ಪಶ್ಚಿಮಬಂಗಾಳ:ಈ ರಾಜ್ಯದಲ್ಲಿ ಇನ್ನುಮುಂದೆ ವಿದ್ಯಾರ್ಥಿಗಳೇ ಇಂಟೆರಿಮ್ ಕುಲಪತಿ ಆಗದ್ದಾರೆ ಎಂದು ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ. ಇದು ನಿಜಕ್ಕೂ ನಡೆದಲ್ಲಿ ದೇಶದಲ್ಲೇ ಪ್ರಥಮವಾಗಿರಲಿದೆ.
ಶುಕ್ರವಾರ ಬೆಳಗ್ಗೆ ಕಾಲಿಂಪಾಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪಶ್ಚಿಮಬಂಗಾಳ ರಾಜ್ಯದ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ಅವರು “ಈ ಬಾರಿ ಬಂಗಾಳದಲ್ಲಿ ವಿದ್ಯಾರ್ಥಿಗಳೇ ಇಂಟೆರಿಮ್ ಕುಲಪತಿ ಆಗುತ್ತಾರೆ. ಅತ್ಯುತ್ತಮ ವಿದ್ಯಾರ್ಥಿಗೆ ಇನ್ನು ಕುಲಪತಿ ಆಗುವ ಅವಕಾಶ ಸಿಗಲಿದೆ. ಆತ ಸಂಶೋಧನೆಯನ್ನೂ ಮಾಡುತ್ತಿರಬಹುದು. ಆದರೆ ಶೀಘ್ರದಲ್ಲೇ ವಿದ್ಯಾರ್ಥಿಯೇ ಇಂಟೆರಿಮ್ ಕುಲಪತಿಯಾಗಲಿದ್ದಾರೆ. ಈ ಪ್ರಯೋಗ ಭಾರತದಲ್ಲಿ ಮೊದಲನೆಯದು’ ಎಂದಿದ್ದಾರೆ.
ನಂತರ ರಾಜಭವನವು ಸ್ನಾತಕೋತ್ತರ ಪದವಿ, ಮುಂದುವರಿದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಿದ ಉತ್ತಮ ವಿದ್ಯಾರ್ಥಿಯನ್ನು ಇಂಟೆರಿಮ್ ಕುಲಪತಿಯನ್ನಾಗಿ ಮಾಡಬಹುದು ಎಂದು ಪ್ರತಿಪಾದಿಸಿತು. ಆದಾಗ್ಯೂ, ಶಿಕ್ಷಣ ಜಗತ್ತಿನಲ್ಲಿ ಅನೇಕರು ವಿದ್ಯಾರ್ಥಿಗಳಲ್ಲಿ ‘ಉಪಕುಲಪತಿ’ ಮತ್ತು ‘ಇಂಟೆರಿಮ್ ಕುಲಪತಿ’ ಎಂದರೆ ನಿಖರವಾಗಿ ಏನು ಎಂಬುದರ ಕುರಿತು ಗೊಂದಲಕ್ಕೊಳಗಾಗಿದ್ದಾರೆ. ಈ ವಿಚಾರದ ಕುರಿತಾಗಿ ವಿವಾದ ಉಂಟಾಗಿದೆ.
ರಾಜ್ಯ ಉನ್ನತ ಶಿಕ್ಷಣ ಸಚಿವ ಬ್ರತ್ಯಾ ಬಸು ಅವರು, “ಯಾರು, ಎಲ್ಲಿ, ಏನು ಹೇಳಿದರು ಎಂಬ ಬಗ್ಗೆ ನನಗೆ ಇನ್ನೂ ನಿರ್ದಿಷ್ಟ ಮಾಹಿತಿ ಇಲ್ಲ. ಆದಾಗ್ಯೂ, ವಿದ್ಯಾರ್ಥಿಗಳನ್ನು ಇಂಟೆರಿಮ್ ಕುಲಪತಿಗಳಾಗಿ ನೇಮಿಸುವ ಆಲೋಚನೆಗೆ ಸಂಬಂಧಿಸಿದಂತೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಉಪಕುಲಪತಿಗಳ ಹುದ್ದೆಗೆ ನೇಮಕಾತಿ ಮಾನದಂಡವನ್ನು ನಿರ್ದಿಷ್ಟಪಡಿಸಿದೆ. ಉಪಕುಲಪತಿಯಾಗುವ ವ್ಯಕ್ತಿಗೆ ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ ಹತ್ತು ವರ್ಷಗಳ ಬೋಧನಾ ಅನುಭವ ಇರಬೇಕು ಎಂದು ಅದು ಹೇಳುತ್ತದೆ. 10 ವರ್ಷಗಳ ಕಾಲ ಪ್ರಾಧ್ಯಾಪಕರಾಗಿರುವ ವ್ಯಕ್ತಿಗೆ ಸುಮಾರು 20 ವರ್ಷಗಳ ಒಟ್ಟಾರೆ ಬೋಧನಾ ಅನುಭವವಿರುತ್ತದೆ” ಎಂದಿದ್ದಾರೆ. ಮತ್ತೊಂದೆಡೆ, ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಶಮಿಕ್ ಭಟ್ಟಾಚಾರ್ಯ, “ರಾಜ್ಯಪಾಲರ ಯೋಜನೆಗಳ ಬಗ್ಗೆ ನಾನು ಏನೂ ಹೇಳಲಾರೆ. ಆದರೆ, ಈ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಯ ಸ್ಥಿತಿಗಿಂತ ಈ ಪ್ರಯೋಗಾತ್ಮಕ ವ್ಯವಸ್ಥೆಯು ಉತ್ತಮವಾಗಿದೆ ಎಂದು ತೋರುತ್ತದೆ” ಎಂದಿದ್ದಾರೆ.
ಯುಜಿಸಿಯು ಉಪಕುಲಪತಿಯನ್ನು ಆಯ್ಕೆ ಮಾಡಲು ಉನ್ನತ ಶಿಕ್ಷಣದ ಗಣ್ಯ ವ್ಯಕ್ತಿಗಳೊಂದಿಗೆ ‘ಶೋಧನಾ ಸಮಿತಿ’ಯನ್ನು ರಚಿಸುತ್ತದೆ. ಮೂರರಿಂದ ಐದು ಜನರ ಸಮಿತಿಯಲ್ಲಿ ಉಪಕುಲಪತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸಂಭಾವ್ಯ ಅಭ್ಯರ್ಥಿಗೆ ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಆಡಳಿತದಲ್ಲಿ ಸರಿಯಾದ ಅನುಭವವಿದೆಯೇ ಎಂಬ ಬಗ್ಗೆ ಶೋಧನಾ ಸಮಿತಿಯು ತನಿಖೆ ನಡೆಸುತ್ತದೆ. ವಿದ್ಯಾರ್ಥಿಗಳಿಗೆ ಇಂತಹ ಅನುಭವ ಇರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಉತ್ತರ ಬಂಗಾಳದ ವಿಶ್ವವಿದ್ಯಾನಿಲಯವೊಂದರ ಮಾಜಿ ಉಪಕುಲಪತಿಯೊಬ್ಬರು, “ವಿದ್ಯಾರ್ಥಿಗಳು ಅತ್ಯುತ್ತಮವಾಗಿದ್ದರೂ, ಅವರನ್ನು ಹೇಗೆ ಉಪಕುಲಪತಿಗಳಾಗಿ ಮಾಡವುದು?” ಈ ಮಾತು ನನಗೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − twelve =
Remember me
