ಕೋಲ್ಕತ:ಇಂಟರ್​ನೆಟ್​ ಸೌಲಭ್ಯವೇ ಇರದಿದ್ದರೆ ಯಾವುದೂ ನೆಟ್ಟಗಿಲ್ಲ ಅಂತನಿಸುವುದು ಸಹಜ. ಸುಲಭದಲ್ಲಿ ಕೆಲವೇ ನಿಮಿಷಗಳಲ್ಲಿ ಆಗಬಹುದಾದ ಅದೆಷ್ಟೋ ಕೆಲಸಗಳಿಗೂ ಗಂಟೆಗಟ್ಟಲೆ ಸಮಯ ಬೇಕಾಗಬಹುದು. ಅಂಥದ್ದೊಂದು ಪರಿಸ್ಥಿತಿಯನ್ನು ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳ ಜನರು ಮುಂದಿನ ಕೆಲವು ದಿನಗಳವರೆಗೆ ಎದುರಿಸಬೇಕಾಗಿದೆ.
ಏಕೆಂದರೆ, ಇಂಟರ್​ನೆಟ್​ಗೆ ನಿರ್ಬಂಧ ಹೇರಿ ಪಶ್ಚಿಮ ಬಂಗಾಳದ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಅದರ ಪ್ರಕಾರ ಪಶ್ಚಿಮ ಬಂಗಾಳದ ಜಿಲ್ಲೆಗಳಾದ ಮಲ್ದ, ಮುರ್ಷಿಬಾದ್, ಉತ್ತರ್ ದಿನಜ್​ಪುರ್, ಕೂಚ್​ಬೆಹರ್​, ಜಲ್ಪೈಗುರಿ, ಬಿರ್ಬುಹಂ ಮತ್ತು ದಾರ್ಜೀಲಿಂಗ್​ನ ಕೆಲವು ಬ್ಲಾಕ್​ಗಳಲ್ಲಿ ಮಾ. 7ರಿಂದ 9. ಮಾ. 11 ಮತ್ತು 12, ಮಾ. 15 ಮತ್ತು 16ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3.15ರವರೆಗೂ ಇಂಟರ್​ನೆಟ್​ ಸೌಲಭ್ಯ ಸ್ಥಗಿತಗೊಂಡಿರಲಿದೆ. ಆದರೆ ವಾಯ್ಸ್​ ಕಾಲ್​, ಎಸ್​ಎಂಎಸ್​ ಹಾಗೂ ಪತ್ರಿಕೆಗಳಿಗೆ ನಿರ್ಬಂಧವಿಲ್ಲ.
ಅಂತರ್ಜಾಲ ಸಂಪರ್ಕ ಬಳಸಿ ಕಾನೂನುಬಾಹಿರ ಚಟುವಟಿಕೆಗಳು ನಡೆಯಲಿವೆ ಎಂದು ಗುಪ್ತದಳ ಸರ್ಕಾರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಬಂಧ ಹೇರಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
