ಪಣಜಿ:ಲೇಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಚಾಗಿ ಗಾಳಿಯೇ ತುಂಬಿರುತ್ತದೆ ಎಂಬುದು ಬಹಳ ಹಿಂದಿನಿಂದಲೂ ಕೇಳಿಬರುತ್ತಿರುವ ಮಾತು. ನೋಡಲು ಉಬ್ಬಿದಂತೆ ಕಾಣುವ ಪ್ಯಾಕೆಟ್​ನಲ್ಲಿ ಚಿಪ್ಸ್​ ತುಂಬಿದಂತೆ ಕಾಣಿಸಬಹುದು, ಆದರೆ ವಾಸ್ತವದಲ್ಲಿ ಒಂದು ಕೈ ಹಿಡಿಯಷ್ಟು ಚಿಪ್ಸ್​ ಇರುವುದಿಲ್ಲ. ಅದರಲ್ಲೂ ಒಮ್ಮೊಮ್ಮೆ ಮೂರ್ನಾಲ್ಕು ಚಿಪ್ಸ್​ ನೋಡಿ ಗ್ರಾಹಕರು ಬೇಸರಗೊಂಡಿದ್ದು ಉಂಟು. ಅದೇ ರೀತಿ ಇದೀಗ ಯುವಕನೊಬ್ಬ ಚಿಪ್ಸ್​ ಪ್ಯಾಕೆಟ್​ ಖರೀದಿಸಿದ ಬಳಿಕ ತನಗಾದ ಅನ್ಯಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾನೆ.
ನನಗೆ ಹಸಿವಾದಾಗ ಗೋವಾದ ಪೆಟ್ರೋಲ್ ಬಂಕ್‌ನಲ್ಲಿ ಈ ಚಿಪ್ಸ್​ ಪ್ಯಾಕೆಟ್​ ಖರೀದಿಸಿದೆ. ಪ್ಯಾಕೆಟ್ ತೆರೆದಾಗ ನನಗೆ ಈ ಅಚ್ಚರಿ ಕಾದಿತ್ತು ಎಂದು ಬರೆದುಕೊಂಡಿರುವ ಯುವಕ, ನಾಲ್ಕೇ ನಾಲ್ಕು ಲೇಸ್ ತುಂಡುಗಳನ್ನು ಕೈಯಲ್ಲಿ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾನೆ. ಸದ್ಯ ಈ ಫೋಟೋ ಮತ್ತು ಪೋಸ್ಟ್​ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲೇಸ್ ಕಂಪನಿಯನ್ನು ಅಣಕಿಸಿ ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
ಬಹುತೇಕ ಲೇಸ್ ಪ್ಯಾಕೆಟ್​ಗಳಲ್ಲಿ ಕೇವಲ ಗಾಳಿ ಮಾತ್ರ ಇರುತ್ತದೆ, ಇಂತಹ ಅನ್ಯಾಯಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೆಲವರು ಯುವಕನಿಗೆ ಸಲಹೆ ನೀಡಿದರು. ಇನ್ನು ಕೆಲವರು ಹಾಸ್ಯಮಯ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ.
ಗ್ರಾಹಕರ ವೇದಿಕೆಯಲ್ಲಿ ಇದನ್ನು ವರದಿ ಮಾಡಿ ಮತ್ತು ನೀವು ದೊಡ್ಡ ಪರಿಹಾರ ಹಣವನ್ನು ಪಡೆಯುತ್ತೀರಿ, ನನಗೆ ನಿಮ್ಮ ನೋವು ಅರ್ಥವಾಗುತ್ತದೆ, ನಗಲು ಸಹ ಸಾಧ್ಯವಿಲ್ಲ, ಲೇಸ್ ಪ್ಯಾಕೆಟ್‌ಗಳಲ್ಲಿ ಚಿಪ್ಸ್ ಸಿಗುತ್ತದೆಯೇ?, ನಾನು 50 ಪ್ಯಾಕೆಟ್‌ಗಳಿಂದ 50 ಚಿಪ್‌ಗಳನ್ನು ಪಡೆದುಕೊಂಡಿದ್ದೇನೆ ಎಂದು ಹೀಗೆ ಅನೇಕ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಲೇಸ್​ ಪ್ಯಾಕೆಟ್​ ಅಧಿಕೃತ ತೂಕವು 30 ಗ್ರಾಂ ಲೇಸ್ ಆಗಿದೆ. ಆದರೆ ಸಾಮಾನ್ಯವಾಗಿ ಪ್ಯಾಕೆಟ್​ನಲ್ಲಿ ಕೇವಲ ಎಂಟು ಗ್ರಾಂ ಲೇಸ್ ಮಾತ್ರ ದೊರೆಯುತ್ತದೆ. ಈ ಹಿಂದೆ ಇಂತಹ ಪ್ರಕರಣಗಳು ಗ್ರಾಹಕ ವೇದಿಕೆಗೆ ಬಂದಾಗ ನ್ಯಾಯಾಲಯವು ಪೆಪ್ಸಿಕೋ ಕಂಪನಿಗೆ 50,000 ರೂ.ಗಳನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸಲು ಮತ್ತು ಗ್ರಾಹಕರಿಗೆ ಒಟ್ಟು 7,000 ರೂ. ಪರಿಹಾರ ನೀಡಲು ಆದೇಶ ಮಾಡಿತ್ತು.(ಏಜೆನ್ಸೀಸ್​)
ಕಾಮತೃಷೆ ತೀರಿಸುವಂತೆ ಆತ ನನ್ನನ್ನು ಕೇಳಿದ್ದ! ಅದಿತಿ ರಾವ್​ ಹೈದರಿ ಸ್ಫೋಟಕ ಹೇಳಿಕೆ

ನನಗೆ ಭಾರತ ಅಂದ್ರೆ ಆಗಲ್ಲ ಅಣು ಬಾಂಬ್​ ಹಾಕ್ತೀನಿ ಎಂದ ಬ್ರಿಟಿಷ್​ ಯೂಟ್ಯೂಬರ್​! ಭಾರತೀಯರ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
