕಾಶ ನೀಡುವುದಿಲ್ಲ. ಸಮಾಜಕ್ಕೆ ಪ್ರಾಮಾಣಿಕ-ನಿಷ್ಪಕ್ಷಪಾತ ಆತ್ಮಾವಲೋಕನದ ಅಗತ್ಯವಿದೆ.
| ದ್ರೌಪದಿ ಮುಮು ರಾಷ್ಟ್ರಪತಿ
ಬಳ್ಳಾರಿ ಜೈಲಿಗೆ ನಾಳೆ ನಟ ದರ್ಶನ್ ತೂಗದೀಪ, ಸಂಚಾರ ಮಾರ್ಗ ವಿವರ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
